ದುಬಾರಿ ಹಂಪಿಗೆ ಪ್ರವಾಸಿಗರು ದಂಗು

28 MANJU 01
Published on

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

ವಿಶ್ವವಿಖ್ಯಾತ ಹಂಪಿಗೆ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುವುದು ಸಾಮಾನ್ಯ. ಆದರೆ ಕಳೆದ ಒಂದು ವಾರದಲ್ಲಿ ಐದು ಲಕ್ಷಕ್ಕೂ ಅಧಿಕ ಜನರು ಬೇಟಿ ನೀಡಿದ್ದಾರೆ. ಆದರೆ, ಇಲ್ಲಿನ ವಸತಿ, ಊಟ, ಸಾರಿಗೆ ಸೇರಿದಂತೆ ಇತರೆ ಸೌಕರ್ಯಗಳು ದುಬಾರಿಯಾಗಿದ್ದು, ಪ್ರವಾಸಿಗರು ದಂಗಾಗಿದ್ದಾರೆ.

ಹAಪಿ ಎಂದರೆ ಸಾಕು ಐತಿಹಾಸಿಕ, ಧಾರ್ಮಿಕ ಹಾಗೂ ವಿಸ್ಮಯದಿಂದ ಕೂಡಿತ ತಾಣವಾಗಿದ್ದು ಅಂತರಾಷ್ಟಿçÃಯ ಮಟ್ಟದಲ್ಲೂ ಪ್ರಶಿದ್ಧಿ ಪಡೆದಿದೆ. ಇಲ್ಲಿ ದೇಶ-ವಿದೇಶಿಗರು ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಕ್ರೀಸ್‌ಮಸ್ ಹಬ್ಬ, ನಾಲ್ಕನೇ ಶನಿವಾರ, ವಿಕೇಂಡ್ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ದಿನಕ್ಕೆ 50ರಿಂದ 70 ಸಾವಿರದ ವರೆಗೆ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಕಳೆದ ಒಂದು ವಾರದಲ್ಲಿ 5 ಲಕ್ಷಕ್ಕೂ ಅಧಿಕ ಪ್ರವಾಸಿಗರು ಬೇಟಿ ನೀಡಿದ್ದರಿಂದ ಹಂಪಿಯ ಬಹುತೇಕ ಸ್ಮಾರಕಗಳ ಆವರಣ ಪ್ರವಾಸಿಗರು ತುಂಬಿಕೊAಡಿದ್ದರು.

ಹAಪಿಗೆ ಬರುವ ಪ್ರವಾಸಿಗರಿಗೆ ಹೊಟೇಲ್, ಲಾಡ್ಜ್ ಸೇರಿ ಊಟ ಉಪಚಾರದಲ್ಲೂ ದುಪ್ಪಟು ಬೆಲೆಗೆ ಬಿಸಿ ತಟ್ಟುತ್ತದೆ. ಆದರೆ ಕಳೆ ಕೆಲ ದಿನಗಳಂದ ಹಂಪಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು ಬೆಲೆ ಏರಿಕೆಗೆ ಮಿತಿಯಿಲ್ಲದಂತಾಗಿದೆ. ಒಂದು ಸಾವಿರ ರೂಪಾಯಿ ನೀಡುವ ರೂಂ ಗಳಿಗೆ ಸಾಮಾನ್ಯವಾಗಿ ಇಲ್ಲಿ ಮೂರು ಸಾವಿರ ರೂ.ಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಇತ್ತಿಚೆಗೆ ಪ್ರವಾಸಿಗರ ಹೆಚ್ಚಳದಿಂದ 5 ಸಾವಿರದಿಂದ 10 ಸಾವಿರ ರೂಪಾಯಿಗೆ ಬಾಡಿಗೆ ನೀಡುತ್ತಿದ್ದಾರೆ. ಇನ್ನೂ 25 ರೂಪಾಯಿಯ ಎಳ ನೀರು 70 ರೂ., 5 ರೂ. ಟೀ, ಕಾಫಿ 20 ರೂ., 30 ರೂ. ಉಪಹಾರ 100 ರೂ., ತಂಪು ಪಾನಿಯ ಹಾಗೂ ಐಸ್‌ಕ್ರೀಮ್‌ಗಳು ಎಂಆರ್‌ಪಿಗಿAತ 5 ರಿಂದ 20 ರೂ. ವರೆಗೆ ಹೆಚ್ಚಿನ ಬೆಲೆಗೆ ಮಾರಾಟ. ಶೌಚಕ್ಕೆ ಒಬ್ಬರಿಗೆ 50 ರೂ, ಊಟದ ದರ 250 ರಿಂದ 350 ರೂ.ಇದೆ. ಆಟೋಗಳ ಬೆಲೆಯಂತು ಹೇಳುವಂತ್ತಿಲ್ಲ. ಒಂದು ದಿನ ವಾಸ್ತವ್ಯ ಹೂಡಿ ಹಂಪಿ ಸುತ್ತಲಿನ ಪ್ರದೇಶ ಪ್ರವಾಸ ಮಾಡಬೇಕು ಎಂದರೆ ಕನಿಷ್ಠ 20ರಿಂದ 30 ಸಾವಿರ ಖರ್ಚಾಗುತ್ತಿದ್ದು ವಿಶ್ವವಿಖ್ಯಾತ ಹಂಪಿಗೆ ಭೇಟಿ ನೀಡುವ ಇಚ್ಛೆಯುಳ್ಳವರು ಮೊದಲು ಜೇಬು ಭರ್ತಿ ಮಾಡಿಕೊಳ್ಳುವಂತಾಗಿದೆ.

ಮಾರ್ಗದರ್ಶಿಗಳಿಗೆ ಹುಡುಕಾಟ

ಹಂಪಿಯಲ್ಲಿ ಸಾಮಾನ್ಯವಾಗಿ ಅಕ್ಟೋಬರ್‌ನಿಂದ ಜನವರಿಯ ವರೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತೆ. ಇತರೆ ತಿಂಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಹಂಪಿಯ ಗತವೈಭವ ಹೇಳುವ ಮಾರ್ಗದರ್ಶಿಗಳು ಕಡ್ಡಿರಾಂಪುರ ಕ್ರಾಸ್, ಕಮಲಾಪುರ, ಸಾಸಿವೆಕಾಳು ಗಣಪತಿ ಅಥವ ಪ್ರಮುಖ ಸ್ಮಾರಕಗಳ ಬಳಿ ಮಾರ್ಗದರ್ಶಿಗಳು ಇದ್ದೆ ಇರುತ್ತದೆ. ಆದರೆ ಕಳೆದ ಒಂದು ವಾರದಿಂದ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ ಬೆನ್ನಲ್ಲೆ ಮಾರ್ಗದರ್ಶಿಗಳ ಕೊರತೆ ಕಂಡಿತು. ಪ್ರವಾಸಿಗರು ಹುಡುಕಾಡಿ ಮೂಕಪ್ರೇಕ್ಷರಾಗಿ ವೀಕ್ಷಣೆ ಮಾಡುತ್ತಿದ್ದಾರೆ.

ಸುಲಿಗೆ ಮಾಡುತ್ತೀವೆ ಲಾಡ್ಗಳು

ಹಂಪಿ ಪರಿಸರದಲ್ಲಿ ಹಲವು ಹೋಟೆಲ್, ಲಾಡ್ಜ್ಗಳು ಆರಂಭವಾಗಿವೆ. ಆದರೆ ಹೊಟೇಲ್, ಲಾಡ್ಜ್ಗಳಲ್ಲಿ ಪ್ರವಾಸಿಗರನ್ನು ಸುಲಿಗೆ ಮಾಡಲಾಗುತ್ತಿವೆ. ಸ್ಟಾರ್ ಹೋಟೆಲ್‌ಗಳು ಅಲ್ಲದಿದ್ದರೂ ದುಬಾರಿ ಬೆಲೆ ತೆರುವಂತಾಗಿದೆ. ರಿಯಾಯಿತಿ ಕೇಳುವ ಪ್ರವಾಸಿಗರಿಗೆ ಮುಜುಗರ ಆಗುವಂತೆ ನಿಂದಿಸುವ ಕಾರ್ಯವೂ ನಡೆಯುತ್ತಿವೆ. ಆನ್‌ಲೈನ್ ಮೂಲಕ ಇರುವ ವ್ಯವಸ್ಥೆಯನ್ನು ಮಾಲಿಕರು ಫೂಲ್ ಮಾಡಿರುತ್ತಾರೆ. ಇತರೆ ಮೂಲಗಳಿಂದ ಮೂರುನಾಲ್ಕು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಹಂಪಿಯಿAದ ಹೊಸಪೇಟೆ 12 ಕಿ.ಮೀ ದೂರವಿದ್ದು ಅನಿವಾರ್ಯ ಪರಿಸ್ಥಿತಿಯಲ್ಲಿ ಪ್ರವಾಸಿಗರು ವಸತಿ ಪಡೆಯುತ್ತಿದ್ದಾರೆ.

ಹೆಚ್ಚುರಿ ಪಾರ್ಕಿಂಗ್, ಭದ್ರತೆ

ಹಂಪಿಯ ಆಯ ಸ್ಮಾಕರಗಳ ಬಳಿ ಒಂದಿಷ್ಟು ಪಾರ್ಕಿಂಗ್ ವ್ಯಸವಸ್ಥೆಯಿದೆ. ಆದರೆ ಪ್ರವಾಸಿಗರ ವಾಹನಗಳು ಹೆಚ್ಚಿದರಿಂದ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಬಂದಿದ್ದವು. ಹೆಚ್ಚುವರಿಯಾಗಿ ವಿರೂಪಾಕ್ಷೇಶ್ವರ ರಥ ಬೀದಿ, ಗಾಯತ್ರಿಪೀಠ ಮೈಧಾನ, ತಳವರಘಟದ ದ್ವರಬಾಗಿಲು ಬಳಿಯ ಹೊಲವೊಂದರಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಹೆಚ್ಚುವರಿ ಭದ್ರತೆ ಹಂಪಿಗೆ ಪೊಲೀಸ್ ಇಲಾಖೆ ಒದಗಿಸಿದೆ. ವಾಹನಗಳ ನಿರ್ವಹಣೆಯಲ್ಲಿ ಪೊಲೀಸರು ಹೈರಾಣಾಗಿದ್ದಾರೆ.

ಹಂಪಿಯನ್ನು ನಂಬಿಕೊAಡು ಹಲವು ಉದ್ಯಮ ನಡೆಸುತ್ತಿದ್ದಾರೆ. ಆದರೆ, ಅಕ್ರಮಕ್ಕೆ ಹಾದಿ ತುಳಿಯದೇ ಉದ್ಯಮ ನಡೆಸಬೇಕು. ಪ್ರವಾಸಿಗರಿಂದ ಹೆಚ್ಚಿನ ವಸೂಲಿ ಮಾಡಿದರೆ ಕ್ರಮಕೈಗೊಳ್ಳುತ್ತೇವೆ. ಎಂ.ಎಸ್.ದಿವಾಕರ್, ಜಿಲ್ಲಾಧಿಕಾರಿ, ವಿಜಯನಗರ ಹಂಪಿಗೆ ಪ್ರವಾಸಿಗರು ಹೆಚ್ಚಿನ ಭೇಟಿ ನೀಡಿದ್ದರಿಂದ ವಾಹನಗಳು ಕೂಡ ಹೆಚ್ಚಿದ್ದವು. ಆದ್ದರಿಂದ ಮರ‍್ನಾಲ್ಕು ಕಡೆ ಹೆಚ್ಚುವರಿ ಪಾರ್ಕಿಂಗ್ ಮಾಡಲಾಗಿದೆ. ಹೆಚ್ಚುವರಿ ಭದ್ರತೆ ಕೂಡ ಒದಗಿಸಲಾಯಿತು. ಮುಂದಿನ ತಿಂಗಳ ವರೆಗೆ ಹೆಚ್ಚಿನ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಬಿ.ಎಲ್.ಶ್ರೀಹರಿಬಾಬು, ಎಸ್ಪಿ, ವಿಜಯನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net