ಹರ್ದಾ: ಸ್ಫೋಟ ಸಂಭವಿಸಿ 18 ಗಂಟೆಗಳ ನಂತರವೂ ಉರಿಯುತ್ತಿರುವ ಬೆಂಕಿ; ಇಲ್ಲಿದೆ ವಿಡಿಯೋ

blast
Published on

ಮಧ್ಯಪ್ರದೇಶ: ಹರ್ದಾ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಇನ್ನೂ ಸಂಪೂರ್ಣವಾಗಿ ನಂದಿಸಲಾಗಿಲ್ಲ. ಅವಶೇಷಗಳಲ್ಲಿ ಬೆಂಕಿ ಇನ್ನೂ ಉರಿಯುತ್ತಿದೆ. ಅಲಲ್ಲಿ ಸ್ಫೋಟಗಳು ಸಂಭವಿಸುತ್ತಿವೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಆಡಳಿತ ಮಂಡಳಿ ಕಸದ ರಾಶಿಯನ್ನು ತೆಗೆಯುತ್ತಿದೆ.

ಸ್ಫೋಟ ಸಂಭವಿಸಿ 18 ಗಂಟೆ ಕಳೆದರೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಿಲ್ಲ. ದಲ್ಕಂ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಅಲ್ಲದೆ, ಅವಶೇಷಗಳಲ್ಲಿ ಉಳಿದಿರುವ ಗನ್‌ಪೌಡರ್‌ನಿಂದ ಸ್ಫೋಟ ಸಂಭವಿಸುತ್ತಲೆ ಇದೆ. ಪಟಾಕಿ ಕಾರ್ಖಾನೆಯ ಅವಶೇಷಗಳನ್ನು ತೆಗೆದು ಜನರ ಹುಡುಕಾಟ ನಡೆಸಲಾಗುತ್ತಿದೆ.

ಅಪ್‌ಡೇಟ್ ವಿಡಿಯೋ 

ಹರ್ದಾ  ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಒಂದು ದಿನದ ನಂತರ ವಿಡಿಯೋ ಕಾಣಿಸಿಕೊಂಡಿದೆ. ಈ ವಿಡಿಯೋದಲ್ಲಿ ಕಾರ್ಖಾನೆಯ ಅವಶೇಷಗಳಿಂದ ಹೊಗೆ ಏಳುತ್ತಿರುವುದನ್ನು ಕಾಣಬಹುದು. ಅವಶೇಷಗಳ ಬಳಿ ಹಲವಾರು ಅಗ್ನಿಶಾಮಕ ವಾಹನಗಳನ್ನು ನಿಲ್ಲಿಸಲಾಗಿದೆ. ರಕ್ಷಣಾ ತಂಡದ ಸಿಬ್ಬಂದಿ ಅವಶೇಷಗಳನ್ನು ತೆಗೆದು ಜನರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬೆಂಕಿ ನಂದಿಸದ ಕಡೆ ನೀರು ಸುರಿಯಲಾಗುತ್ತಿದೆ.

ಬುಲ್ಡೋಜರ್ ಮೂಲಕ ಅವಶೇಷಗಳನ್ನು ತೆಗೆಯಲಾಗುತ್ತಿದೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳೊಂದಿಗೆ ಸ್ಥಳೀಯ ಆಡಳಿತ ಅಧಿಕಾರಿಗಳು ಸಹ ಸ್ಥಳದಲ್ಲಿದ್ದಾರೆ. ಅಕ್ಕಪಕ್ಕದ ಮನೆಗಳ ಬೆಂಕಿ ಹತೋಟಿಗೆ ಬಂದಿದೆ. ಈ ದುರ್ಘಟನೆಯಿಂದ ಈ ಭಾಗದ ಜನರು ಭಯಭೀತರಾಗಿದ್ದು, ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಧ್ಯಪ್ರದೇಶದ ಹರ್ದಾ ಜಿಲ್ಲೆಯಲ್ಲಿ ನಿನ್ನೆ (ಮಂಗಳವಾರ) ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟವು ಜನರನ್ನು ಬೆಚ್ಚಿಬೀಳಿಸಿದೆ. ಸ್ಫೋಟದಿಂದಾಗಿ ಸಮೀಪದ ಮನೆಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ದುರ್ಘಟನೆಯಲ್ಲಿ ಇದುವರೆಗೆ 11 ಮಂದಿ ಸಾವನ್ನಪ್ಪಿದ್ದು, 175 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net