

ಹಾವೇರಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಇಲ್ಲಿಯ ರಾಜೇಂದ್ರ ನಗರ ಕಾರ್ಯಾಲಯದಲ್ಲಿ ಭಾನುವಾರ ಹಾನಗಲ್ಲ ಶ್ರೀ ಕುಮಾರ ಸ್ವಾಮೀಜಿಯವರ 157ನೇ ಜಯಂತಿ ಆಚರಿಸಲಾಯಿತು.
ಸಂಟನೆಯ ಜಿಲ್ಲಾಧ್ಯಕ್ಷ ಎಂ.ಎಸ್. ಕೋರಿಶೆಟ್ಟರ ಮಾತನಾಡಿ, ಕುಮಾರ ಸ್ವಾಮೀಜಿಯವರು ಕರ್ನಾಟಕದಲ್ಲಿ ಬಹುಸಂಖ್ಯಾತ ಇರುವ ವೀರಶೈವ ಲಿಂಗಾಯತರು ಹರಿದು ಹಂಚಿ ಹೋಗು ಬಾರದು ಅನ್ನುವ ದೂರ ದೃಷ್ಟಿಯಿಂದ 1904ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪನೆ ಮಾಡಿದರು.
ಅದಕ್ಕೆ ಅವರೇ ಸಂಸ್ಥಾಪಕ ಅಧ್ಯಕ್ಷರಾಗ ಬಹುದಿತ್ತು. ಆದರೆ ಅವರು ಆಗದೆ ಅಂದಿನ ಸಮಾಜದ ಹಿರಿಯರು ಶಿಕ್ಷಣ ಪ್ರೇಮಿಗಳಾದ ಶಿರಸಂಗಿ ಲಿಂಗರಾಜ್ ದೇಸಾಯಿ ಅವರನ್ನು ಸಂಸ್ಥಾಪಕ ಅಧ್ಯಕ್ಷರನ್ನಾಗಿ ಮಾಡಿದ ಶ್ರೇಯಸ್ಸು ಹಾನಗಲ್ಲ ಕುಮಾರ ಸ್ವಾಮೀಜಿ ಅವರಿಗೆ ಸಲ್ಲುತ್ತದೆ ಎಂದರು.
ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಶಂಭು ಚಕ್ಕಡಿ, ತಾಲೂಕು ಘಟಕದ ಪ್ರಧಾನ ಕಾರ್ಯದಶಿರ್ ಪ್ರಭಪ್ಪ ಮರಗೂರ, ಯುವ ನಾಯಕ ಅಭಿಷೇಕ ಉಪ್ಪಿನ, ಕಾತಿರ್ಕ ನಂದಿ, ಗುರು ಸಾತೇನಹಳ್ಳಿ, ಮಹೇಶ ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು.