ಆದಿಲ್-ಸೋಮಿ ದಾಂಪತ್ಯ ಅಂತ್ಯವಾಯ್ತಾ? ವೈರಲ್ ಪೋಸ್ಟ್ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ ಜೋಡಿ! | Adil Khan Durrani

Adil Khan Durrani
ಆದಿಲ್ ಖಾನ್ ದುರಾನಿ ಮತ್ತು ಅವರ ಪತ್ನಿ ಸೋಮಿ ಖಾನ್
Published on: 

Adil Khan Durrani: ಕಿರುತೆರೆ ನಟಿ ಸೋಮಿ ಖಾನ್ ಮತ್ತು ರಾಖಿ ಸಾವಂತ್ ಮಾಜಿ ಪತಿ ಆದಿಲ್ ಖಾನ್ ದುರಾನಿ ತಮ್ಮ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳಿಗೆ ಇದೀಗ ತೆರೆ ಎಳೆದಿದ್ದಾರೆ. ಸೋಮಿ ಖಾನ್ ಅವರ ನಿಗೂಢ ಇನ್‌ಸ್ಟಾಗ್ರಾಮ್ ಪೋಸ್ಟ್‌ನಿಂದಾಗಿ ಹಬ್ಬಿದ್ದ ಪ್ರತ್ಯೇಕತೆಯ ಸುದ್ದಿಗೆ ದಂಪತಿ ವಿಡಿಯೋ ಹಂಚಿಕೊಳ್ಳುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮಾತನಾಡಿದ ಸೋಮಿ ಖಾನ್, ‘ನಿನ್ನೆ ನಾನು ಒಂದು ಸ್ಟೋರಿ ಪೋಸ್ಟ್ ಮಾಡಿದ್ದೆ. ಅದಾದ ಬಳಿಕ ನನಗೆ ಮತ್ತು ಆದಿಲ್‌ಗೆ ಸಾಕಷ್ಟು ಮೆಸೇಜ್‌ಗಳು ಬರುತ್ತಿವೆ’ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಆದಿಲ್, ‘ಮುಂಬೈನಾದ್ಯಂತ ಮಾಧ್ಯಮದವರು ಕರೆ ಮಾಡುತ್ತಿದ್ದಾರೆ. ಜನರು ಕೂಡ ನಿಮ್ಮಿಬ್ಬರ ನಡುವೆ ಏನಾಯಿತು, ಎಲ್ಲವೂ ಸರಿಯಾಗಿದೆಯೇ ಎಂದು ಕೇಳುತ್ತಾ ನಿರಂತರವಾಗಿ ಮೆಸೇಜ್ ಮಾಡುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

ಬೇರೊಂದು ವಿಚಾರಕ್ಕಾಗಿ ಹಾಕಿದ್ದ ಪೋಸ್ಟ್

ತಮ್ಮ ಪೋಸ್ಟ್ ಬಗ್ಗೆ ಸ್ಪಷ್ಟನೆ ನೀಡಿರುವ ಸೋಮಿ, ‘ಆ ಸ್ಟೋರಿ ನಿಜವಾಗಿಯೂ ನನ್ನ ಮತ್ತು ಆದಿಲ್ ಬಗ್ಗೆ ಇರಲಿಲ್ಲ. ಅದು ಬೇರೊಂದು ಪರಿಸ್ಥಿತಿ ಮತ್ತು ಬೇರೊಂದು ವಿಚಾರಕ್ಕಾಗಿ ಹಾಕಿದ್ದ ಪೋಸ್ಟ್ ಆಗಿತ್ತು’ ಎಂದು ತಿಳಿಸಿದ್ದಾರೆ. ಇನ್ನು, ಸೋಮಿ ಅವರ ಪೋಸ್ಟ್ ಅನ್ನು ತಾವು ಕೂಡ ರೀ-ಶೇರ್ ಮಾಡಿದ್ದರಿಂದ ವದಂತಿ ಇನ್ನಷ್ಟು ಜೋರಾಯಿತು ಎಂದು ಆದಿಲ್ ಒಪ್ಪಿಕೊಂಡಿದ್ದಾರೆ.

ವಿಚ್ಛೇದನ ವದಂತಿಗೆ ಕಾರಣವಾಗಿದ್ದ ಪೋಸ್ಟ್ ಏನು?

ದಂಪತಿ ಸ್ಪಷ್ಟನೆ ನೀಡುವ ಮೊದಲು, ಸೋಮಿ ಖಾನ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸ್ವಾಭಿಮಾನದ ಬಗ್ಗೆ ಬರೆದುಕೊಂಡಿದ್ದರು. ‘ನನ್ನ ಸ್ವಾಭಿಮಾನದೊಂದಿಗೆ ನಾನು ಹೊರನಡೆಯಲು ನಿರ್ಧರಿಸಿದ್ದೇನೆ. ನನ್ನ ವಿಚಾರವನ್ನು ಅಲ್ಲಾಹನಿಗೆ ಒಪ್ಪಿಸಿದ್ದೇನೆ. ಜನರ ಸುಳ್ಳು ಮತ್ತು ಕೃತ್ಯಗಳನ್ನು ಆತ ನೋಡುತ್ತಾನೆ. ಆತನ ಕಣ್ಣಿನಿಂದ ಏನನ್ನೂ ಮರೆಮಾಚಲು ಸಾಧ್ಯವಿಲ್ಲ. ಎಲ್ಲವನ್ನೂ ಅಲ್ಲಾಹನಿಗೆ ಬಿಟ್ಟಿದ್ದೇನೆ’ ಎಂದು ಸೋಮಿ ಬರೆದಿದ್ದರು.

ಇದನ್ನೂ ಓದಿ: ಬಂಡೀಪುರದಲ್ಲಿ ಹುಲಿ ಬೆನ್ನಟ್ಟಿದ್ದ ತಮಿಳುನಾಡು ಸಚಿವ ವನ್ನಿ? ರಾಮಲಿಂಗಾರೆಡ್ಡಿ ಖಡಕ್ ವಾರ್ನಿಂಗ್ | Bandipur

ಆದಿಲ್ ಖಾನ್ ಕೂಡ ಸೋಮಿ ಖಾನ್ ಅವರ ಪೋಸ್ಟ್ ಅನ್ನು ರೀ-ಶೇರ್ ಮಾಡಿ, "ಆಲ್ ದಿ ಬೆಸ್ಟ್. ಜೊತೆಯಾಗಿ ಕಳೆದ ಸುಂದರ ಕ್ಷಣಗಳಿಗೆ ಧನ್ಯವಾದಗಳು. #END" ಎಂದು ಬರೆದುಕೊಂಡಿದ್ದರು. ಇದರಿಂದಾಗಿ ಇಬ್ಬರೂ ವಿಚ್ಛೇದನದ ಹಾದಿ ಹಿಡಿದಿದ್ದಾರೆ ಎಂದೇ ನೆಟ್ಟಿಗರು ಮತ್ತು ಮಾಧ್ಯಮಗಳು ಭಾವಿಸಿದ್ದವು. ಆದರೆ, ಇದೀಗ ವಿಡಿಯೋ ಹಂಚಿಕೊಂಡಿರುವ ದಂಪತಿ ಎಲ್ಲಾ ವದಂತಿಗಳಿಗೂ ತೆರೆ ಎಳೆದಿದ್ದಾರೆ.