ಕ್ರೀಡಾಕೂಟದಲ್ಲಿ ಹಟ್ಟಿಹೊಳೆ ನಿರ್ಮಲ ವಿದ್ಯಾಭವನ ಶಾಲೆಗೆ ಜಯ

Published on

ಸುಂಟಿಕೊಪ್ಪ: ಪ್ರಾಥಮಿಕ ಮತ್ತು ಪ್ರೌಢಶಾಲಾ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಹಟ್ಟಿಹೊಳೆ ನಿರ್ಮಲ ವಿದ್ಯಾಭವನ ಶಾಲೆಯ ಮಕ್ಕಳು ಕಬಡ್ಡಿ ಸೇರಿದಂತೆ ವಿವಿಧ ಮೇಲಾಟ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ.

ಇತ್ತೀಚೆಗೆ ಸುಂಟಿಕೊಪ್ಪ ಸಂತ ಮೇರಿ ಶಾಲೆಯ ಪ್ರಾಯೋಜಿತದಲ್ಲಿ ನಡೆದ ಅಂತರ ಪ್ರೌಢಶಾಲಾ ವಿಭಾಗದಲ್ಲಿ ಬಾಲಕರ ಕಬಡ್ಡಿಯಲ್ಲಿ ಪ್ರಥಮ ಸ್ಥಾನ, ಬಾಲಕಿಯರ ವಾಲಿಬಾಲ್ ದ್ವಿತೀಯ ಸ್ಥಾನ, ಮೇಲಾಟ ಸ್ಪರ್ಧೆಯಲ್ಲಿ ಎಂ.ಎಸ್.ಕವನಾ ಉದ್ದ ಜಿಗಿತ ಮತ್ತು ಎತ್ತರ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಎಂ.ಕೆ.ಕಿಶನ್ 200 ಮೀ. ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 100 ಮೀ ಓಟದಲ್ಲಿ ದ್ವಿತೀಯ ಸ್ಥಾನ, ಉದ್ದ ಜಿಗಿತ ತೃತೀಯ ಸ್ಥಾನ, ಪಿ.ಸಿ.ಶ್ರೇಯಾ 200 ಮೀ ಓಟದಲ್ಲಿ ದ್ವಿತೀಯ, ಯಶಿಕಾ ಮೊಣ್ಣಪ್ಪ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ, ಮೋನಿಶಾ ಬಾರದ ಗುಂಡು ಎಸೆತದಲ್ಲಿ ತೃತೀಯ ಸ್ಥಾನ, 4100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಎಂ.ಎಸ್.ಕವನಾ, ಯಶಿಕಾ, ಪಿ.ಸಿ.ಶ್ರೇಯಾ, ಒ.ಎ.ಅಶ್ವಿನಿ ದ್ವಿತೀಯ ಸ್ಥಾನ ಪಡೆದುಕೊಂಡರು.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ದನ್ವಿತ್ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಎಸ್.ಎನ್.ಸೋಮಣ್ಣ ಎತ್ತರ ಜಿಗಿತ ಮತ್ತು ಭಾರದ ಗುಂಡು ಎಸೆತದಲ್ಲಿ ದ್ವಿತೀಯ, ತಟ್ಟೆ ಎಸೆತ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ಸೃಷ್ಟಿ ಬಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಕ್ರೀಡಾಪಟುಗಳಿಗೆ ದೈಹಿಕ ಶಿಕ್ಷಣ ಶಿಕ್ಷಕ ಮೊಹಮ್ಮದ್ ಸಲೀಂ ಮಾರ್ಗದರ್ಶನ ನೀಡಿದ್ದಾರೆ.

ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ತೋರಿದ ವಿದ್ಯಾರ್ಥಿಗಳನ್ನು ಶಾಲಾ ವ್ಯವಸ್ಥಾಪಕರಾದ ರೆ.ಫಾ. ಗಿಲ್ಬರ್ಟ್ ಡಿಸಿಲ್ವಾ, ಮುಖ್ಯಶಿಕ್ಷಕಿ ರೀನಾ ಅನಿತಾ ರೋಡ್ರಿಗಸ್, ಸಹ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಪ್ರೋತ್ಸಾಹಿಸಿ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net