ಮಾನವೀಯ ಆಧಾರದ ಮೇಲೆ ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್​

Hamas
Published on

ಜೆರುಸಲೇಂ: ಒತ್ತೆಯಾಳಾಗಿ ಇರಿಸಿಕೊಂಡಿದ್ದ ಇಬ್ಬರು ಅಮೆರಿಕನ್​ ಪ್ರಜೆಗಳನ್ನು ಮಾನವೀಯ ಆಧಾರದ ಮೇಲೆ ಹಮಾಸ್ ಸಶಸ್ತ್ರ ವಿಭಾಗ ಇಝ್ ಎಲ್-ದೀನ್ ಅಲ್-ಕಸ್ಸಾಮ್ ಬ್ರಿಗೇಡ್ಸ್ ಬಿಡುಗಡೆ ಮಾಡಿದೆ.

ಕತಾರ್​ನ ಮಧ್ಯಸ್ಥಿಕೆ ಹಿನ್ನೆಲೆಯಲ್ಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿರುವುದಾಗಿ ಕಸ್ಸಾಮ್ ಬ್ರಿಗೇಡ್ಸ್ ವಕ್ತಾರ ಅಬು ಉಬೈದಾ ಪತ್ರಿಕಾ ಪ್ರಕಟಣೆಯಲ್ಲಿ ಶುಕ್ರವಾರ ತಿಳಿಸಿದ್ದಾರೆ. ಬಿಡುಗಡೆಯಾದ ಇಬ್ಬರು ತಾಯಿ ಮತ್ತು ಮಗಳೆಂದು ತಿಳಿದುಬಂದಿದೆ.

ಇಸ್ರೇಲಿ ವಿದೇಶಾಂಗ ಸಚಿವಾಲಯದ ಪ್ರಕಾರ ಇಬ್ಬರು ಅಮೆರಿಕನ್​ ಪ್ರಜೆಗಳನ್ನು ಹಮಾಸ್​, ರೆಡ್​ಕ್ರಾಸ್​ಗೆ ಸಂಸ್ಥೆಗೆ ಹಸ್ತಾಂತರ ಮಾಡಿದ್ದು, ಅಲ್ಲಿಂದ ಅಮ್ಮ-ಮಗಳನ್ನು ಸೆಂಟ್ರಲ್ ಇಸ್ರೇಲ್‌ನಲ್ಲಿರುವ ಸೇನಾ ನೆಲೆಗೆ ಕರೆದೊಯ್ಯಲಾಯಿತು.

ಯುಎಸ್​ ವಿದೇಶಾಂಗ ಕಾರ್ಯದರ್ಶಿ ಟ್ವೀಟ್​

ಇಸ್ರೇಲ್‌ನಲ್ಲಿ ಅಕ್ಟೋಬರ್ 7ರ ದಾಳಿಯ ನಂತರ ಹಮಾಸ್‌ನಿಂದ ಬಂಧಿತರಾಗಿದ್ದ ಇಬ್ಬರೂ ಮಹಿಳೆಯರು ಇದೀಗ ಇಸ್ರೇಲಿ ಅಧಿಕಾರಿಗಳ ವಶದಲ್ಲಿದ್ದಾರೆ. ಯುಎಸ್​ ರಾಯಭಾರ ಕಚೇರಿಯ ತಂಡವು ಅವರಿಬ್ಬರನ್ನು ಮರಳಿ ಕರೆತರಲಿದೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಎಕ್ಸ್​ ಖಾತೆಯಲ್ಲಿ ತಿಳಿಸಿದ್ದಾರೆ.

US

ಅಕ್ಟೋಬರ್ 7 ರಂದು ಹಮಾಸ್​, ಇಸ್ರೇಲ್ ಮೇಲೆ ದಾಳಿ ಮಾಡಿ ಕೆಲವರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದು, ಅದಕ್ಕೆ ಇಸ್ರೇಲ್​ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಹಮಾಸ್ ಭಯೋತ್ಪಾದಕರ ಮೇಲೆ ನೆಲ ಮತ್ತು ವಾಯು ದಾಳಿಯನ್ನು ಇಸ್ರೇಲ್​ ಸೇನೆ ಮುಂದುವರೆಸಿದೆ. ಹಮಾಸ್ ದಾಳಿಯಿಂದ 1,400 ಕ್ಕೂ ಹೆಚ್ಚು ಇಸ್ರೇಲಿಗಳು ಮೃತಪಟ್ಟಿದ್ದು, ಹಮಾಸ್​ ವಿರುದ್ಧ ನಡೆಯುತ್ತಿರುವ ಸಂಘರ್ಷದಲ್ಲಿ 4,000ಕ್ಕೂ ಹೆಚ್ಚು ಜನರು ಎರಡೂ ಕಡೆಗಳಿಂದ ಮೃತಪಟ್ಟಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net