ದೆಹಲಿ ಗಣರಾಜ್ಯೋತ್ಸವ ಪರೇಡ್‌ಗೆ ಅವನಿ ಗಂಗಾವತಿ ಆಯ್ಕೆ: ಕರ್ನಾಟಕ-ಗೋವಾ ಒಳಗೊಂಡ ತಂಡದ ಪ್ರತಿನಿಧಿ

Avani Gangavati
ಅವನಿ ಗಂಗಾವತಿ.
Published on

ಹನುಮಸಾಗರ: ಪಟ್ಟಣದ ನಿವಾಸಿ, ಬಳ್ಳಾರಿಯ ಕೇಂದ್ರಿಯ ವಿದ್ಯಾಲಯದಲ್ಲಿ 9ನೇ ತರಗತಿ ಓದುತ್ತಿರುವ ಅವನಿ ಗಂಗಾವತಿ, ಜ.26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್‌ಗೆ ಆಯ್ಕೆಯಾಗಿದ್ದಾರೆ.

ದೆಹಲಿ ಗಣರಾಜ್ಯೋತ್ಸವಕ್ಕೆ ಕಲ್ಚರಲ್ ಇವೆಂಟ್ಸ್‌ಗಾಗಿ ಬಳ್ಳಾರಿ, ಕಲಬುರಗಿ, ವಿಜಯಪುರ, ಗದಗ, ಬಾಗಲಕೋಟೆ, ದಾವಣಗೆರೆ, ಬೀದರ್, ರಾಯಚೂರು ಜಿಲ್ಲೆಗಳನ್ನೊಳಗೊಂಡ ಬಳ್ಳಾರಿ ಎನ್‌ಸಿಸಿ ಗ್ರೂಪ್‌ನ ಜೂನಿಯರ್ ವಿಂಗ್‌ನಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿನಿ. ಕರ್ನಾಟಕ ಮತ್ತು ಗೋವಾ ಒಳಗೊಂಡ ತಂಡವನ್ನು ಅವನಿ, ಪ್ರತಿನಿಧಿಸುತ್ತಿದ್ದಾರೆ. ವಿದ್ಯಾರ್ಥಿನಿ ಸಾಧನೆಗೆ ಬಳ್ಳಾರಿಯ 34 ಬೆಟಾಲಿಯನ್‌ನ ಕಮಾಂಡಿಂಗ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಪುನೀತ್ ಲೆಹಲ್, ಅಡ್ಮಿನಿಸ್ಟ್ರೇಟಿವ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಪಿಯೂಷ್ ಕೃಷ್ಣ, ಪ್ರಾಚಾರ್ಯ ವಿಶ್ವನಾಥ್, ಶಾಲೆಯ ಎನ್‌ಸಿಸಿ ಆಫೀಸರ್ ರಾಜಶೇಖರ್ ಜಿ. ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net