ಮೊದಲ ದಿನವೇ ಹತ್ತು ನಾಮಪತ್ರ ಸಲ್ಲಿಕೆ

Published on

ಹಾವೇರಿ: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೊದಲ ದಿನವಾದ ಏ.13ರಂದು ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಪಕ್ಷಗಳ ಏಳು ಅಭ್ಯರ್ಥಿಗಳಿಂದ ಒಟ್ಟು ಹತ್ತು ನಾಮಪತ್ರಗಳು ಸಲ್ಲಿಕೆಯಾಗಿವೆ.
ಹಾನಗಲ್ಲ, ಹಾವೇರಿ ಹಾಗೂ ಬ್ಯಾಡಗಿ ಕ್ಷೇತ್ರದಿಂದ ತಲಾ ಎರಡು, ಶಿಗ್ಗಾಂವಿ ಕ್ಷೇತ್ರದಿಂದ ಮೂರು ಹಾಗೂ ರಾಣೆಬೆನ್ನೂರ ಕ್ಷೇತ್ರದಿಂದ ಒಂದು ನಾಮಪತ್ರ ಸಲ್ಲಿಕೆಯಾಗಿದೆ. ಹಿರೇಕೆರೂರ ಕ್ಷೇತ್ರದಿಂದ ಮೊದಲ ದಿನ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಹಾವೇರಿ ಕ್ಷೇತ್ರದಿಂದ ರುದ್ರಪ್ಪ ಲಮಾಣಿ ಎರಡು ನಾಮಪತ್ರ, ಬ್ಯಾಡಗಿ ಕ್ಷೇತ್ರದಿಂದ ಬಸವರಾಜ ಶಿವಣ್ಣನವರ ಎರಡು ನಾಮಪತ್ರ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ರಾಣೆಬೆನ್ನೂರ ಕ್ಷೇತ್ರದಿಂದ ಚನ್ನವೀರಯ್ಯ ಹೊಳಗುಂದಿಮಠ ಒಂದು ನಾಮಪತ್ರ, ಹಾನಗಲ್ಲ ಕ್ಷೇತ್ರದಿಂದ ಕರ್ನಾಟಕ ಪ್ರದೇಶ ಜನತಾದಳ (ಜಾತ್ಯಾತೀತ) ಪಕ್ಷದಿಂದ ಮನೋಹರ ತಗಶೀಲ್ದಾರ ಹಾಗೂ ಭಾರತೀಯ ಜನತಾ ಪಕ್ಷದಿಂದ ಪುಂಡಲೀಕ ಭದ್ರಾವತಿ ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ.
ಶಿಗ್ಗಾಂವಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಡಾ.ಕೆ.ಪದ್ಮರಾಜನ್, ಇಂಡಿಯನ್ ಮೂವ್‌ಮೆಂಟ್ ಪಾರ್ಟಿಯಿಂದ ಖಾಜಾಮೋದಿನ ಗುಡಗೇರಿ ಎರಡು ನಾಮಪತ್ರ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net