ವಿದ್ಯಾರ್ಥಿಗಳ ಅಗಲಿಕೆಗೆ ಗದ್ಗದಿತರಾದ ಶ್ರೀಸುಬುಧೇಂದ್ರ ಶ್ರೀ

22 MANJU 03
Published on

ಹೊಸಪೇಟೆ: ಹಂಪಿಯ ಶ್ರೀ ನರಹರಿ ತೀರ್ಥರ ಸನ್ನಿಧಿಯಲ್ಲಿ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದಿಂದ ಆರಾಧನೆಗೆ ಹೈಕೋರ್ಟ್ ದ್ವಿ ಸದಸ್ಯ ಪೀಠದ ಆದೇಶದ ಹಿನ್ನೆಲೆ ಪೀಠಾಧೀಶ್ವರ ಶ್ರೀಸುಬುಧೇಂದ್ರ ತೀರ್ಥರು ಸ್ವಾಮೀಜಿಗಳ ನೇತ್ರತ್ವದಲ್ಲಿ ಉತ್ತರಾಧಾನೆ ಬುಧವಾರ ಜರುಗಿತು.

ಶ್ರೀ ನರಹರಿ ತೀರ್ಥರ ಬೃಂದಾವನ ಸನ್ನಿಧಿಯಲ್ಲಿ ಮೂಲ ರಾಮದೇವರ ಸಂಸ್ಥಾನ ಪೂಜೆ ನೆರವೇರಿಸಿದರು. ಆರಾಧನೆ ಹಿನ್ನೆಲೆಯಲ್ಲಿ ಮಂತ್ರಾಲಯದಿಂದ ಹಂಪಿಗೆ ಬರುವ ಸಂದರ್ಭದಲ್ಲಿ ಶ್ರೀಮಠದ ಸಂಸ್ಕೃತ ವಿದ್ಯಾಪೀಠದ ಮೂವರು ವಿದ್ಯಾರ್ಥಿಗಳು ಹಾಗೂ ಚಾಲಕ ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆ ವಿಜಯಯೋತ್ಸವ ಮಾಡದೆ, ಶ್ರೀಮಠದ ಸಂಪ್ರದಾಯದAತೆ ಅನೂಚಾನವಾಗಿ ಬಂದ ಆಚಾರಣೆಯಂತೆ ನೆರವೇರಿಸಲಾಯಿತು.

ಬೃಂದಾವನ ಸನ್ನಿಧಿಯಲ್ಲಿ ನೆರೆದಿದ್ದ ಭಕ್ತರನ್ನುದ್ದೇಶಿಸಿ ಮಾತನಾಡಿದ ಶ್ರೀಗಳು, ವಿದ್ಯಾಪೀಠದ ಮೂವರು ವಿದ್ಯಾರ್ಥಿಗಳು ಅಪಘಾತದಲ್ಲಿ ಮೃತಪಟ್ಟಿದ್ದು ಶ್ರೀಮಠಕ್ಕೆ ತುಂಬಲಾಗದ ನಷ್ಠವಾಗಿದೆ. ಚಿಕ್ಕ ಮಕ್ಕಳು ಮಠಕ್ಕೆ ಆಸ್ತ ಇದ್ದಂತೆ ಅವರ ಕುಟುಂಬದ ಜತೆ ಶ್ರೀಮಠ ಸದಾ ಇರಲೆದ್ದು ಎಲ್ಲ ಬಗೆಯ ಬೆಂಬಲ ನೀಡಲಾಗುವುದು. ಹೋದ ಜೀವಕ್ಕೆ ಬೆಲೆ ಕಟ್ಟಲಾಗದು, ಆದರೂ ಅವರ ಕುಟುಂಬಕ್ಕೆ ಆರ್ಥಿಕ, ಸಾಮಾಜಿಕ, ಧಾರ್ಮಿಕವಾಗಿ ಎಲ್ಲಾ ರೀತಿಯಿಂದಲೂ ಜತೆಗಿರುತ್ತೇವೆ ಎಂದು ಗದ್ಗದಿತರಾದರೂ.

ಶ್ರೀನರಹರಿ ತೀರ್ಥರ ಉತ್ತರಾಧಾನೆ ನಿಮಿತ್ತ ಶ್ರೀಮಠದ ಪದ್ಧತಿ ಆಚರಣೆಯಂತೆ ಬೆಳಿಗ್ಗೆ ಪಂಚಾಮೃತಾಭಿಷೇಕ, ಅರ್ಚನೆ, ರಜತ ರೇಷ್ಮೆ, ಹೂವಿನ ಅಲಂಕಾರ ನೆರವೇರಿಸಲಾಯಿತು. ಕಾಡಾ ನಿವೃತ್ತ ಇಂಜಿನಿಯರ್ ವಿ.ಪಿ.ಉದ್ಯಾಳ್, ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿದೇರ್ಶಕ ಪ್ರಹ್ಲಾದ್ ಆಚಾರ್ಯ, ರಾಜಾ ಅಪ್ರಮೇಯಾಚಾರ್ಯ, ಶ್ರೀನಿವಾಸ ರಾವ್ ಕಸಬೆ, ಮಠಾಧಿಕಾರಿಗಳಾದ ಆನಂದ್ ತೀರ್ಥ ಆಚಾರ್ಯ, ರಾಜಾ ಸುಧೀಂದ್ರ ಆಚಾರ್ಯ, ಧೀರೇಂದ್ರ ಆಚಾರ್ಯ, ಅನಿಲ್ ಹಿಂದೂಪುರ ಡಾಣಾಪುರ ಶ್ರೀನಿವಾಸ, ಡಾಣಾಪುರ ವಿಜಯ್, ಸುಳಾದಿ ಹನುಮೇಶ್ ಆಚಾರ್ಯ, ಭೀಮಸೇನಾಚಾರ್ಯ, ಪವನಾಚಾರ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net