ಹಾಸನ ಉಸ್ತುವಾರಿಯಾಗಿದ್ದಕ್ಕೆ ಹರಿದ ಎತ್ತಿನಹೊಳೆ

1 (1)
Published on

ಸಹಕಾರ ಸಚಿವ ಕೆ.ಎನ್​.ರಾಜಣ್ಣ ಅನಿಸಿಕೆ | ಸಿದ್ದಾಪುರ ಕೆರೆಗೆ ಬಾಗಿನ ಅರ್ಪಣೆ

ವಿಜಯವಾಣಿ ಸುದ್ದಿಜಾಲ ಮಧುಗಿರಿ
ಹಾಸನ ಜಿಲ್ಲೆಗೆ ಉಸ್ತುವಾರಿ ಸಚಿವನಾಗಿ ಹೋಗಿರದಿದ್ದರೆ ಇನ್ನೂ 50 ವರ್ಷ ಕಳೆದರೂ ಈ ಭಾಗಕ್ಕೆ ಎತ್ತಿನಹೊಳೆ ನೀರು ಹರಿಯುತ್ತಿರಲಿಲ್ಲ ಎಂದು ಸಹಕಾರ ಸಚಿವ ಕೆ.ಎನ್​.ರಾಜಣ್ಣ ಹೇಳಿದರು. ಪಟ್ಟಣಕ್ಕೆ ನೀರೊದಗಿಸುವ ಸಿದ್ದಾಪುರ ಕೆರೆ ಮತ್ತು ಚೋಳೇನಹಳ್ಳಿ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಸೋಮವಾರ ಬಾಗಿನ ಅರ್ಪಿಸಿ ಮಾತನಾಡಿ, ಅಲ್ಲಿನ ರಾಜಕೀಯ ಪರಿಸ್ಥಿತಿ ಬೇರೆಯೇ ಇದ್ದು, ದಕ್ಷ ಅಧಿಕಾರಿಗಳಿಗೆ ಅಲ್ಲಿ ಕೆಲಸ ಮಾಡಲು ಬಿಡುವುದೇ ಇಲ್ಲ ಎಂದರು.


ಹಾಸನ ಡಿಸಿ ಸತ್ಯಭಾಮ ಅವರು ಮತ್ತು ನಾನು ಇಲ್ಲದಿದ್ದರೆ ಈ ಭಾಗಕ್ಕೆ ಎತ್ತಿನಹೊಳೆ ನೀರು ಹರಿಸಲು ಸಾಧ್ಯವಾಗುತ್ತಿರಲಿಲ್ಲ. ಸತ್ಯಭಾಮ ಅವರು ಯೋಜನೆಗೆ ಹೆಚ್ಚಿನ ಶ್ರಮ ವಹಿಸಿದ್ದು, ಇಂಜಿನಿಯರ್​ಗಳು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಅದಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ. ಈಗ ನೀರು ಲಿಫ್ಟ್​ ಮಾಡಲು ರೆಡಿ ಇದ್ದು, ಕಾಲುವೆಗಳ ದುರಸ್ತಿ ಆಗಬೇಕಿದೆ. ಸರ್ಕಾರ ಕಾಲುವೆಗಳ ದುರಸ್ತಿಗೆ ಈಗಾಗಲೇ 300 ಕೋಟಿ ರೂ. ಬಿಡುಗಡೆ ಮಾಡಿದ್ದು, ಮುಂದಿನ ಮಳೆಗಾಲದ ವೇಳೆಗೆ ಮಧುಗಿರಿ, ಕೊರಟಗೆರೆ ಕೆರೆಗಳಿಗೆ ಎತ್ತಿನಹೊಳೆ ಮೂಲಕ ನೀರು ಹರಿಸಿ ಮಧುಗಿರಿ ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿ ತೆಗೆದು ಹಾಕಲಾಗುವುದು ಎಂದರು.


ಯಾವುದೇ ಜೀವ ಸಂಕುಲಕ್ಕೆ ಗಾಳಿ, ನೀರು ಅತ್ಯಗತ್ಯ ಮತ್ತು ಅಮೂಲ್ಯ. ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಇನ್ನಾದರೂ ಅಂತರ್ಜಲ ವೃದ್ಧಿಗೆ ಎಲ್ಲರೂ ಕ್ರಮ ವಹಿಸಬೇಕು. ನೀರನ್ನು ಮಿತವಾಗಿ ಬಳಸಬೇಕು. ವ್ಯರ್ಥವಾಗಿ ಹರಿಯುವ ನೀರು ಭೂಮಿಯಲ್ಲಿ ಇಂಗುವಂತೆ ವ್ಯವಸ್ಥೆ ಮಾಡಬೇಕು. ಚೆಕ್​ಡ್ಯಾಂಗಳ ನಿಮಾರ್ಣಕ್ಕೆ ಆದ್ಯತೆ ನೀಡಬೇಕು ಎಂದು ರಾಜಣ್ಣ ಹೇಳಿದರು.


ಜಿಪಂ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ, ಎಸಿ ಗೋಟೂರು ಶಿವಪ್ಪ, ತಹಸೀಲ್ದಾರ್​ ಶಿರೀನ್​ ತಾಜ್​, ಸದಸ್ಯರಾದ ಅಲೀಂ, ಎಂ.ವಿ.ಗೋವಿಂದರಾಜು, ತಿಮ್ಮರಾಯಪ್ಪ, ಮಂಜುನಾಥ್​ ಆಚಾರ್​, ನಾಗಲತಾ ಲೋಕೇಶ್​, ಶೋಭಾರಾಣಿ, ಶ್ರೀಧರ್​, ಮುಖಂಡರಾದ ತುಂಗೋಟಿ ರಾಮಣ್ಣ, ಎಂಜಿ ಉಮೇಶ್​, ಆನಂದ ಕೃಷ್ಣ, ಆನಂದ್​, ಎಸ್​.ಬಿ.ಟಿ.ರಾಮು, ಸುವರ್ಣಮ್ಮ, ತಾಪಂ ಇಒ ಲಕ್ಷ್ಮಣ್​, ಯೋಜನಾಧಿಕಾರಿ ಮಧುಸೂದನ್​, ಸಿಡಿಪಿಒ ಕಮಲಾ, ವಲಯ ಅರಣ್ಯಾಧಿಕಾರಿ ಸುರೇಶ್​, ಮುಖ್ಯಾಧಿಕಾರಿ ಸುರೇಶ್​ ಇತರರಿದ್ದರು.

ಶೀಘ್ರದಲ್ಲೇ ವಾರ್ಡ್​ ಪಾದಯಾತ್ರೆ
ಶೀಘ್ರದಲ್ಲೇ ಪಟ್ಟಣದ ಎಲ್ಲ ವಾರ್ಡ್​ ಗಳಿಗೂ ಭೇಟಿ ನೀಡಿ, ಮೊದಲ ಹಂತದಲ್ಲಿ 1ರಿಂದ 8ನೇ ವಾರ್ಡ್​ವರೆಗೆ ನಂತರ 9ರಿಂದ 15, 16ರಿಂದ 23ನೇ ವಾರ್ಡ್​ಗಳಿಗೆ ಬೆಳಗ್ಗೆ 8ರಿಂದ 11 ಗಂಟೆವರೆಗೂ ಪಾದಯಾತ್ರೆ ಕೈಗೊಂಡು ಜನರ ಸಮಸ್ಯೆಯನ್ನು ಖುದ್ದಾಗಿ ಆಲಿಸಿ ಪರಿಹರಿಸಲಾಗುವುದು. ಅಷ್ಟ್ಟ ರೊಳಗೆ ಅಧಿಕಾರಿಗಳು ಜನರ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ರಾಜಣ್ಣ ಸೂಚನೆ ನೀಡಿದರು.

ಕೋಡಿ ಹರಿಯುವವರೆಗೂ ಬಿಜವರ ಕೆರೆಗೆ ಹೇಮೆ ನೀರು
ಮಧುಗಿರಿ ಪಟ್ಟಣಕ್ಕೆ ಈಗ ಪ್ರತಿದಿನ ನೀರು ಸರಬರಾಜು ಆಗುತ್ತಿದ್ದು, ಈ ಬಾರಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕ್ಷೇತ್ರದ ಕೆರೆಗಳು ಭರ್ತಿಯಾಗಿವೆ. ಪ್ರತಿವರ್ಷ ಮಳೆರಾಯನ ಆಶೀರ್ವಾದ ಹೀಗೇ ಸಿಗಲಿ. ಇದೇ ರೀತಿ ಕೆರೆಗಳು ಕೋಡಿ ಬೀಳಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಮುಂದೆ ಇನ್ನೂ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯಿದ್ದು, ಇನ್ನೂ ಹೆಚ್ಚು ನೀರು ಹರಿಯಲಿದೆ. ಇನ್ನೆರಡು ದಿನಗಳಲ್ಲಿ ಬಿಜವರ ಕೆರೆಯೂ ಕೋಡಿ ಬೀಳಲಿದ್ದು, ಬಿಜವರ ಕೆರೆ ಕೋಡಿ ಬೀಳುವವರೆಗೂ ಹೇಮಾವತಿ ನೀರು ಹರಿಸುತ್ತೇನೆ ಎಂದು ಭರವಸೆ ನೀಡಿದರು.

ಪಾಠದೊಂದಿಗೆ ಕ್ರೀಡೆಗೂ ಒತ್ತು ಕೊಡಿ

ಮಧುಗಿರಿ: ಸರ್ಕಾರ ಉನ್ನತ ಶಿಣದಲ್ಲಿ, ಉದ್ಯೋಗದಲ್ಲಿ ಕ್ರೀಡಾ ಪಟುಗಳಿಗೆ ಮೀಸಲಾತಿ ನಿಗದಿಗೊಳಿಸಿದ್ದು, ಇಂತಹ ಸೌಲಭ್ಯಗಳನ್ನು ಸದ್ಬಳಸಿಕೊಳ್ಳಿ ಎಂದು ಸಹಕಾರ ಸಚಿವ ಕೆ.ಎನ್​.ರಾಜಣ್ಣ ತಿಳಿಸಿದರು. ಪಟ್ಟಣದ ರಾಜೀವ್​ ಗಾಂಧಿ ಕ್ರೀಡಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೆಂಗಳೂರು ವಿಭಾಗಮಟ್ಟದ ವಾಲಿಬಾಲ್​ ಪಂದ್ಯಾವಳಿಗಳಿಗೆ ಚಾಲನೆ ನೀಡಿ ಮಾತನಾಡಿ, ದೇಹದ ಸದೃಢತೆಗೆ ಕ್ರೀಡೆ ಸಹಕಾರಿಯಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಪಾಠದ ಜತೆ ಕ್ರೀಡೆಗೂ ಒತ್ತು ಕೊಡಬೇಕು. ಸ್ಪರ್ಧೆಯಲ್ಲಿ ಸೋಲು&ಗೆಲುವು ಸಾಮಾನ್ಯ. ಎರಡನ್ನೂ ಸಮಾನವಾಗಿ ಸ್ವೀಕರಿಸಿ ಕ್ರೀಡಾ ಸ್ಫೂರ್ತಿ ಮೆರೆಯಿರಿ. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ. ವಿದ್ಯಾರ್ಥಿಗಳಿಗೆ ಯಾವುದೇ ಸೌಲಭ್ಯಕ್ಕೆ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮಧುಗಿರಿ ರಾಜೀವ್​ ಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ವಿಭಾಗಮಟ್ಟದ ವಾಲಿಬಾಲ್​ ಪಂದ್ಯಾವಳಿಗೆ ಸಚಿವ ಕೆ.ಎನ್​.ರಾಜಣ್ಣ ಕ್ರೀಡಾ ಜ್ಯೋತಿ ಸ್ವೀಕರಿಸಿ ಚಾಲನೆ ನೀಡಿದರು. ವಿಧಾನ ಪರಿಷತ್​ ಸದಸ್ಯ ರಾಜೇಂದ್ರ ರಾಜಣ್ಣ, ಎಸಿ ಗೋಟೂರು ಶಿವಪ್ಪ, ಪುರಸಭೆ ಅಧ್ಯ ಲಾಲಾಪೇಟೆ ಮಂಜುನಾಥ್​, ಉಪಾಧ್ಯಕ್ಷೆ  ಸುಜಾತಾ ಶಂಕರ್​ ನಾರಾಯಣ್​ ಇದ್ದರು.
ಮಧುಗಿರಿ ರಾಜೀವ್​ ಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ವಿಭಾಗಮಟ್ಟದ ವಾಲಿಬಾಲ್​ ಪಂದ್ಯಾವಳಿಗೆ ಸಚಿವ ಕೆ.ಎನ್​.ರಾಜಣ್ಣ ಕ್ರೀಡಾ ಜ್ಯೋತಿ ಸ್ವೀಕರಿಸಿ ಚಾಲನೆ ನೀಡಿದರು. ವಿಧಾನ ಪರಿಷತ್​ ಸದಸ್ಯ ರಾಜೇಂದ್ರ ರಾಜಣ್ಣ, ಎಸಿ ಗೋಟೂರು ಶಿವಪ್ಪ, ಪುರಸಭೆ ಅಧ್ಯ ಲಾಲಾಪೇಟೆ ಮಂಜುನಾಥ್​, ಉಪಾಧ್ಯಕ್ಷೆ ಸುಜಾತಾ ಶಂಕರ್​ ನಾರಾಯಣ್​ ಇದ್ದರು.

ತಹಸೀಲ್ದಾರ್​ ಶಿರೀನ್​ ತಾಜ್​, ಡಿಡಿಪಿಐ ಗಿರಿಜಾ, ಬಿಇಒ ಹನುಮಂತರಾಯಪ್ಪ, ಶಿಣಾಧಿಕಾರಿ ಎಂ.ವಿ.ರಾಜಣ್ಣ, ಜಿಲ್ಲಾ ಸಾರತಾ ಅಧಿಕಾರಿ ನರಸಿಂಹಯ್ಯ, ಅರ ದಾಸೋಹ ಸಹಾಯಕ ನಿರ್ದೇಶಕ ಚಿತ್ತಯ್ಯ, ಪ್ರಭಾರ ಟಿಪಿಒ ಯರಗಾಮಯ್ಯ, ಪುರಸಭೆ ಸದಸ್ಯರಾದ ಅಲೀಂ, ಎಂ.ವಿ.ಗೋವಿಂದರಾಜು, ತಿಮ್ಮರಾಯಪ್ಪ, ಮಂಜುನಾಥ್​ ಆಚಾರ್​, ನಾಗಲತಾ ಲೋಕೇಶ್​, ಶೋಭಾರಾಣಿ, ಶ್ರೀಧರ್​, ಮಾಜಿ ಅಧ್ಯಕ್ಷರಾದ ಎನ್​.ಗಂಗಣ್ಣ, ಎಂ.ಕೆ.ನಂಜುಂಡಯ್ಯ, ಮುಖಂಡರಾದ ತುಂಗೋಟಿ ರಾಮಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net