ಗ್ಲಾಸ್ಗೋ: ಕಳೆದ ವರ್ಷ ಪಹಲ್ಗಾಮ್ನಲ್ಲಿ ಪಾಕ್ ಉಗ್ರರ ದಾಳಿ ಬಳಿಕ ಭಾರತ ಆಪರೇಷನ್ ಸಿಂಧೂರ್ ಮೂಲಕ ಪ್ರತಿಕಾರ ತೀರಿಸಿಕೊಂಡಿತ್ತು. ನಂತರದಲ್ಲಿ ಕ್ರಿಕೆಟ್ ಸೇರಿದಂತೆ ಬಹುತೇಕ ಎಲ್ಲ ಕ್ರೀಡೆಗಳಲ್ಲಿ ಭಾರತೀಯರು, ಪಾಕ್ ಕ್ರೀಡಾಪಟುಗಳಿಗೆ ಹಸ್ತಲಾಘವ ನೀಡಲು ನಿರಾಕರಿಸಿದ್ದರು. ಆದರೆ ಹಾಲಿ ಕಾಮನ್ವೆಲ್ತ್ ಗೇಮ್ಸ್ನಲ್ಲಿ (Commonwealth Games) ಪಾಕ್ ಕ್ರೀಡಾಪಟುಗಳು ಎದುರಾದಾಗ ಹಸ್ತಲಾಘವ, ಹೈಫೈವ್ಸ್ ನೀಡಬಹುದು ಅಥವಾ ಕುಶಲೋಪರಿ ವಿಚಾರಿಸಬಹುದು ಎಂದು ಕೇಂದ್ರ ಸರ್ಕಾರ ಅನುಮತಿ ನೀಡಿದ್ದರೂ, ಪಾಕಿಸ್ತಾನಿಯರಿಂದ ಉಡುಗೊರೆಗಳನ್ನು ಸ್ವೀಕರಿಸುವಂತಿಲ್ಲ ಎಂಬ ನಿರ್ಬಂಧವನ್ನು ಹೇರಿದೆ.