VIDE0| ತಮಿಳುನಾಡಿನ ರಾಮೇಶ್ವರದಲ್ಲಿ ಸುಗ್ಗಿ ಹಬ್ಬದ ಹುಂಜಗಳ ಕಾಳಗಕ್ಕೆ ಸಿದ್ಧತೆ: ನಾಳೆ ನಡೆಯಲಿರುವ ಹುಂಜ ಕಾಳಗ

cock
Published on

ರಾಮೇಶ್ವರ: ಸುಗ್ಗಿ ಹಬ್ಬದ ಹಿನ್ನೆಲೆಯಲ್ಲಿ ತಮಿಳುನಾಡಿನ ರಾಮೇಶ್ವರದಲ್ಲಿ ನಡೆಯುವ ಹುಂಜಗಳ ಕಾಳಗಕ್ಕೆ ಸಿದ್ಧತೆ ತೀವ್ರಗೊಂಡಿದೆ.

ಸುಗ್ಗಿ ಹಬ್ಬದ ಅಂಗವಾಗಿ ರಾಮೇಶ್ವರದಲ್ಲಿ ಹುಂಜಗಳ ಕಾದಾಟ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದಕ್ಕಾಗಿ ಜನರು ಹುಂಜಗಳನ್ನು ದಷ್ಟಪುಷ್ಟವಾಗಿ ಸಾಕಿ ಕಾದಾಟಕ್ಕೆ ಸಜ್ಜುಗೊಳಿಸುತ್ತಾರೆ.

ಕಾಳಗದಲ್ಲಿ ಗೆದ್ದ ಹುಂಜಗಳ ಮಾಲೀಕರಿಗೆ ಬಹುಮಾನ ದೊರೆಯಲಿದೆ. ನೂರಾರು ಹುಂಜಗಳು ಕಾದಾಟದಲ್ಲಿ ಪಾಲ್ಗೊಳ್ಳಲಿವೆ. ಇದಕ್ಕಾಗಿ ರಾಮೇಶ್ವರ ಹೊರ ವಲಯದಲ್ಲಿ ಕಣ ಸಿದ್ಧಗೊಂಡಿದೆ.
ಕಾದಾಟಕ್ಕೆ ಸಾಕಿರುವ ಹುಂಜಗಳನ್ನು ಮಾಲೀಕರು ದವಸ ಧಾನ್ಯ ನೀಡಿ ಉತ್ತಮವಾಗಿ ಸಾಕಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net