ಜಿಲ್ಲಾ ಪೊಲೀಸರ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ

26-RNR-04A
Published on

ಹಾವೇರಿ: ಸಮಾಜವು ಬೆಳೆದಂತೆ ಸಮಸ್ಯೆಗಳು ಕ್ಲಿಷ್ಟಕರವಾಗುತ್ತಾ ಹೋಗುತ್ತವೆ. ಇಂತಹ ಕ್ಲಿಷ್ಟಕರ ಸಮಸ್ಯೆಗಳನ್ನು ಭೇದಿಸುವುದರಲ್ಲಿ ಪೊಲೀಸ್​ ಇಲಾಖೆಯು ನಿಸ್ವಾರ್ಥ ಸೇವೆ ನೀಡುತ್ತಿದೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಪೊಲೀಸ್​ ಇಲಾಖೆಯಿಂದ 3 ದಿನಗಳ ಕಾಲ ನಡೆಯಲಿರುವ ಜಿಲ್ಲಾ ಪೊಲೀಸ್​ ವಾಷಿರ್ಕ ಕ್ರೀಡಾಕೂಟಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ಪುರಾತನ ಕಾಲದಿಂದಲೂ ಯಾವುದೇ ಒಂದು ಆಡಳಿತ ವ್ಯವಸ್ಥೆಯಲ್ಲಿ ಅಂದರೆ ಅದು ಚಕ್ರಧಿಪತ್ಯವಾಗಿರಬಹುದು, ರಾಜ್ಯಪ್ರಭುತ್ವವಾಗಿರಬಹುದು, ನಿರಂಕುಶಾಪ್ರಭುತ್ವವಾಗಿರಬಹುದು ಹಾಗೂ ಪ್ರಜಾಪ್ರಭುತ್ವವಾಗಿರಬಹುದು. ಈ ಆಡಳಿತ ವ್ಯವಸ್ಥೆಯಲ್ಲಿ ಎರಡು ಪ್ರಮುಖ ಜವಾಬ್ದಾರಿಗಳಿವೆ. ಮೊದಲನೇಯದು ರಾಜ್ಯಸ್ವಿ ಸಂಗ್ರಹಣೆ ಮತ್ತು ಒಡಾಳಿತ ನಿರ್ವಹಣೆ. 2ನೇಯದು ಪ್ರಾಂತ್ಯಗಳ ರಕ್ಷಣೆ ಮೊದಲನೇ ಕೆಲಸವನ್ನು ಕಂದಾಯ ಇಲಾಖೆ ಮಾಡಿದರೆ ಎರಡನೆಯ ಕೆಲಸವನ್ನು ಪೊಲೀಸ್​ ಇಲಾಖೆಯ ಅಥವಾ ರಕ್ಷಣಾ ಇಲಾಖೆ ಮಾಡಿಕೊಂಡು ಬಂದಿದೆ ಎಂದರು.

ರಾಜ್ಯದ ಪೊಲೀಸರು ಶಿಸ್ತಿಗೆ ಹೆಸರಾಗಿದ್ದಾರೆ. ಪೊಲೀಸ್​ ಇಲಾಖೆಯ ಕರ್ತವ್ಯ ನಿಷ್ಠೆಯಿಂದ ಇಂದು ಸಮಾಜದಲ್ಲಿ ಶಾಂತಿ ನೆಮ್ಮದಿಯಿಂದ ಪ್ರತಿಯೊಬ್ಬ ನಾಗರೀಕನು ತನ್ನ ಬದುಕನ್ನು ಸಾಗಿಸುವಂತಾಗಿದೆ. ಒತ್ತಡದ ಬದುಕು, ವೇಗವಾಗಿ ಓಡುತ್ತಿರುವ ಜನಜೀವನದ ನಡುವೆ ಎಲ್ಲರೂ ಆರೋಗ್ಯದ ಕಡೆ ಗಮನ ಹರಿಸುವುದು ಮುಖ್ಯವಾಗಿದೆ. ಅದರಲ್ಲೂ ವಿಶೇಷವಾಗಿ ಪೊಲೀಸರು ಈ ನಿಟ್ಟಿನಲ್ಲಿ ಹೆಚ್ಚು ಗಮನಹರಿಸಬೇಕು. ಪೊಲೀಸರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕು. ಅದಕ್ಕಾಗಿ ನಿತ್ಯ ವ್ಯಾಯಾಮ, ಯೋಗಾಸನ ಅವಶ್ಯಕ, ಆರೋಗ್ಯಕ್ಕಾಗಿ ಒಂದು ಗಂಟೆ ಮೀಸಲಾಗಿಡಬೇಕು. ಇದರಿಂದ ಏಕಾಗ್ರತೆ ವೃದ್ಧಿಯಾಗಲಿದೆ ಎಂದು ಸಲಹೆ ನೀಡಿದರು.

ಪೊಲೀಸರು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿದ್ದರೆ ಮಾತ್ರ ಜನರ ನಿರೀಕ್ಷೆಗೆ ತಕ್ಕಂತೆ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಕ್ರೀಡಾ ಚಟುವಟಿಕೆಗಳು ಸಹಕಾರಿಯಾಗಲಿವೆ. ಕ್ರೀಡೆಗಳಲ್ಲಿ ಭಾಗವಹಿಸುವಿಕೆ ನಿರಂತರವಾಗಿರಬೇಕು. ಕೇವಲ ಒಂದು ದಿನಕ್ಕೆ ಸೀಮಿತವಾಗಿರಬಾರದು ಎಂದರು.

ಪರೇಡ್​ ಕಮಾಂಡರ ಆರ್​ಪಿಐ ಶಂಕರಗೌಡ ಪಾಟೀಲ ನೇತೃತ್ವದಲ್ಲಿ 5 ಪ್ಲಟುನಗಳಾದ ಹಾವೇರಿ ಉಪ ವಿಭಾಗ, ಶಿಗ್ಗಾಂವಿ ಉಪ ವಿಭಾಗ, ಮಹಿಳಾ ಪೊಲೀಸ್​, ರಾಣೆಬೆನ್ನೂರ ಉಪ ವಿಭಾಗ, ಶಸಸ್ತ್ರ ಮೀಸಲು ಪಡೆ ಹಾವೇರಿ ಇವರಿಂದ ಪಾಥಸಂಚಲನ ನಡೆಯಿತು. ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಂಶು ಕುಮಾರ ಕ್ರೀಡಾ ಜ್ಯೋತಿ ಬೆಳಗಿಸಿದರು. ಪೊಲೀಸ್​ ಪೇದೆ ಸಂತೋಷ ನಾಯ್ಕ ಕ್ರೀಡಾ ಜ್ಯೋತಿ ಹಿಡಿದು ಸಾಗಿದರು.

ಹೆಚ್ಚುವರಿ ಎಸ್ಪಿ ಲಕ್ಷ$್ಮ್ಮಣ ಶಿರಕೋಳ, ಜಿಲ್ಲೆಯ ಎಲ್ಲ ಪೊಲೀಸ್​ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net