ಲಕ್ಕಿ ಜೋಡಿ ಬಾಳಲ್ಲಿ ಕುಕ್ಕೀ ಖುಷಿ: ಹೆರಿಗೆ ಬಳಿಕ ಮೊದಲ ಬಾರಿಗೆ ಮಗು ಪರಿಚಯಿಸಿದ ದಂಪತಿ

harshika
Published on

ಬೆಂಗಳೂರು: ನಟಿ ಹರ್ಷಿಕಾ ಪೂಣಚ್ಚ ಅ.3ರಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಮೂಲಕ ನವರಾತ್ರಿಯ ಮೊದಲ ದಿನವೇ ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ದಂಪತಿ ಮನೆಗೆ ಮಹಾಲಕ್ಷ್ಮಿಯನ್ನು ಸ್ವಾಗತಿಸಿದ್ದರು. ಸದ್ಯ ನಟಿ ಹಾಗೂ ಮಗು ಆರೋಗ್ಯವಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದೇ ಮೊದಲ ಬಾರಿಗೆ ನಟಿ ಹರ್ಷಿಕಾ ತಮ್ಮ ತಾಯ್ತನದ ಖುಷಿಯನ್ನು ಹಂಚಿಕೊಂಡು, ‘ಈ ಒಂಬತ್ತು ತಿಂಗಳಿನ ಜರ್ನಿಯಲ್ಲಿ ಪ್ರತಿ ದಿನವೂ ನನಗೆ ಸಂಭ್ರಮವೇ. ಹೆರಿಗೆ ಬಳಿಕ ತಾಯ್ತನ ಹಾಗೂ ಹೆಣ್ತನದ ಖುಷಿಯನ್ನು ಅನುಭವಿಸುತ್ತಿದ್ದೇನೆ. ಮಗುವನ್ನು ಆರೈಕೆ ಮಾಡುವುದು ಪ್ರತಿ ಹೆಣ್ಮಕ್ಕಳಿಗೆ ವಿಶೇಷ ಅನುಭವ’ ಎಂದರು.

ಭುವನ್ ಪೊನ್ನಣ್ಣ, ‘ಹೆಣ್ಣು ಮಗು ಆಗಿರುವುದು ನನಗೆ ಖುಷಿಯಾಗಿದೆ. ಹರ್ಷಿಕಾ ಒಂಬತ್ತು ತಿಂಗಳ ಪ್ರಯಾಣದಲ್ಲೇ ನನ್ನ ಒಂಬತ್ತು ತಿಂಗಳನ್ನು ಅರ್ಪಿಸಿದ್ದೇನೆ. ಪ್ರಗ್ನೆನ್ಸಿ ಅವಧಿಯಲ್ಲಿ ಮಹಿಳೆಯರಂತೆಯೇ ಪುರುಷರಿಗೂ ಅವರದ್ದೇ ಆದ ಜವಾಬ್ದಾರಿಗಳಿರುತ್ತವೆ. ಆ ಅವನ್ನು ನಾನು ಸಂಪೂರ್ಣವಾಗಿ ನಿರ್ವಹಿಸಿದ್ದೇನೆ. ನನ್ನಿಂದ ಮಾಡಬೇಕಾದ ಎಲ್ಲ ಕೆಲಸಗಳನ್ನು ಮಾಡಿರುವ ಖುಷಿ ನನಗಿದೆ. ಹೆಣ್ಮಕ್ಕಳ ಕಷ್ಟ, ನೋವಿನ ಸಮಯದಲ್ಲಿ ಕೂಡ ನಾವು ಭಾಗಿಯಾಗಬೇಕು’ ಎಂದರು

ವೈದ್ಯೆ ಸಂಗೀತಾ ರಾವ್, ‘ಹೆರಿಗೆ ತುಂಬಾ ಚೆನ್ನಾಗಿ ಆಗಿದೆ. ನವರಾತ್ರಿಯ ಮೊದಲ ದಿನವೇ ದಂಪತಿ ಕುಟುಂಬಕ್ಕೆ ದೇವಿ ಆಗಮಿಸಿದ್ದಾಳೆ. ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ಆಗಮಿಸಿದರು. ತಾಯಿ ಹಾಗೂ ಮಗುವಿನ ಆರೋಗ್ಯದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಸಿಜೇರಿಯನ್ ಮಾಡಲಾಯಿತು. ಸದ್ಯ ತಾಯಿ ಹಾಗೂ ಮಗು ಇಬ್ಬರು ಕ್ಷೇಮವಾಗಿದ್ದಾರೆ’ ಎಂದರು. ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಕುಟುಂಬದವರೂ ಈ ಸಂದರ್ಭದಲ್ಲಿದ್ದರು.

ಮಗು ಜನಿಸಿದಾಗ ಭಾವುಕನಾಗಿದ್ದೆ, ಬಳಿಕ ಖುಷಿಯಾಯಿತು. ಇದೊಂದು ಅದ್ಭುತ ಪ್ರಯಾಣ. ಇದರಲ್ಲಿ ಹರ್ಷಿಕಾ ಜತೆಗೆ ನಾನು ಭಾಗಿಯಾಗಿದ್ದೇನೆ ಎಂಬ ಖುಷಿಯಿದೆ. ಪ್ರತಿಯೊಬ್ಬ ಗಂಡನೂ ಹೆಂಡತಿಯ ಹೆರಿಗೆಯ ನೋವಿನ ಕ್ಷಣಗಳನ್ನು ನೋಡಬೇಕು. ಇದರಿಂದ ಹೆಣ್ಣಿನ ಎಲ್ಲ ಕಷ್ಟಗಳು ನಮಗೆ ಅರಿವಾಗುತ್ತವೆ.
ಭುವನ್ ಪೊನ್ನಣ್ಣ, ನಟ

ಹೆಣ್ಣು ಮಗು ಜನಿಸಿರುವುದು ನಮಗೆ ದೇವರ ವರಪ್ರಸಾದ ಎಂದೇ ಭಾವಿಸುವೆ. ಮಗುವಿನ ನಾಮಕರಣಕ್ಕೆ ಸಂಬಂಧಿಸಿದಂತೆ ಹಲವರು ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ದೇವಿ ಹೆಸರನ್ನಿಡಿ ಎಂದು ಸೂಚಿಸುತ್ತಿದ್ದಾರೆ. ಆದರೆ, ಇನ್ನು ಯಾವ ಹೆಸರನ್ನು ೈನಲ್ ಮಾಡಿಲ್ಲ. ಜಾತಕ ಎಲ್ಲವನ್ನೂ ನೋಡಿ ನಿರ್ಧರಿಸುತ್ತೇವೆ. ಸದ್ಯಕ್ಕೆ ಭುವನ್ ಮಗುವಿಗೆ ‘ಕುಕ್ಕೀ’ ಎನ್ನುತ್ತಿದ್ದಾರೆ.
ಹರ್ಷಿಕಾ ಪೂಣಚ್ಚ, ನಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net