ಈ ಮಹಿಳಾ ಪೊಲೀಸ್​​ಗೆ ಹ್ಯಾಟ್ಸಾಫ್ ಅಂದದ್ದು ಯಾಕೆ ?

copp JJPG
Published on

ರಾಂಚಿ: ಮಹಿಳಾ ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ಜಾರ್ಖಂಡ್‌ನ ಹತಿಯಾ ನಿಲ್ದಾಣದಲ್ಲಿ ಮಗುವಿಗೆ ಹಾಲು ತಂದುಕೊಡುವ ಮೂಲಕ ಔದಾರ್ಯ ಮೆರೆದಿದ್ದಾರೆ. ರಾಂಚಿ ಡಿಆರ್​ಎಂ ಟ್ವಿಟರ್​​​ನಲ್ಲಿ ಈ ದೃಶ್ಯಾವಳಿ ಹಂಚಿಕೊಂಡಿದ್ದು, ಈ ಮಹಿಳಾ ಪೊಲೀಸ್​ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ತಮ್ಮ ನಾಲ್ಕು ತಿಂಗಳ ಗಂಡು ಮಗುವಿನೊಂದಿಗೆ ಮೆಹ್ರುನ್ನಿಸಾ ಎಂಬಾಕೆ ಬೆಂಗಳೂರಿನಿಂದ ಗೋರಖ್‌ಪುರಕ್ಕೆ ಶ್ರಮಿಕ್ ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ಹತಿಯಾ ನಿಲ್ದಾಣಕ್ಕೆ ಬರುತ್ತಿದ್ದಂತೆ, ಮೆಹ್ರುನ್ನಿಸಾ ತನ್ನ ಮಗುವಿಗೆ ಸ್ವಲ್ಪ ಹಾಲು ವ್ಯವಸ್ಥೆ ಮಾಡುವಂತೆ ಅಲ್ಲಿದ್ದ ಅಧಿಕಾರಿಗಳನ್ನು ಕೋರಿದರು. ಈ ಸಂದರ್ಭದಲ್ಲಿ ಎಎಸ್ಐ ಸುಶೀಲಾ ಬಾರೈಕ್ ಕೂಡ ನಿಲ್ದಾಣದಲ್ಲಿದ್ದರು.

ಸುಶೀಲಾ ಬಾರೈಕ್ ಅವರ ಮನೆ ರೈಲ್ವೆ ನಿಲ್ದಾಣದ ಸಮೀಪದಲ್ಲಿದ್ದು, ಮೆಹ್ರುನ್ನಿಸಾ ಮನವಿ ಕೇಳುತ್ತಿದ್ದಂತೆ ಅವರು ಮನೆಗೆ ಹೋಗಿ ಮಗುವಿಗೆ ಹಾಲು ತಂದುಕೊಟ್ಟರು. ರೈಲ್ವೆ ನಿಲ್ದಾಣದಲ್ಲಿ ಈ ಪೊಲೀಸ್ ಅಧಿಕಾರಿ ಹಾಲಿನ ಬಾಟಲಿಯನ್ನು ಮೆಹರುನ್ನಿಸಾಗೆ ನೀಡುವ ಚಿತ್ರವನ್ನೂ ರಾಂಚಿ ಡಿಆರ್​ಎಂ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು. ಇದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net