

ಹರಪನಹಳ್ಳಿ (ವಿಜಯನಗರ): ಚಾಲಕನ ನಿಯಂತ್ರಣ ತಪ್ಪಿ ಕಂದಕ್ಕೆ ಖಾಸಗಿ ಬಸ್ ಉರುಳಿದ ಘಟನೆ ತಾಲೂಕಿನ ಅಣಜೀಗೆರೆ ಬಳಿ ಮಂಗಳವಾರ ಸಂಜೆ ನಡೆದಿದ್ದು, ಭಾರಿ ಅನಾಹುತ ತಪ್ಪಿದೆ.
ದಾವಣಗೆರೆಯಿಂದ ಉಚ್ಚಂಗಿದುರ್ಗ ಮಾರ್ಗವಾಗಿ ತೆರಳುತ್ತಿದ್ದ ಖಾಸಗಿ ಬಸ್ ತಾಲೂಕಿನ ಅಣಜೀಗೆರೆ ಮತ್ತು ಜಂಗಮ ತುಂಬಿಗೆರೆ ಮಾರ್ಗ ಇರುವ ಸೇತುವೆಯಲ್ಲಿ ಬಸ್ ತಾಂತ್ರಿಕ ತೊಂದರೆಯಿಂದ ಘಟನೆ ನಡೆದಿದೆ.
ಹಳ್ಳದ ಎಡ ಬದಿಯ ಕಂದಕಕ್ಕೆ ಬಸ್ ಉರುಳಿ ಬಿದ್ದಿದೆ, ಬಸ್ ನಲ್ಲಿ 40 ಕ್ಕೂ ಅಧಿಕ ಜನ ಪ್ರಯಾಣಿಸುತ್ತಿದ್ದರು. ಅದರಲ್ಲಿ ತಾಲೂಕಿನ ಹೊಸಕೋಟೆ ಗ್ರಾಮದ ಒಬ್ಬ ಮಹಿಳೆ ಮತ್ತು ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ. ಉಳಿದಂತೆ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.