

ಬೆಂಗಳೂರು: ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 7 ತಿಂಗಳ ತುಂಬು ಗರ್ಭಿಣಿಯಾಗಿರುವ ನಟಿ ಇದೀಗ ರವಿವರ್ಮ ಪೇಂಟಿಂಗ್ ಥೀಮ್‌ನಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಚ ಮನೆಗೆ ಮುದ್ದಾದ ಮಗು ಬರಲಿದೆ. ಸ್ಯಾಂಡಲ್ವುಡ್ನ ಈ ಕ್ಯೂಟ್ ಜೋಡಿ ರವಿವರ್ಮನ ಪೇಂಟಿಂಗ್ ಥೀಮ್‌ನಲ್ಲಿ ಪೋಟೋಶೂಟ್ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ತಿಳಿ ಗುಲಾಬಿ ಬಣ್ಣದ ಅಪ್ಪಟ ಮೈಸೂರು ಸಿಲ್ಕ್ ಸೀರೆ ಹಾಗೂ ಗಾಡ ಹಸಿರು ಬಣ್ಣದ ಸಿಂಪಲ್ ಬ್ಲೌಸ್ ನಲ್ಲಿ ಹರ್ಷಿಕಾ ಪೋಟೋಶೂಟ್ ಗೆ ಸಿದ್ಧವಾಗಿದ್ದಾರೆ. ಕಾಸಿನ ಸರ, ಹಸಿರುಬಳೆ, ಬೈತಲೆ ತೆಗೆದು ಕಟ್ಟಿದ ತುರುಬಿನಲ್ಲಿರೋ ಮಲ್ಲಿಗೆ, ಹಣೆಯ ಮೇಲಿನ ಬೊಟ್ಟು, ಮುತ್ತಿನ ಸರ ಎಲ್ಲವೂ ಹರ್ಷಿಕಾ ತಾಯ್ತನದ ಕಳೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಹರ್ಷಿಕಾ ಮತ್ತು ಭುವನ್ ದಂಪತಿ ಮೊದಲ ಮಗುವಿನ ಆಗಮನಕ್ಕಾಗಿ ಎದುರು ನೋಡ್ತಿದ್ದಾರೆ. ಚೊಚ್ಚಲ ಮಗು ಆಗಮನಕ್ಕೆ ದಿನಗಣನೆ ಶುರುವಾಗಿದ್ದು, ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.