ಬೆಂಗಳೂರು: ಬಿಗ್ಬಾಸ್ ಶೋ (BBK 12) ಬಗ್ಗೆ ವಿಶೇಷವಾಗಿ ಹಾಗೂ ಹೆಚ್ಚೇನು ಹೇಳಬೇಕಿಲ್ಲ. ಇದು ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ. ವಿವಾದಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುವ ಈ ಕಾರ್ಯಕ್ರಮ, ವೀಕ್ಷಕರಿಂದ ಭಾರಿ ಜನಪ್ರಿಯತೆ ಗಿಟ್ಟಿಸಿಕೊಂಡಿದೆ. ಪ್ರಸ್ತುತ ನಡೆಯುತ್ತಿರುವ 12ನೇ ಸೀಸನ್ ಇದೀಗ ಅಂತಿಮ ಘಟ್ಟಕ್ಕೆ ತಲುಪಿದ್ದು, ಗಿಲ್ಲಿ ನಟ, ಅಶ್ವಿನಿ, ರಘು ಸೇರಿ ಒಟ್ಟು ಆರು ಮಂದಿ ಫಿನಾಲೆ ರೇಸ್ನಲ್ಲಿದ್ದಾರೆ. ಇವರ ಪೈಕಿ ಯಾರ ಮುಡಿಗೆ ಗೆಲುವಿನ ಕಿರೀಟ ಸೇರಲಿದೆ ಎಂಬುದು ಭಾನುವಾರದ (ಜ.18) ಗ್ರ್ಯಾಂಡ್ ಫಿನಾಲೆ ಸಂಚಿಕೆಯ ಕೊನೆಯಲ್ಲಿ ಸ್ಪಷ್ಟವಾಗಿ ತಿಳಿಯಲಿದೆ. ಮಿಡ್ವೀಕ್ ಎಲಿಮಿನೇಷನ್ನಲ್ಲಿ ಬಿಗ್ ಮನೆಯಿಂದ ಎಲಿಮಿನೇಟ್ ಆಗಿ ಹೊರಹೋದ ಬಳಿಕ ಬಿಗ್ ಬಾಸ್ ಸೀಸನ್ 12ರ ಫಿನಾಲೆ ವೇದಿಕೆಯಲ್ಲಿ ಆರು ಮಂದಿ ಇರಲಿದ್ದಾರೆ ಎಂಬುದು ಖಚಿತವಾಯಿತು. ಈ ರೇಸ್ನಲ್ಲಿ ಗಿಲ್ಲಿ ನಟ, ಅಶ್ವಿನಿ, ಮ್ಯೂಟೆಂಟ್ ರಘು, ರಕ್ಷಿತಾ, ಕಾವ್ಯ ಮತ್ತು ಧನುಷ್ ಇದ್ದಾರೆ. ಈ ಆರು ಫೈನಲಿಸ್ಟ್ಗಳ ಪೈಕಿ ಯಾರು ಶನಿವಾರದ ಪ್ರೀ-ಫಿನಾಲೆಯಲ್ಲಿ ಎಲಿಮಿನೇಟ್ ಆಗ್ತಾರೆ ಮತ್ತು ಯಾರು ಐವರು ಟಾಪ್ 5 ಆಗಿ ಕೊನೆಯ ಸಂಚಿಕೆಗೆ ತಲುಪುತ್ತಾರೆ ಎಂಬುದು ವೀಕ್ಷಕರ ಕುತೂಹಲ.