

ಬೆಂಗಳೂರು: ಇತ್ತೀಚೆಗೆ ಮೈಕ್ರೋಸಾಫ್ಟ್ನಿಂದ ಬಂದ ವಿಂಡೋಸ್ 10 ಮತ್ತು 11ರಲ್ಲಿ ಹೊಸ ಸೆಕ್ಯೂರಿಟಿ ಅಪ್ಡೇಟ್ಸ್ಗಳನ್ನು ಹೊಂದಿದೆ. ಉದಾಹರಣೆಗೆ ವಿಂಡೋಸ್ 10ರಲ್ಲಿ ಅಪ್ಲಿಕೇಶನ್ ಮತ್ತು ಫೈಲ್ಗಳನ್ನು ಓಪನ್ ಮಾಡಲು ಹೊಸ ಮಾರ್ಗವನ್ನು ಹೊಂದಿದೆ. ಬಹಳಷ್ಟು ಬಳಕೆದಾರರು ಆಪರೇಟಿಂಗ್ ಸಿಸ್ಟಮ್ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಮತ್ತು ಪಾಸ್ವರ್ಡ್ಗಳನ್ನು ಕಳೆದುಕೊಂಡಿದ್ದಾರೆ.
ವಿಂಡೋಸ್ 10 ಮತ್ತು 11ರಲ್ಲಿ ಮರೆತುಹೋದ ಪಾಸ್ವರ್ಡ್ ಅನ್ನು ಮರು ಪಡೆಯಲು ಮೈಕ್ರೋಸಾಫ್ಟ್ ಹಲವಾರು ಆಯ್ಕಗಳನ್ನು ಸೇರಿಸಿದೆ. ಯುಎಸ್ಬಿ (USB) ಕೀ ಮುಖಾಂತರ ಪಾಸ್ವರ್ಡ್ ಅನ್ನು ಮರುಹೊಂದಿಸಬಹುದು. ವಿಂಡೋಸ್ 10ರಲ್ಲಿ ಆನ್-ಸ್ಕ್ರೀನ್ ಆಯ್ಕೆ ಅಥವಾ Windows.comನಿಂದ ಮೈಕ್ರೋಸಾಫ್ಟ್ ಆಯ್ಕೆಯನ್ನು ಡೌನ್ಲೋಡ್ ಮಾಡಬಹುದು. ವಿಂಡೋಸ್ 7ರಲ್ಲಿ ಈ ಆಯ್ಕೆ ಪಡೆಯಲು ಆಪರೇಟಿಂಗ್ ಸಿಸ್ಟಮ್ ಅಪ್ಡೇಟ್ ಮಾಡಬೇಕು.
ಈ ಆಯ್ಕೆಯನ್ನು ಸಕ್ರಿಯಗೊಳಿಸಿದ ನಂತರ ನಿಮ್ಮ ಖಾತೆಯನ್ನು ಪ್ರವೇಶಿಸಲು ಮತ್ತು ಪಾಸ್ವರ್ಡ್ ರೀಸೆಟ್ ಮಾಡಲು ಯುಎಸ್ಬಿ ಕೀಯನ್ನು ಬಳಸಬಹುದು. ಯುಎಸ್ಬಿ ಕೀಯನ್ನು ಪಿಸಿ ಅಥವಾ ಸ್ಥಿರ ಇಂಟರ್ನೆಟ್ ಸಂಪರ್ಕ್ ಇದ್ದಾಗ ಪ್ಲಗ್ ಮಾಡಬೇಕು.
ನೀವು ತಡವಾಗಿದ್ದರೆ ಅಥವಾ ಸಿಸ್ಟಮ್ ತೆರೆದಿಲ್ಲದಿದ್ದರೆ ಯೋಚನೆ ಮಾಡುವ ಅಗತ್ಯವಿಲ್ಲ. ಪಾಸ್ವರ್ಡ್ ರೀಸೆಟ್ ಮಾಡಿ ಕಂಪ್ಯೂಟರ್ ಅನ್ನು ಓಪನ್ ಮಾಡಬಹುದು. ಪಾಸ್ವರ್ಡ್ ರೀಸೆಟ್ ಮಾಡಲು ಕೆಳಗೆ ಹೇಳಿರುವಂತೆ ಮಾಡಿ.
ವಿಂಡೋಸ್ 11ರ ಲೋಕಲ್ ಅಕೌಂಟ್ ಪಾಸ್ವರ್ಡ್ ರೀಸೆಟ್:
1. ಸೈನ್-ಇನ್ ಸ್ಕ್ರೀನಲ್ಲಿ, ಪಾಸ್‌ವರ್ಡ್ ಮರುಹೊಂದಿಸಿ ಲಿಂಕ್ ಅನ್ನು ಕ್ಲಿಕ್ ಮಾಡಿ. ಪಿನ್ ಬಳಸಲು ಬಯಸಿದರೆ, ಪಿನ್ ಸೈನ್-ಇನ್ ಸಮಸ್ಯೆಗಳನ್ನು ನೋಡಿ. ನೀವು ನೆಟ್‌ವರ್ಕ್ ಮಾಡಲಾದ ಕೆಲಸದ ಸಾಧನವನ್ನು ಬಳಸುತ್ತಿದ್ದರೆ, ನಿಮ್ಮ ಪಾಸ್‌ವರ್ಡ್ ಅಥವಾ ಪಿನ್ ಅನ್ನು ಮರುಹೊಂದಿಸುವ ಆಯ್ಕೆಯನ್ನು ನೀವು ನೋಡದೇ ಇರಬಹುದು. ಆ ಸಂದರ್ಭದಲ್ಲಿ ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ.
2. ಸೆಕ್ಯೂರಿಟಿ ಪ್ರಶ್ನೆಗಳನ್ನು ಉತ್ತರಿಸಿ.
3. ಹೊಸ ಪಾಸ್ವರ್ಡ್ ಸೆಟ್ ಮಾಡಿ.
4. ಹೊಸ ಪಾಸ್ವರ್ಡ್ ಮೂಲಕ ಸೈನ್ ಇನ್ ಆಗಿ.
ವಿಂಡೋಸ್ 10ರ ಲೋಕಲ್ ಅಕೌಂಟ್ ಪಾಸ್ವರ್ಡ್ ರೀಸೆಟ್:
1. ಸೈನ್-ಇನ್ ಸ್ಕ್ರೀನಲ್ಲಿ, ಪಾಸ್‌ವರ್ಡ್ ಮರುಹೊಂದಿಸಿ ಲಿಂಕ್ ಅನ್ನು ಕ್ಲಿಕ್ ಮಾಡಿ. ಬದಲಿಗೆ ನೀವು ಒಂದನ್ನು ಬಳಸಿದರೆ ಪಿನ್ ಸೈನ್-ಇನ್ ಸಮಸ್ಯೆಗಳನ್ನು ನೋಡಿ. ನೆಟ್‌ವರ್ಕ್‌ಗೆ ಸಂಪರ್ಕಹೊಂದಿರುವ ಸಾಧನವನ್ನು ನೀವು ಬಳಸುತ್ತಿದ್ದರೆ ನಿಮ್ಮ ಪಾಸ್‌ವರ್ಡ್ ಅಥವಾ ಪಿನ್ ಅನ್ನು ಮರುಹೊಂದಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಈ ಸಂದರ್ಭದಲ್ಲಿ ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ. ಏಜೆನ್ಸೀಸ್