ಪ್ರಧಾನಮಂತ್ರಿ ಆಪ್ತ ಕಾರ್ಯದರ್ಶಿಯಾಗಿ ಹಾರ್ದಿಕ್ ಸತೀಶ್​ಚಂದ್ರ ಷಾ ನೇಮಕ

PM
Published on

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಪ್ತ ಕಾರ್ಯದರ್ಶಿಯಾಗಿ (personal secretary) ಹಾರ್ದಿಕ್ ಸತೀಶ್​ಚಂದ್ರ ಷಾ ಅವರು ಇಂದು ನೇಮಕಗೊಂಡಿದ್ದಾರೆ.

ಹಾರ್ದಿಕ್​ ಸತೀಶ್​ಚಂದ್ರ ಷಾ ಅವರು ಗುಜರಾತ್​ ಕೇಡರ್​​ನ 2010ನೇ ಬ್ಯಾಚ್​​ನ ಐಎಎಸ್​ ಅಧಿಕಾರಿ. ಇಲ್ಲಿಯವರೆಗೆ ಪ್ರಧಾನಿ ಕಚೇರಿಯಲ್ಲಿ ಉಪ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಇದೀಗ ಪ್ರಧಾನಿ ಆಪ್ತ ಕಾರ್ಯದರ್ಶಿಯಾಗಿ ಹಾರ್ದಿಕ್​ ಅವರ ನೇಮಕಕ್ಕೆ ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net