ಬಾಲ್ಯ ವಿವಾಹ ಹೆಚ್ಚಾಗಿರುವುದು ಕಳವಳಕಾರಿ ಸಂಗತಿ; ಜಿಲ್ಲಾಧಿಕಾರಿ

29-RNR-07
Published on

ಹಾವೇರಿ: ಬಾಲ್ಯ ವಿವಾಹ ಹಾಗೂ ಬಾಲಕಾಮಿರ್ಕ ಪದ್ದತಿ, ಬಾಲಗಭಿರ್ಣಿಯರ ಸಂಖ್ಯೆ ಹಾವೇರಿ ಜಿಲ್ಲೆಯಲ್ಲಿ ಹೆಚ್ಚಾಗಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ರಾಣೆಬೆನ್ನೂರ ವನಸಿರಿ ಗ್ರಾಮೀಣ ಅಭಿವೃದ್ದಿ ಸಂಸ್ಥೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ನಗರದ ಜಿಲ್ಲಾ ಗುರುಭವನದಲ್ಲಿ ಶನಿವಾರ ಏರ್ಪಡಿಸಿದ್ದ ಹೆಣ್ಣುಮಕ್ಕಳ ಶಿಕ್ಷಣದ ಮೂಲಕ ಸಶಕ್ತೀಕರಣ ಹಾಗೂ ಶೈಕ್ಷಣಿಕ ಕಲಿಕಾ ಸಾಮಗ್ರಿಗಳ ವಿತರಣೆ ಹಾಗೂ ಬಾಲ್ಯವಿವಾಹ, ಬಾಲಕಾಮಿರ್ಕ ಪದ್ದತಿ ನಿಷೇಧ, ಪೋಕ್ಸೊ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಲಿಂಗತಾರತಮ್ಯೆ, ಶಿಸು ಗರ್ಭಧಾರಣೆ ಹತ್ಯೆಯಂತಹ ಸಾಮಾಜಿಕ ಅನಿಷ್ಠಗಳು ದೂರವಾಗಬೇಕಾದರೆ ಸರ್ಕಾರದ ಜೊತೆಗೆ ಸರ್ಕಾರೇತರ ಸಂಸ್ಥೆಗಳು ಹಾಗೂ ಸಮುದಾಯಗಳ ಸಹಭಾಗಿತ್ವ ಅಗತ್ಯವಿದೆ. ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎಂದರು.

ಡಿಡಿಪಿಐ ಸುರೇಶ ಹುಗ್ಗಿ ಮಾತನಾಡಿ, ಮಕ್ಕಳ ಶಿಕ್ಷಣಕ್ಕೆ ಈಗ ಯಾವುದೆ ಅಡ್ಡಿ ಆತಂಕಗಳಿಲ್ಲ. ಸರ್ಕಾರದ ಯೋಜನೆಗಳಿಂದ ಸರ್ಕಾರಿ ಶಾಳೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಿಸಿ ಬಡತನ ಶಾಪ ಅಲ್ಲ ಅದೊಂದು ವರದಾನ ಎಂದು ತಿಳಿಯಬೇಕು. ಎಲ್ಲ ಸೌಲಭ್ಯಗಳು ಉಚಿತವಾಗಿ ಮಕ್ಕಳಿಗೆ ದೊರೆಯುತ್ತವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಸದುಪಯೋಗವಾಗಬೇಕಿದೆ. ಸಾಮಾಜಿಕ ಪಿಡುಗು ನಿವಾರಣೆ ಸಮುದಾಯದ ಜವಾಬ್ದಾರಿಯೂ ಇದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದತಿರ್, ಹಿರಿಯ ಸಾಹಿತಿಗಳಾದ ಸತೀಶ ಕುಲಕಣಿರ್, ಹನುಮಂತಗೌಡ ಗೊಲ್ಲರ, ಶೇಖರ ಭಜಂತ್ರಿ, ಬಿಇಒ ಎಂ.ಎಚ್​. ಪಾಟೀಲ, ಪ್ರಮುಖರಾದ ಬಸವರಾಜ ಪೂಜಾರ, ಜಿ.ಎಸ್​. ರಾಮಚಂದ್ರ, ಹಬೀಬಬಾನು ಹಾನಗಲ್ಲ, ರೇಣುಕಾ ಗುಡಿಮನಿ, ಜುಬೆದಾ ನಾಯ್ಕ, ಮಂಜುನಾಥ ಕೆ., ಸುನಿತಾ ಜಿ. ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net