

ನವದೆಹಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಯಾವುದೇ ದೇಶದ ಆಶ್ರಯ ಕೋರಿಲ್ಲ ಎಂದು ಅವರ ಪುತ್ರ ಸಾಜಿಬ್ ವಾಜೇದ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಬಾಂಗ್ಲಾ ಹಿಂಸಾಚಾರ: ಢಾಕಾದಿಂದ 205 ಭಾರತೀಯರು ವಾಪಸ್
ಅಮೇರಿಕಾ ಸರ್ಕಾರ ಆಕೆಯ ವೀಸಾವನ್ನು ರದ್ದುಗೊಳಿಸಿದೆ ಎಂದು ಮಾಧ್ಯಮ ವರದಿಗಳು ಹೊರಬಂದ ಹಿನ್ನೆಲೆಯಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಹಸೀನಾ ಆಶ್ರಯಕ್ಕೆ ಯುಕೆ ಮತ್ತು ಯುಎಸ್ ಸರ್ಕಾರಗಳು ಸ್ಪಂದಿಸುತ್ತಿಲ್ಲ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ. ಅವರು ಎಲ್ಲಿಯೂ ಆಶ್ರಯ ಪಡೆದಿಲ್ಲ. ಆದ್ದರಿಂದ ಯುಕೆ ಮತ್ತು ಯುಎಸ್ ಇನ್ನೂ ಪ್ರತಿಕ್ರಿಯಿಸಿಲ್ಲ. ಊಹಾಪೋಹ ಹರಡುತ್ತಿರುವುದಕ್ಕೆ ಸ್ಪಂದಿಸುವುದಿವಿಲ್ಲ ಎಂದು ಸಜೀಬ್ ಹೇಳಿದರು.
ಅಮೆರಿಕದೊಂದಿಗೆ ಯಾವುದೇ ಚರ್ಚೆ ನಡೆದಿಲ್ಲ. ಬಾಂಗ್ಲಾದೇಶದ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಬೇಕಿದ್ದ ಶೇಖ್ ಹಸೀನಾ ಒಂದೆರಡು ದಿನ ಭಾರತದಲ್ಲಿ ಆಶ್ರಯ ಪಡೆಯಬೇಕಾದ ಅನಿವಾರ್ಯತೆ ಎದುರಾಗಯಿತು. ವಾಸ್ತವವಾಗಿ ನಮ್ಮ ದೇಶದಿಂದಲೇ ಬ್ರಿಟನ್‌ಗೆ ಹೋಗಿ ಅಲ್ಲಿ ತಾತ್ಕಾಲಿಕ ಆಶ್ರಯ ಪಡೆಯುವುದು ನನ್ನ ತಾಯಿಯ ಉದ್ದೇಶವಾಗಿತ್ತು. ಹಿಂದೂಸ್ತಾನ್ ಏರ್ ಬೇಸ್‌ಗೆ ಇಳಿಯುವ ಮೊದಲು ಅವರ ನಿಕಟ ಮೂಲಗಳು ಭಾರತ ಸರ್ಕಾರಕ್ಕೆ ಇದೇ ವಿಷಯವನ್ನು ತಿಳಿಸಿವೆ ಎಂದು ಅವರು ಹೇಳಿದ್ದಾರೆ.
ನನ್ನ ಚಿಕ್ಕಮ್ಮ ರೆಹಾನಾ ಅವರ ಮಗಳು ಟುಬಿಪ್ ಸಿದ್ದಿಕ್ ಬ್ರಿಟಿಷ್ ಸಂಸತ್ತಿನ ಸದಸ್ಯರಾಗಿದ್ದಾರೆ. ರೆಹಾನಾಗೆ ಬ್ರಿಟಿಷ್ ಪೌರತ್ವವಿದೆ. ಅವರು ಯುಕೆಗೆ ಹೋಗಬಹುದಾಗಿದೆ.