'ಜೈಲರ್ 2' ಚಿತ್ರದಲ್ಲಿ ಆರ್ಭಟಿಸಲಿದ್ದಾರೆ ಹ್ಯಾಟ್ರಿಕ್​ ಹೀರೋ ಶಿವರಾಜ್‌ಕುಮಾರ್| Rajanikanth

Shivarajkumar
Published on

Rajanikanth | ಕನ್ನಡದ ಹ್ಯಾಟ್ರಿಕ್​ ಹೀರೋ ನಟ ಶಿವರಾಜ್‌ಕುಮಾರ್ ಸದ್ಯ ತಮ್ಮ ಮುಂದಿನ ಸಿನಿಮಾ '45' ರ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾವನ್ನು ಅರ್ಜುನ್ ಜನ್ಯ ನಿರ್ದೇಶನ ಮಾಡುತ್ತಿದ್ದಾರೆ. ಇನ್ನೂ ಹೈದರಾಬಾದ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ನೆಲ್ಸನ್ ನಿರ್ದೇಶನದ ರಜಿನಿಕಾಂತ್ ನಟನೆಯ 'ಜೈಲರ್ 2' ಚಿತ್ರದಲ್ಲಿ ನಟಿಸುತ್ತಿರುವುದಾಗಿ ಶಿವಣ್ಣ ಹೇಳಿದ್ದಾರೆ.

'ಜೈಲರ್ 2' ಚಿತ್ರದಲ್ಲಿ ನೀವು ಕಾಣಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಶಿವಣ್ಣ ಉತ್ತರಿಸಿದ್ದು, ನಾನು ಜೈಲರ್ 2 ಚಿತ್ರದ ಭಾಗವಾಗಿದ್ದೇನೆ ಎಂದು ನೆಲ್ಸನ್ ನನಗೆ ಹೇಳಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲಾಗಿದ್ದು, ನಾನು ಇನ್ನೂ ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲ. ಜೈಲರ್‌ ಚಿತ್ರದಲ್ಲಿನ ನಮ್ಮ ಪಾತ್ರಕ್ಕೆ ಇಷ್ಟೊಂದು ಮಹತ್ವ ಸಿಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ.

ನಾನು ಜೈಲರ್ ಸಿನಿಮಾ ಮಾಡೋಕೆ ರಜನಿಕಾಂತ್ ಸರ್ ಕಾರಣ. ಅವರು ನನಗೆ ತಂದೆಯಂತೆ ಹಾಗಾಗಿ ನೆಲ್ಸನ್‌ಗೆ ಈ ಸಿನಿಮಾದಲ್ಲಿ ನಟಿಸಲು ನನಗೆ ಕಥೆಯ ಅವಶ್ಯಕತೆಯೇ ಇಲ್ಲ ಎಂದು ಹೇಳಿದ್ದೆ. ರಜನಿ ಸರ್ ಅವರ ಸಿನಿಮಾದಲ್ಲಿ ಒಂದು ಕ್ಷಣ ಕಾಣಿಸಿಕೊಳ್ಳುವ ಪಾತ್ರವಾದರೂ ನಾನು ನಟಿಸಲು ಸಿದ್ಧನಿದ್ದೆ. ಈಗಲೂ ಸಹ ಜೈಲರ್ ಸಿನಿಮಾದ ನನ್ನ ಪಾತ್ರಕ್ಕೆ ಅಷ್ಟೊಂದು ಮೆಚ್ಚುಗೆ ಏಕೆ ಸಿಕ್ಕಿತು ಎಂದು ನನಗೆ ಅರ್ಥವಾಗುತ್ತಿಲ್ಲ. ಜೈಲರ್ ಸಿನಿಮಾದಲ್ಲಿ ನೀನು ಏನು ಮಾಡಿದ್ದೀಯ, ಟಿಶ್ಯೂ ಬಾಕ್ಸ್ ತಳ್ಳಿದ್ದೀಯ ಅಷ್ಟೆ ಎಂದು ನನ್ನ ಹೆಂಡತಿ ಕೇಳುತ್ತಾಳೆ. ನನ್ನನ್ನು ಅತ್ಯುತ್ತಮವಾಗಿ ತೋರಿಸಿದ್ದಕ್ಕಾಗಿ ಛಾಯಾಗ್ರಾಹಕರಿಗೆ ಮತ್ತು ಹಿನ್ನೆಲೆ ಸಂಗೀತ ನಿರ್ದೇಶಕ ಅನಿರುದ್ಧ್‌ಗೆ ನಾನು ಕೃತಜ್ಞನಾಗಿರುತ್ತೇನೆ ಎಂದು ಶಿವಣ್ಣ ಹೇಳಿದ್ದಾರೆ.

Jailer

(ಏಜೆನ್ಸೀಸ್)

ಈ ವೇಳೆ, ‘ಜೈಲರ್ 2’ನಲ್ಲಿ ಬಾಲಯ್ಯ ಅವರು ನಟಿಸುವ ಬಗ್ಗೆಯೂ ಶಿವಣ್ಣಗೆ ಪ್ರಶ್ನಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಶಿವಣ್ಣ, ನನಗೆ ಇದರ ಬಗ್ಗೆ ತಿಳಿದಿಲ್ಲ. ಒಂದು ವೇಳೆ ಬಾಲಯ್ಯ ನಟಿಸೋದಾದ್ರೆ, ಅವರೊಂದಿಗೆ ತೆರೆಹಂಚಿಕೊಳ್ಳಲು ಖುಷಿಯಿದೆ ಎಂದಿದ್ದಾರೆ. ಸದ್ಯ ಶಿವಣ್ಣನ ‘ಜೈಲರ್ 2’ ಅಪ್‌ಡೇಟ್ ಕೇಳಿ ಫ್ಯಾನ್ಸ್ ಫುಲ್​ ಖುಷಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net