VIDEO| ಎಲೆಕ್ಟ್ರಿಕ್​ ವೀಲ್​ಚೇರ್​ ಓಡಿಸುತ್ತಾ ಡೆಲಿವರಿ ಬಾಯ್​ ಆಗಿ ಕೆಲಸ ಮಾಡುವ ಅಂಗವಿಕಲ!

zomato
Published on

ನವದೆಹಲಿ: ಜಗತ್ತಿನಲ್ಲಿ ಅನೇಕ ರೀತಿಯ ಸಂಕಷ್ಟಗಳಿಂದ ಜನರು ಬಳಲುತ್ತಿರುತ್ತಾರೆ. ನಮಗಿಂತ ಕಷ್ಟದಲ್ಲಿ ಇರುವವರನ್ನು ನೋಡಿ ಕಲಿಯಬೇಕು, ಸಮಾಧಾನ ಮಾಡಿಕೊಳ್ಳಬೇಕು ಎಂದು ಹಿರಿಯರು ಹೇಳಿದ್ದಾರೆ. ಒಟ್ಟಿನಲ್ಲಿ ಏನೇ ಕಷ್ಟ ಎದುರಾದರೂ ಜೀವನೋತ್ಸಾಹ ಮಾತ್ರ ಮರೆಯಬಾರದು ಎನ್ನುವುದು ಒಟ್ಟಾರೆ ಸಂದೇಶ.

ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಒಂದು ಹರಿದಾಡುತ್ತಿದ್ದು ಅಂಗವಿಕಲನೊಬ್ಬ ಎಲೆಕ್ಟ್ರಿಕ್​ ವೀಲ್​ ಚೇರ್​ನ ಬಳಸಿಕೊಂಡು ಡೆಲಿವರಿ ಬಾಯ್​ ಆಗಿ ಕೆಲಸ ಮಾಡುತ್ತಿರುವುದನ್ನು ಕಾಣಬಹುದು. ಈ ಬಗ್ಗೆ ಜನರು ಮೆಚ್ಚುಗೆ ಸೂಚಿಸಿದ್ದು ಖುದ್ದು ಜೊಮ್ಯಾಟೋ ಆತನನ್ನು ನಮ್ಮ ಹೀರೊ ಎಂದು ಕರೆದಿದೆ.

ಕಾಮೆಂಟ್​ ವಿಭಾಗದಲ್ಲೂ ಜನರು ಈ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದು ಆತನ ಜೀವನೋತ್ಸಾಹವನ್ನು ಮೆಚ್ಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net