

dialer; ಅನೇಕ ಆಂಡ್ರಾಯ್ಡ್ ಮೊಬೈಲ್ ಅಪ್ಲಿಕೇಶನ್‌ನ ಡಯಲರ್ ಇಂಟರ್ಫೇಸ್ ಯಾವುದೇ ಮುನ್ಸೂಚನೆ ನೀಡದೆ ಅಥವಾ ಅನುಮತಿಯಿಲ್ಲದೆ ಇದ್ದಕ್ಕಿದ್ದಂತೆ ಬದಲಾಗಿದೆ. ಇನ್ನೂ ಇದರಿಂದಾಗಿ ಅನೇಕ ಫೋನ್ ಬಳಕೆದಾರರು ಆಘಾತಕ್ಕೊಳಗಾಗಿದ್ದಾರೆ.
ಆಧುನಿಕ, ಸರಳ ಮತ್ತು ಬಳಕೆದಾರರನ್ನು ಆಕರ್ಷಿಸಲು ಈ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ. ಅಲ್ಲದೆ ಕರೆ ನಿರ್ವಹಣೆಯನ್ನು ಸುಲಭಗೊಳಿಸಲು ಇನ್-ಕಾಲ್ ಸ್ಕ್ರೀನ್‌ಗೆ ದೊಡ್ಡ ಬಟನ್ ಸೇರಿಸಲಾಗಿದೆ. ಕರೆಗಳನ್ನು ಸ್ವೀಕರಿಸಲು ಮತ್ತು ಸಂಪರ್ಕ ಕಡಿತಗೊಳಿಸಲು ಹೊಸ ಗೆಸ್ಚರ್ ವ್ಯವಸ್ಥೆಯನ್ನು ಸೇರಿಸಲಾಗಿದೆ ಇದೀಗ ಬಳಕೆದಾರರು ಸ್ವೈಪ್ ಅಥವಾ ಟ್ಯಾಪ್ ಅನ್ನು ಆಯ್ಕೆ ಮಾಡಬಹುದು.
ಈ ರೀತಿಯ ಸ್ಕ್ರೀನ್ ಬದಲಾಗಲು ಕಾರಣ ಏನು ಎಂಬುದನ್ನು ಅರ್ಥಮಾಡಿಕೊಳ್ಳಲು ಬಳಕೆದಾರರಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಎಷ್ಟೋ ಜನ ಇದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ವಾಸ್ತವವಾಗಿ ಈ ಬದಲಾವಣೆಯು ಗೂಗಲ್‌ನ ಮೆಟೀರಿಯಲ್ 3 ಎಕ್ಸ್‌ಪ್ರೆಸಿವ್ ಮರುವಿನ್ಯಾಸದ ಭಾಗವಾಗಿದೆ. ಇದನ್ನು ಇತ್ತೀಚೆಗೆ ಆಂಡ್ರಾಯ್ಡ್ 16 ನೊಂದಿಗೆ ಪರಿಚಯಿಸಲಾಗಿದೆ. ಈ ಬದಲಾವಣೆಯು ನಿಮ್ಮ ಫೋನ್‌ನಲ್ಲಿಯೂ ಕಂಡುಬಂದರೆ, ಇದಕ್ಕೆ ಕಾರಣವನ್ನು ತಿಳಿದುಕೊಳ್ಳೋಣ.
ಹೊಸ ನವೀಕರಣವನ್ನು ಸರ್ವರ್-ಸೈಡ್ ಸಕ್ರಿಯಗೊಳಿಸುವಿಕೆಯ ಮೂಲಕ ಹೊರತರಲಾಗಿದೆ. ಹಾಗಾಗಿ ಯಾವುದೇ ಅಪ್ಲಿಕೇಶನ್ ನವೀಕರಣಗಳನ್ನು ಸ್ಥಾಪಿಸದೆ ಡಯಲರ್ UI ಬದಲಾಗಿದೆ. ರೆಡ್ಡಿಟ್ ಮತ್ತು ಎಕ್ಸ್ ನಲ್ಲಿರುವ ಅನೇಕ ಬಳಕೆದಾರರು ಈ ಹಠಾತ್ ಬದಲಾವಣೆಯಿಂದ ಅಸಮಾಧಾನವಾಗಿದೆ ಎಂದು ಬರೆದಿದ್ದಾರೆ. ಈ ಅಪ್ಲಿಕೇಶನ್ ಸಂಪೂರ್ಣವಾಗಿ ವಿಭಿನ್ನವಾಗಿದೆ ಎಂದು ಹೇಳಿದ್ದಾರೆ. ಇನ್ನೂ ಕೆಲವು ಬಳಕೆದಾರರು ಹೊಸ ವಿನ್ಯಾಸವನ್ನು ಇಷ್ಟಪಟ್ಟಿದ್ದಾರೆ.
(ಏಜೆನ್ಸೀಸ್)
ಈ ಹೊಸ ವಿನ್ಯಾಸವು ಸಂಶೋಧನೆಯನ್ನು ಆಧರಿಸಿದೆ ಎಂದು ಗೂಗಲ್ ತಿಳಿಸಿದೆ. ಈ ಬದಲಾವಣೆಯು ಫೋನ್ ಅಪ್ಲಿಕೇಶನ್‌ಗೆ ಮಾತ್ರ ಸೀಮಿತವಾಗಿಲ್ಲ, ಆದರೆ ಶೀಘ್ರದಲ್ಲೇ ಗೂಗಲ್ ಸಂದೇಶಗಳು, ಸಂಪರ್ಕಗಳು, Gmail ಮತ್ತು ಫೋಟೋಗಳಂತಹ ಅಪ್ಲಿಕೇಶನ್‌ಗಳಲ್ಲೂ ಕಂಡುಬರುತ್ತದೆ ಎನ್ನಲಾಗಿದೆ.