ಜರ್ಮನ್ ಪ್ರವಾಸಿಗನ ಪರಿಸರ ಕಾಳಜಿ

04 MANJU 03
Published on

ಹೊಸಪೇಟೆ: ಇವನ ಹೆಸರು ರೋಬಿಯಾಸ್ ರಿಶ್ ಜರ್ಮನ್ ದೇಶದ ಪ್ರವಾಸಿಗ. ದೇಶಗಳನ್ನು ಸುತ್ತುವುದೇ ಇತನ ಕಾಯಕ. ಇದು ಮೋಜಿಗಲ್ಲ, ಪರಿಸರದ ಪ್ರೀತಿಗೆ. ಪ್ರಮುಖ ತಾಣಗಳಲ್ಲಿ ಪ್ರಕೃತಿಯಲ್ಲಿ ಸ್ವಚ್ಛತೆ ಮಾಡಿ, ಜಾಗೃತಿ ಮೂಡಿಸುವುದೇ ಇವನ ಉದ್ದೇಶ.

ದಕ್ಷಿಣ ಕಾಶಿ ಎಂದೇ ಖ್ಯಾತಿಯ ಹಂಪಿಗೆ ಮಂಗಳವಾರ ಆಗಮಿಸಿದ ರೋಬಿಯಾಸ್ ರಿಶ್ ತುಂಗಭದ್ರಾ ನದಿಯಲ್ಲಿ ಇತರೆ ವಿದೇಶಿ ಪ್ರವಾಸಿಗರು ಹಾಗೂ 15 ಸ್ಥಳೀಯರ ಸಹಾಯದಿಂದ ಸ್ವಚ್ಛತಾ ಕಾರ್ಯ ನಡೆಸಿದರು. ಹಂಪಿಯ ತುಂಗಭದ್ರಾ ನದಿ ದಂಡೆಯಲ್ಲಿ ಕಸ, ಬಟ್ಟೆ, ಇತ್ಯಾದಿಗಳನ್ನು ಸಂಗ್ರಹಿಸಿ ಹಂಪಿ ಗ್ರಾ.ಪಂ. ಕಸದ ವಾಹನದ ಮೂಲಕ ಡಂಪ್ ಯಾರ್ಡ್ಗೆ ಸಾಗಿಸಲಾಯಿತು. ಇನ್ನೂ ಎರಡು ವಾರಗಳ ಕಾಲ ಹಂಪಿ ಪರಿಸರದಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರೋಬಿಯಾಸ್ ರಿಶ್, ಹಂಪಿ ಕೇವಲ ಪ್ರವಾಸಿ ತಾಣ ಮಾತ್ರವಲ್ಲ, ಧಾರ್ಮಿಕ ಕ್ಷೇತ್ರ ಕೂಡ ಹೌದು. ನದಿಯಲ್ಲಿ ಪುಣ್ಯಸ್ಥಾನ ಮಾಡುತ್ತಾರೆ. ಈ ದೇಶದಲ್ಲಿ ನದಿಗಳಿಗೆ ಪೂಜ್ಯ ಭಾವನೆಯಿಂದ ನೋಡುತ್ತಾರೆ. ಇಂತಹ ದೇಶದಲ್ಲಿ ನದಿಗಳಲ್ಲಿ ತಿಳಿದು ತಿಳಿಯದೇ ಮಾಡುವ ತಪ್ಪುಗಳು ಮುಂದಿನ ಪೀಳಿಗೆಗೆ ಧಕ್ಕೆ ಆಗಲಿದೆ. ಈ ನದಿಯ ನೀರಿನಲ್ಲಿ ಔಷಧಿಯ ಗುಣಗಳಿವೆ ಎಂದು ಸ್ಥಳೀಯರು ಹೇಳುತ್ತಾರೆ. ಇನ್ನೂ ಎಲ್ಲಿ ಬೇಕಲ್ಲಿ ಪ್ಲಾಸ್ಟೀಕ್ ಕಸವನ್ನು ಹಾಕಬೇಡಿ. ಅವುಗಳನ್ನು ಧನಕರಗಳು ಸೇರದಂತೆ ಮೂಕ ಪ್ರಾಣಿಗಳು ತಿಂದು ಸಾಯುತ್ತವೆ. ಭಗವಾನ್ ಶ್ರೀ ಕೃಷ್ಣನ ನೆಲದಲ್ಲಿ ಗೋವುಗಳಿಗೆ ಒಂದು ಪ್ರಾಮುಖ್ಯತೆಯಿದೆ. ಅವುಗಳ ರಕ್ಷಣೆ ಹಾಗೂ ನದಿಯ ಪಾವಿತ್ರತೆಯನ್ನು ಕಾಪಾಡುವುದು ಎಲ್ಲ ಕರ್ತವ್ಯವಾಗಿದೆ ಎಂದರು.

ರೋಬಿಯಾಸ್ ರಿಶ್ ಅವರು, ಕಳೆದ 2024ರ ಜ.01ರಂದು ಜರ್ಮನ್ ದೇಶವನ್ನು ಬಿಟ್ಟಿದ್ದಾರೆ. ಒಟ್ಟು 25 ದೇಶಗಳನ್ನು ಸುತ್ತಿ ಜಾಗೃತಿ ಮೂಡಿಸುವ ಯೋಜನೆ ಹಾಕಿಕೊಂಡಿದ್ದಾರೆ. ಯುರೋಪ್ ದೇಶಗಳನ್ನು ಸುತ್ತಾಡಿ, ಪಾಕಿಸ್ತಾನದ ಮೂಲಕ ಭಾರತಕ್ಕೆ ಬಂದಿರುವ ರೋಬಿಯಾಸ್ ರಿಶ್‌ಗೆ 6ನೇ ದೇಶವಾಗಿದೆ. ಮಹಾರಾಷ್ಟ, ಗೋವಾ ಮೂಲಕ ಹಂಪಿಗೆ ಆಹಮಿಸಿದ ರೋಬಿಯಾಸ್ ರಿಶ್ ಮುಂದೆ ನೇಪಾಳ್ ಮೂಲಕ ಚೀನಾ, ಆಸ್ಟೆçÃಲಿಯಾ ದೇಶಕ್ಕೆ ಹೋಗಿ ಸ್ವಚ್ಛತೆ ಜಾಗೃತಿ ಮೂಡಿಸಲಿದ್ದಾರೆ. ಆದರೆ, ಮತ್ತೆ ಸ್ವದೇಶಕ್ಕೆ ಯಾವಗ ಹೋಗುತ್ತಾರೆ ಎಂಬುದು ಗೊತ್ತಿಲ್ಲ ಎನ್ನುತ್ತಾರೆ ರೋಬಿಯಾಸ್ ರಿಶ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net