ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ 21 ಶಿಕ್ಷಕರು ಆಯ್ಕೆ; ಸೆ. 5ರಂದು ನಡೆಯಲಿದೆ ಪ್ರಶಸ್ತಿ ವಿತರಣೆ ಸಮಾರಂಭ

Published on

ಹಾವೇರಿ: ಪ್ರಸಕ್ತ 2023-24ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ತಲಾ ಏಳು ಶಿಕ್ಷಕರು ಸೇರಿ ಒಟ್ಟು 21 ಶಿಕ್ಷಕರು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಡಿಡಿಪಿಐ ಗಿರೀಶ ಪದಕಿ ತಿಳಿಸಿದ್ದಾರೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ಬ್ಯಾಡಗಿ ತಾಲೂಕು ತಿಮ್ಮಾಪೂರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ನಾಗರಾಜ ಶಿಗ್ಗಾಂವಿ, ಹಾನಗಲ್ಲ ತಾಲೂಕಿನ ನರೇಗಲ್ಲ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಯ ಶಿಕ್ಷಕಿ ಶೀರಿನತಾಜ ಕೋಡ, ಸವಣೂರ ತಾಲೂಕಿನ ಕಲ್ಮಡವು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ ಹುಬ್ಬಳ್ಳಿ, ಹಿರೇಕೆರೂರು ತಾಲೂಕು ಮಾಸೂರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ತಿರಕಪ್ಪ ಮರದ, ಶಿಗ್ಗಾಂವಿ ತಾಲೂಕು ಜಾಲಿಕಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವೀರಣ್ಣ ದೇಸೂರ, ಹಾವೇರಿ ತಾಲೂಕು ಕನವಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಹಮ್ಮದ ಗೌಸ್ ಎಂ.ಬೇವಿನಮರದ ಹಾಗೂ ರಾಣೆಬೆನ್ನೂರ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನಂ.7ರ ಶಿಕ್ಷಕಿ ಶೋಭಾ ಬಿ. ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ಬ್ಯಾಡಗಿ ತಾಲೂಕಿನ ಖುರ್ದಕೋಡಿಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪರಶುರಾಮ ತಗಡಿನಮನಿ, ಹಾವೇರಿ ತಾಲೂಕಿನ ಕನಕಾಪೂರ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಸ್.ಎನ್. ಹಂಡಿ, ಹಾನಗಲ್ಲ ತಾಲೂಕಿನ ಡೊಳ್ಳೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಿವಬಸಯ್ಯ ಚಿಲ್ಲೂಮಠ, ಹಿರೇಕೆರೂರು ತಾಲೂಕು ಚಿಕ್ಕಬೂದಿಹಾಳ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಗೌರಮ್ಮ ಕಾಕೋಳ, ಸವಣೂರ ತಾಲೂಕಿನ ಹಿರಿಯ ಉರ್ದು ಪ್ರಾಥಮಿಕ ಶಾಲೆಯ ಶಿಕ್ಷಕ ಎಂ.ಎ.ಮುಲ್ಲಾ, ಶಿಗ್ಗಾಂವ ತಾಲೂಕಿನ ಕಬನೂರ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ರೇಣುಕಾ ಹಿರೇಗೌಡರ ಹಾಗೂ ರಾಣೆಬೆನ್ನೂರ ತಾಲೂಕಿನ ವೆಂಕಟಾಪೂರ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಾದೇವಪ್ಪ ಹಲವಾಗಲ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರೌಢ ಶಾಲಾ ವಿಭಾಗ: ಬ್ಯಾಡಗಿ ತಾಲೂಕಿನ ಕಲ್ಲೇದೇವರ ಕಲ್ಮೇಶ್ವರ ಪ್ರೌಢಶಾಲೆ ಶಿಕ್ಷಕ ಬಸವರಾಜ ಸಿ.ಬಿ., ಹಾವೇರಿ ತಾಲೂಕಿನ ಹಾವನೂರ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಮಹಾಂತೇಶ ಮರಿಗೂಳಪ್ಪನವರ, ಹಿರೇಕೆರೂರು ತಾಲೂಕಿನ ಹಂಸಭಾವಿ ದುರ್ಗದ ಪ್ರೌಢಶಾಲೆ(ಅನುದಾನಿತ) ಶಿಕ್ಷಕ ಎಸ್.ಎಂ.ಹೊಸಮನಿ, ಸವಣೂರ ತಾಲೂಕಿನ ಜಲ್ಲಾಪೂರ ಬ.ಬ.ಖಾನಗೌಡ್ರ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ನಿಂಗಪ್ಪ ಮೇಗಲಮನಿ, ಶಿಗ್ಗಾಂವಿ ತಾಲೂಕಿನ ನೀರಲಗಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಗುರುರಾಜ ಹುಚ್ಚಣ್ಣನವರ ಹಾಗೂ ರಾಣೆಬೆನ್ನೂರ ವೀರಮದಕರಿನಾಯಕ ಹೆಣ್ಣು ಮಕ್ಕಳ ಪ್ರೌಢಶಾಲೆ ಶಿಕ್ಷಕ ಪ್ರಭು ಹಾಲಪ್ಪ ಎರೇಶಿಮಿ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net