ಹಕ್ಕಿಗಳಂತೆ ಹಾರಿ ಬಂದು ಕಚ್ಚುತ್ತದೆ ಈ ಹಾವು! ಅಪರೂಪದ ವಿಡಿಯೋ ನೋಡಿ

snkae
Published on

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಹಾವುಗಳ ಹಲವು ವಿಡಿಯೋಗಳು ಹರಿದಾಡುತ್ತಿವೆ. ಕೆಲವೊಮ್ಮೆ ಹಾವುಗಳು ತಮ್ಮ ನಡವಳಿಕೆಯಿಂದ ಜನರನ್ನು ಆಘಾತಗೊಳಿಸುತ್ತವೆ. ಇಂತಹದ್ದೆ ಒಂದು ವಿಡಿಯೋ ವೈರಲ್​ ಆಗಿದೆ.

ಈ ವಿಡಿಯೋವನ್ನು ಭಾರತೀಯ ಆಡಳಿತ ಸೇವೆಯ ಅಧಿಕಾರಿ ಸುಪ್ರಿಯಾ ಸಾಹು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ವೀಡಿಯೊ ಜೊತೆಗೆ, ಅವರು "ಇನ್‌ಕ್ರೆಡಿಬಲ್" ಎಂದು ಬರೆದಿದ್ದಾರೆ. ಈ ವಿಡಿಯೋ ನೋಡಿದವರೆಲ್ಲಾ ಬೆರಗಾಗಿದ್ದಾರೆ.

ವಿಡಿಯೋದಲ್ಲಿ ಹಾವೊಂದು ಮನೆಯ ಮೇಲ್ಛಾವಣಿಯ ಮೇಲಿದೆ. ಸ್ವಲ್ಪ ಹೊತ್ತಿನ ನಂತರ ಹಾವು ತಾರಸಿಯ ತುದಿ ತಲುಪಿ ಅಲ್ಲಿಂದ ಕೆಳಗೆ ಜಿಗಿಯಿತು. ಗಾಳಿಗೆ ಹಾವು ಹಾರಿ ರಸ್ತೆಗೆ ಬಿದ್ದಿತು. ಈ ಅಪರೂಪದ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ ತಕ್ಷಣ ವೈರಲ್ ಆಗಿದೆ. ಹಾವು ಕೂಡ ಹೀಗೆ ನೆಗೆಯಬಹುದೇ ಎಂದು ಜನ ಆಶ್ಚರ್ಯ ಪಡುತ್ತಿದ್ದಾರೆ.

ಕಳೆದ ಕೆಲವು ದಿನಗಳಿಂದ ಹಾವುಗಳಿಗೆ ಸಂಬಂಧಿಸಿದ ಅನೇಕ ವೀಡಿಯೊಗಳು ವೈರಲ್ ಆಗುತ್ತಿವೆ. ಅಲ್ಲದೆ ಹಾವು ಕಡಿತದಿಂದ ಸಾಯುವವರ ಸಂಖ್ಯೆಯೂ ಅಧಿಕವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net