

ಹೊಸಪೇಟೆ: ಪರಂಪರಾಗತವಾಗಿ ಮಂತ್ರಾಲಯ ಮಹಾ ಸಂಸ್ಥಾನಕ್ಕೆ ಸೇರಿದ ಶ್ರೀ ಮೂಲ ರಾಮ ದೇವರನ್ನು ಮರಳಿ ಶ್ರೀಮಠಕ್ಕೆ ತಂದುಕೊಟ್ಟವರು ಶ್ರೀರಘುನಂದನ ತೀರ್ಥರು ಎಂದು ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರ ತೀರ್ಥ ಶ್ರೀಗಳು ತಿಳಿಸಿದರು.
ಹಂಪಿಯಲ್ಲಿ ಶನಿವಾರ ಶ್ರೀರಘುನಂದನ ತೀರ್ಥರ ಮಠದಲ್ಲಿ ಮಧ್ಯಾರಾಧನೆ ಪ್ರಯುಕ್ತ ಅಪರೋಕ್ಷ ಜ್ಞಾನಿಗಳು ರಚಿಸಿದ ಶ್ರೀಮೂಲರಾಮದೇವರ ಕೀರ್ತನೆಗಳ ಶತಕಂಠ ಗಾನ ಕಾರ್ಯಕ್ರಮದ ಘನಾಧ್ಯಕ್ಷತೆವಹಿಸಿ ಮಾತನಾಡಿದರು.
ಹಂಪಿಯಲ್ಲಿ ಸೀತಾ ದೇವಿ ಅನ್ವೇಷಣೆಯಲ್ಲಿ ಈ ಭಾಗಕ್ಕೆ ಶ್ರೀರಾಮನು ಬಂದಿದ್ದು ಉಲ್ಲೇಖವಿದೆ. ನಾಲ್ಕು ಯುಗ ಹೊಂದಿರುವ ನಾಡಿದು. ಹರಿದಾಸು ಯತಿಗಳು ಓಡಾಡಿದ ಪುಣ್ಯ ಭೂಮಿ ಮಾತ್ರವಲ್ಲದ್ದೇ ಹನುಮನ ನಾಡಾಗಿದೆ. ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯನಿಗೆ ವೈದಿಕ ವಿದ್ಯಾಗಳನ್ನು ಹೇಳಿಕೊಟ್ಟವರು ಶ್ರೀರಾಘವೇಂದ್ರ ಗುರುಗಳ ಪೂರ್ವಾಶ್ರಮದ ತಾತ, ಮುತ್ತಾಂದಿರು. ಸರ್ವೋತ್ತಮ ಹಾಗೂ ಜೀವೋತ್ತಮ ಓಡಾಡಿದ ನೆಲವಿದು. ಪರಕೀಯರ ಕುತಂತ್ರದಿAದ ಅಪಹರಿಸಿದ ಶ್ರೀ ಮೂಲ ರಾಮ ದೇವರನ್ನು ಮಂತ್ರಾಲಯ ಮಠಕ್ಕೆ ಮರಳಿ ತಂದವರು ಶ್ರೀರಘುನಂದನ ತೀರ್ಥರು. ಕೃತಿ ಶ್ರೀ ಮುಲ ರಾಮ ಸತ್ಯನೆಲೆಯನ್ನು ಅಧ್ಯಾಯನ ಮಾಡಿದರೆ ಮೂಲರಾಮರ ಬಗ್ಗೆ ಅರಿಯ ಬಹುದು. ಸನಾತನ ದರ್ಮದ ಏಕೈಕ ನಾಡು ಈ ಹಂಪಿ. ಈ ನೆಲದಲ್ಲಿ ಹುಟ್ಟಿರುವ ನಾವುಗಳು ಪುಣ್ಯವಂತರು. ಈ ನೆಲದಲ್ಲಿನ ಈ ಕುರುಹುಗಳನ್ನು ರಕ್ಷಣೆ ಮಾಡಬೇಕಾದು ಕೇವಲ ಸರ್ಕಾರವಲ್ಲ, ನಮ್ಮ ನಮ್ಮೇಲರ ಜವಾಬ್ದಾರಿ ಕೂಡ ಇದೆ. ಈ ನೆಲದ ಮಹತ್ವ ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯ ನಡೆಯಬೇಕಿದೆ. ಹಂಪಿಯಲ್ಲಿ ಶ್ರೀರಘುನಂದನ ತೀರ್ಥರ ಗುರುಗಳಾದ ಶ್ರೀ ಸುರೇಂದ್ರ ತೀರ್ಥರ ಬೃಂದಾವನ, ಮಠವೂ ಕಳೆದ ಕೆಲ ವರ್ಷಗಳ ಹಿಂದೆ ಉತ್ಖನ ಸಂದರ್ಭದಲ್ಲಿ ಪತ್ತೆಯಾಗಿದೆ. ಇಲ್ಲಿಯ ನೀತಿ ನಿಯಮಗಳಂತೆ ಮುಂದಿನ ದಿನಗಳಲ್ಲಿ ಜೀರ್ಣೋದ್ಧಾರ ಪೂಜಾ ಕಾರ್ಯ ನಡೆಸಲಾಗುವುದು ಎಂದು ಹೇಳಿದರು.
ಶ್ರೀರಘುನಂದನ ತೀರ್ಥರ ಮಧ್ಯಾರಾಧನೆ ನಿಮಿತ್ತ ಬೆಳಿಗ್ಗೆ ಮೂಲ ಬೃಂದಾವನಕ್ಕೆ ವಿಶೇಷವಾಗಿ ಫಲ ಪಂಚಾಮೃತಾಭಿಷೇಕ, ರಜತ, ರೇಷ್ಮೆ ಹಾಗೂ ವಸ್ತ್ರಾಲಂಕಾರ ನೆರವೇರಿಸಲಾಯಿತು. ಬಳಿಕ ವಿವಿಧ ಹೂವುಗಳಿಂದ ಮೂಲ ಬೃಂದಾವನಕ್ಕೆ ಅಲಂಕಾರಮಾಡಲಾಯಿತು. ಶ್ರೀಗಳು ಶ್ರೀ ಮೂಲರಾಮದೇವರ ಸಂಸ್ಥಾನ ಪೂಜೆ ನೆರವೇರಿಸಿ ನೆರೆದಿದ್ದ ಭಕ್ತರಿಗೆ ದರ್ಶನ ಮಾಡಿಸಿದರು. ಬಳಿಕ ನೈವೇದ್ಯ, ಹಸ್ತೋದಕ ನೆರವೇರಿಸಿ ಮಹಾಮಂಗಳಾರತಿ ನೆರವೇರಿಸಿದರು. ಬಂದ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು. ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ರಾಜ್ಯ ಸಂಚಾಲಕ ಸುಳಾದಿ ಹನುಮೇಶಾಚಾರ್ಯ ಶತಕಂಠ ಗಾನ ಕಾರ್ಯಕ್ರಮ ನಡೆಸಿಕೊಟ್ಟರು.
ಶ್ರೀಮಠದ ಪಂಡಿತರಾದ ವೇಣುಗೋಪಾಲ ಆಚಾರ್ಯ, ಕನಕಾಚಲಾಚಾರ್ಯ, ಶ್ರೀಮಠದ ಅನಂತ ಪುರಾಣಿಕ್, ವಿಭಾಗೀಯ ವ್ಯವಸ್ಥಾಪಕ ಗುರುರಾಜ್ ದಿಗ್ಗಾವಿ, ಮಠಾಧಿಕಾರಿ ಪವನಾಚಾರ್ಯ, ವ್ಯವಸ್ಥಾಪಕರಾದ ಸುಮಂತ್ ಕುಲಕರ್ಣಿ, ಟೀಕಾಚಾರ್ಯ, ಕೃಷ್ಣಮೂರ್ತಿ, ಪ್ರಮುಖರಾದ ಭೀಮಸೇನಾಚಾರ್ಯ, ಶಿರೆಕೊಳ್ಳ ಗುರುರಾಜ್, ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಜಿಲ್ಲಾ ಕೋ-ಆರ್ಡಿನೇಟರ್ ಅನಂತ ಪದ್ಮನಾಭ ಇತರರಿದ್ದರು.