ಕಾಂಗ್ರೆಸ್ ಗೆದ್ದರೆ ಕುಕ್ಕರ್ ಬಾಂಬ್ ಎದ್ದು ಕುಳಿತುಕೊಳ್ಳುತ್ತವೆ; ಸಿ.ಟಿ.ರವಿ ವ್ಯಂಗ್ಯ

BJP CT RAvi
Published on

ಹಾವೇರಿ: ಬಿಜೆಪಿ ಗೆದ್ದರೆ ಅಭಿವೃದ್ಧಿ ಕೆಲಸ ಆಗುತ್ತವೆ. ದೇಶ ಸಮೃದ್ಧವಾಗುತ್ತದೆ. ಆದರೆ, ಕಾಂಗ್ರೆಸ್ ಗೆದ್ದರೆ ಕುಕ್ಕರ್ ಬಾಂಬ್ ಎದ್ದು ಕುಳಿತುಕೊಳ್ಳುತ್ತವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.

ನಗರದಲ್ಲಿ ಆಯೋಜಿಸಿದ್ದ ವಿಜಯ ಸಂಕಲ್ಪ ಯಾತ್ರೆ ವೇಳೆ ಮಾತನಾಡಿದ ಅವರು, ನಮಗೆ ದೇಶ ಭಕ್ತ ಮೋದಿ, ರೈತ ನಾಯಕ ಬಿಎಸ್ ವೈ, ಕಾಮನ್ ಮ್ಯಾನ್ ಬೊಮ್ಮಾಯಿ ಬೇಕು ಎಂದರು.

ಕಾಂಗ್ರೆಸ್ ನವರು ಯಾವ ಮುಖ ಇಟ್ಟುಕೊಂಡು ಓಟು ಕೇಳೋಕೆ ಬರುತ್ತಾರೆ. ಹಾವೇರಿಗೆ ಮೆಡಿಕಲ್ ಕಾಲೇಜು ಕಾಂಗ್ರೆಸ್ ನವರು ಕೊಟ್ಟರಾ ? ಇಲ್ಲ ಅವರು ಅದನ್ನು ಗದಗಕ್ಕೆ ಕಳುಹಿಸಿದರು.
ಬಿಜೆಪಿ ಸರ್ಕಾರ ಬಂದ ಮೇಲೆ ಮೆಡಿಕಲ್ ಕಾಲೇಜು, ಹಾವೇರಿ ಹಾಲು ಒಕ್ಕೂಟ, ಬ್ಯಾಡಗಿ ಸಂಸ್ಕರಣಾ ಘಟಕ, ಹಾವೇರಿ ವಿವಿ, ಇಂಜಿನಿಯರಿಂಗ್ ಕಾಲೇಜು, ಬೈಪಾಸ್ ರಸ್ತೆ ಕೊಟ್ಟಿತು. ಎಲ್ಲವನ್ನೂ ಮಾಡಿದ್ದು, ಬಿಜೆಪಿ ಸರ್ಕಾರ ಹಾಗಾಗಿ, ನೀವೆಲ್ಲ ಬಿಜೆಪಿಗೆ ಓಟು ಕೊಡಬೇಕು. ಕಾಂಗ್ರೆಸ್ ಗೆದ್ದರೆ ಹಾವೇರಿ, ರಾಜ್ಯ, ದೇಶದ ಜನರ ಸೋಲು ಎಂದರು.

ಕಮಲ ಅರಳಿಸುವ‌ ಸಂಕಲ್ಪ ನೀವು ಮಾಡಿ, ಅಭಿವೃದ್ಧಿ ಕಾರ್ಯ ನಡೆಸಲು, ರೈತಪರ ಮಹಿಳೆಯರ ಹಿಂದುಳಿದವರ ಸರ್ಕಾರ ಬರಲು ಅವಕಾಶ ಮಾಡಿಕೊಡಿ ಎಂದರು.

ನಾವು ಜನ ಸಂಕಲ್ಪ ಯಾತ್ರೆ ಮಾಡಿದೆವು. ನೀವು ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿದ್ದೀರಿ ಎಂದರು.

ಈ ವೇಳೆ ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ, ಸಂಸದ ಶಿವಕುಮಾರ ಉದಾಸಿ, ಶಾಸಕ ನೆಹರು ಓಲೇಕಾರ, ಸಿದ್ದರಾಜ ಕಲ್ಲಕೋಟಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net