Haryana | ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಮೂವರ ಸಾವು, 7 ಮಂದಿಗೆ ಗಂಭೀರ ಗಾಯ

Firecrackerfactory
Published on

ಹರಿಯಾಣ: ಅಕ್ರಮವಾಗಿ ನಡೆಸುತ್ತಿದ್ದ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ಮೂವರು ಮೃತಪಟ್ಟಿದ್ದು ಮತ್ತು ಏಳು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹರಿಯಾಣದ ಸೋನಿಪತ್ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದೆ.

ಕಾರ್ಖಾನೆಯನ್ನು ಸ್ಥಳೀಯ ನಿವಾಸಿ ವೇದ್ ಎಂಬುವರು ನಡೆಸುತ್ತಿದ್ದರು, ಅವರು ತಮ್ಮ ಮನೆಯಿಂದಲೇ ಅದನ್ನು ಅಕ್ರಮವಾಗಿ ನಡೆಸುತ್ತಿದ್ದರು. ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿದ ಪೊಲೀಸ್ ಅಧಿಕಾರಿಯ ಪ್ರಕಾರ, "ಕಾನೂನುಬಾಹಿರ ಘಟಕ" ದಲ್ಲಿ ಪಟಾಕಿಗಳನ್ನು ತಯಾರಿಸಲು ಬಳಸಲಾದ ರಾಸಾಯನಿಕವು ಬೆಂಕಿಯಲ್ಲಿ ಕಾಣಿಸಿಕೊಂಡಿದೆ, ಇದು ಸ್ಫೋಟಕ್ಕೆ ಕಾರಣವಾಯಿತು.

ಇಲ್ಲಿನ ಸ್ಥಳೀಯ ನಿವಾಸಿಯಾದ ವೇದ್ ಎಂಬುವರ ಮನೆಯಲ್ಲಿ ಅಕ್ರಮವಾಗಿ ಪಟಾಕಿಗಳನ್ನು ತಯಾರಿಸುತ್ತಿದ್ದರು ಎನ್ನಲಾಗಿದ್ದು ಮನೆಯ ಕೊಠಡಿ ಒಂದರಲ್ಲಿ ಶೇಖರಿಸಿಡಲಾದ ರಾಸಾಯನಿಕದಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯಲ್ಲಿ ಮೂವರ ದೇಹಗಳು ತೀವ್ರವಾಗಿ ಸುಟ್ಟು ಕರಕಲಾಗಿದ್ದು, ಏಳು ಕಾರ್ಮಿಕರ ಸ್ಥಿತಿ ಗಂಭೀರವಾಗಿದೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದಾರೆ. ಅಕ್ರಮ ಪಟಾಕಿ ಕಾರ್ಖಾನೆ ನಡೆಸುತ್ತಿದ್ದ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಕುರಿತು ಸೋನಿಪತ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net