

Suicide Plant: ಪ್ರಪಂಚದಾದ್ಯಂತ ಹಸಿರನ್ನು ಉಳಿಸಲು, ಅನೇಕ ರೀತಿಯ ಸಸ್ಯ-ಮರಗಳನ್ನು ನೆಡಲಾಗುತ್ತದೆ. ಇದು ಪ್ರಕೃತಿಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಮರಗಳು ಮತ್ತು ಸಸ್ಯಗಳಿಂದಾಗಿಯೇ ಮಾನವ ಜೀವನ ಅಸ್ತಿತ್ವದಲ್ಲಿದೆ. ಆದರೆ, ಜಗತ್ತಿನಲ್ಲಿ ತುಂಬಾ ವಿಷಕಾರಿಯಾದ ಅನೇಕ ಸಸ್ಯಗಳಿವೆ. ಒಂದು ಸಸ್ಯವಿದ್ದು, ಅದು ತುಂಬಾ ಅಪಾಯಕಾರಿಯಾಗಿದ್ದು, ಅದನ್ನು ಮುಟ್ಟಿದ ಮಾತ್ರಕ್ಕೆ ಅಸಹನೀಯ ನೋವು ಉಂಟಾಗುತ್ತದೆ. ಅಲ್ಲದೆ, ಅದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತದೆ. ಅದಕ್ಕಾಗಿಯೇ ಇದನ್ನು ಆತ್ಮಹತ್ಯಾ ಸಸ್ಯ(suicide tree) ಎಂದೂ ಕರೆಯುತ್ತಾರೆ.
ಜಗತ್ತಿನಲ್ಲಿ ಕಂಡುಬರುವ ಈ ಗಿಡದ ಹೆಸರು ಜಂಪೈ, ಜಂಪೈ ಎಂದು. ಈ ಸಸ್ಯವೂ ನೋಡುವುದಕ್ಕೆ ತುಂಬಾ ಸಾಮಾನ್ಯವಾಗಿ ಕಾಣುತ್ತದೆ. ಆದರೆ, ಇದು ತುಂಬಾ ವಿಷಕಾರಿಯಾಗಿದೆ. ಅಲ್ಲದೆ, ಇದನ್ನು ಯಾರದಾರು ಮಟ್ಟಿದ್ದರೆ ಅವರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ.
ಕೆಲ ವರ್ಷಗಳ ಹಿಂದೆ ವಿಜ್ನಾನಿ ಮರೀನಾ ಹರ್ಲಿ ಎಂಬುವವರು ಈ ಸಸ್ಯದ ಬಗ್ಗೆ ಮಾಹಿತಿ ನೀಡಿದ್ದರು. ಅಲ್ಲದೆ, ಈ ಸಸ್ಯದಿಂದಾಗಿ ಅನೇಕ ವರ್ಷಗಳ ಕಾಲ ಅನುಭವಿಸಿದ್ದಾರೆ ಸಂದರ್ಶನವೊಂದರಲ್ಲಿ ಉಲ್ಲೇಖಸಿದ್ದಾರೆ. '' ಒಮ್ಮೆ ಆಸ್ಟ್ರೇಲಿಯಾದ ಮಳೆಕಾಡುಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದೆ. ಇಲ್ಲಿನ ಕಾಡಿನ ಸಸ್ಯಗಳು ಅತ್ಯಂತ ಅಪಾಯಕಾರಿ ಎಂದು ತಿಳಿದಿದ್ದೆ. ಆದ್ದರಿಂದ ನಾನು ಬಾಡಿಸೂಟ್ ಮತ್ತು ವೆಲ್ಡಿಂಗ್ ಗ್ಲೌಸ್ಗಳನ್ನು ಧರಿಸಿಕೊಂಡಿದ್ದೆ. ಈ ಗಿಡವನ್ನು ಮುಟ್ಟಿದೆ. ಬಳಿಕ ದೇಹದಲ್ಲಿ ವಿಚಿತ್ರ ಭಾವನೆ ಉಂಟಾಗಿತು. ಬಳಿಕ ಏಕಕಾಲದಲ್ಲಿ ನನಗೆ ವಿದ್ಯುತ್ ಪ್ರವಹಿಸಿದಂತೆ ಭಾಸವಾಗಿ ನೆಲಕ್ಕೆ ಬಿದ್ದೆ. ಬಳಿಕ ನನ್ನ ದೇಹ ಕೆಂಪುಬಣ್ಣಕ್ಕೆ ತಿರುಗಿತು ಎಂದು ಅಲ್ಲಿದ್ದರು ಹೇಳಿದ್ದರು'' ಎಂದು ಮರೀನಾ ಹರ್ಲಿ ಹೇಳಿಕೊಂಡಿದ್ದಾರೆ.
ಮುಂದುವೆರೆದು.. ಇದರ ಪರಿಣಾಮ ಕಡಿಮೆ ಮಾಡಲು, ಅವರನ್ನು ಹಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಬದುಕುಳಿಯಲು ಕೆಲದಿನ ಸ್ಟೀರಾಯ್ಡ್ ತೆಗೆದುಕೊಳ್ಳಬೇಕಾಗಿತ್ತು ಎಂದು ಸಂದರ್ಶನದಲ್ಲಿ ಉಲ್ಲೇಖಸಿದ್ದರು.
ಆಸ್ಟ್ರೇಲಿಯಾ ಜತೆಗೆ ಈ ಸಸ್ಯ ಇಂಡೋನೆಷಿಯಾ ಮತ್ತು ಮೊಲಿಕ್ಕಾಸ್ನ ದೇಶದ ಕಾಡುಗಳಲ್ಲಿ ಕಂಡು ಬರುತ್ತಿದೆ. ಸೂಸೈಡ್ ಪ್ಲಾಂಟ್ ಜತೆಗೆ ಇದನ್ನೂ ಸ್ಟಿಂಗಿಂಗ್ ಬ್ರಷ್, ಜಿಂಪೈ ಸ್ಟಿಂಗರ್ ಮತ್ತು ಮೂನ್ ಲೈಟರ್ ಎಂದು ಕರೆಯುತ್ತಾರೆ.
ಈ ಸಸ್ಯದ ಎಲೆಗಳು ಸಣ್ಣ ಮುಳ್ಳುಗಳನ್ನು ಹೊಂದಿರುತ್ತವೆ. ಇವುಗಳಲ್ಲಿ ನ್ಯೂರೋಟಾಕ್ಸಿನ್ ಎಂಬ ವಿಷವಿದೆ ಮತ್ತು ಈ ಮುಳ್ಳುಗಳ ಮೂಲಕವೇ ವಿಷವು ದೇಹವನ್ನು ಪ್ರವೇಶಿಸುತ್ತದೆ. ಇದರ ಪರಿಣಾಮ ನೇರವಾಗಿ ನರಮಂಡಲದ ಮೇಲೆ ಬೀಳುತ್ತದೆ. ಇದರಿಂದಾಗಿ, ಒಬ್ಬ ವ್ಯಕ್ತಿಯು ಸಾಯಬಹುದು. ಅದರ ಮುಳ್ಳಿನಿಂದ ಚುಚ್ಚಿದ ನಂತರ, ನೋವು 30 ನಿಮಿಷಗಳಲ್ಲಿ ವೇಗವಾಗಿ ಹೆಚ್ಚಾಗಲು ಪ್ರಾರಂಭಿಸುತ್ತದೆ.(ಏಜೆನ್ಸೀಸ್)