ಹಾವೇರಿ ಗೋಲಿಬಾರ್ ದಿನವನ್ನು ರೈತ ಹುತಾತ್ಮ ದಿನವನ್ನಾಗಿ ಘೋಷಿಸಲಿ; ರೈತ ಸಂಘದಿಂದ ಒತ್ತಾಯ

10-RNR-10
Published on

ರಾಣೆಬೆನ್ನೂರ: ಹಾವೇರಿಯಲ್ಲಿ ರಸಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್ ನಡೆಸಿ ಹತ್ಯೆಗೈದು 16 ವರ್ಷ ಮುಗಿದು 17ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಈ ಕರಾಳ ದಿನವನ್ನು ರೈತ ಹುತಾತ್ಮ ದಿನವನ್ನಾಗಿ ಆಚರಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ತಹಸೀಲ್ದಾರ್ ಸುರೇಶಕುಮಾರ ಟಿ. ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ, ಗೋಲಿಬಾರ್‌ನಿಂದ ಇಬ್ಬರು ಅಮಾಯಕ ರೈತರು ಬಲಿಯಾಗಿದ್ದಾರೆ. ಆದ್ದರಿಂದ ಈ ದಿನವನ್ನು ರೈತ ಹುತಾತ್ಮ ದಿನ ಎಂದು ಆಚರಿಸಿದರೆ ಮೃತ ರೈತರ ಆತ್ಮಕ್ಕೆ ಶಾಂತಿ ದೊರೆಯುತ್ತದೆ. ಆದ್ದರಿಂದ ಸರ್ಕಾರ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ, ಶಂಭಣ್ಣ ಕುರುಗೋಡಿ, ಭೀಮೇಶ ಪೂಜಾರ, ಬಸವರಾಜಪ್ಪ ಹೊನ್ನಾಳಿ, ಹರಿಹರಗೌಡ ಪಾಟೀಲ, ಬಸವರಾಜ ಹಲಗೇರಿ, ಸುರೇಶ ಮಲ್ಲಾಪುರ, ಯಲ್ಲಪ್ಪ ಓಲೇಕಾರ, ನಾಗರಾಜ ಮಾಲಗೇರ, ಸುರೇಶಪ್ಪ ಗರಡಿಮನಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net