ಸೌಹಾರ್ದವೇ ಹಬ್ಬ ಶಾಂತಿ ಸಭೆ

sripal
Published on

ಶಿವಮೊಗ್ಗ: ಗಣೇಶ ಮೂರ್ತಿ ಮೆರವಣಿಗೆ ಮತ್ತು ಈದ್ ಮಿಲಾದ್ ಮೆರವಣಿಗೆಯಲ್ಲಿ ಶಾಂತಿ ಕಾಪಾಡಿಕೊಂಡು ಸಾಮರಸ್ಯದಿಂದ ಹಬ್ಬಗಳನ್ನು ಆಚರಿಸುವುದಕ್ಕೆ ಪೂರಕವಾಗಿ ನಮ್ಮ ನಡೆ-ಶಾಂತಿಯ ಕಡೆ ಸಮಿತಿಯು ಸೆ.4ರ ಮಧ್ಯಾಹ್ನ 4.30ಕ್ಕೆ ಅಂಬೇಡ್ಕರ್ ಭವನದಲ್ಲಿ ಸೌಹಾರ್ದವೇ ಹಬ್ಬ ಶಾಂತಿ ಸಭೆ ಹಮ್ಮಿಕೊಂಡಿದೆ ಎಂದು ವಕೀಲ ಕೆ.ಪಿ.ಶ್ರೀಪಾಲ್ ಹೇಳಿದರು.

ಅಂದು ಮಧ್ಯಾಹ್ನ 4ಕ್ಕೆ ಗೋಪಿ ವೃತ್ತದಲ್ಲಿ ಮಾನವ ಸರಪಳಿ ರಚಿಸಲಾಗುವುದು. ಎಲ್ಲ ಧರ್ಮದ ಗುರುಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಅಂಬೇಡ್ಕರ್ ಭವನದಲ್ಲಿ ನಡೆಯುವ ಶಾಂತಿ ಸಭೆಯಲ್ಲಿ ವಿವಿಧ ಮಠಾಧೀಶರು, ಮುಸ್ಲಿಂ ಧಾರ್ಮಿಕ ಗುರುಗಳು, ಚರ್ಚ್‌ನ ಪಾದ್ರಿಗಳು, ಜಿಲ್ಲಾಧಿಕಾರಿ, ಎಸ್ಪಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದೇ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಗಾಯಕ ಕೆ.ಯುವರಾಜ್, ಹಿಂದುಸ್ತಾನಿ ಗಾಯಕ ಇಮ್ತಿಯಾಜ್ ಸುಲ್ತಾನ್ ಅವರಿಂದ ಗಾಯನ, ರಂಗಬೆಳಕು ತಂಡದಿಂದ ರಂಗಗೀತೆಗಳನ್ನು ಏರ್ಪಡಿಸಲಾಗಿದೆ ಎಂದರು.

ಡಿಎಸ್‌ಎಸ್ ಮುಖಂಡ ಎಂ.ಗುರುಮೂರ್ತಿ, ಪ್ರಮುಖರಾದ ಕಿರಣ್‌ಕುಮಾರ್, ಪಾಲಾಕ್ಷಿ, ನಾಗರಾಜ್ ಕಂಕಾರಿ, ಮಹಮ್ಮದ್ ಹುಸೇನ್, ಅಬ್ದುಲ್ ವಹಾಬ್, ಅಫ್ತಾಫ್ ಪರ್ವೀಜ್, ಹರಿಗೆ ರವಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net