ಸೇತುವೆ ವಿಷಯದಲ್ಲಿ ಹಾಲಪ್ಪ ರಾಜಕೀಯ

ಕಾಂಗ್ರೆಸ್ ಪ್ರಮುಖರಿಂದ ಹಸಿರುಮಕ್ಕಿ ಸೇತುವೆ ವೀಕ್ಷಣೆ
Congress leaders inspect Hasirumakki bridge
ಸಾಗರ ತಾಲೂಕಿನ ಹಸಿರುಮಕ್ಕಿ ಸೇತುವೆ ವೀಕ್ಷಿಸಿದ ನಂತರ ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿದರು. ಚಂದ್ರಮೌಳಿ, ಕಲಸೆ ಚಂದ್ರಪ್ಪ, ಸುಮಾ ಸುಬ್ರಹ್ಮಣ್ಯ, ಚೇತನರಾಜ್ ಕಣ್ಣೂರು, ಗಣಪತಿ, ಅಶೋಕ್, ಬಿ.ಎ.ಇಂದೂಧರ ಇತರರಿದ್ದರು.
Published on: 

ಸಾಗರ: ಶರಾವತಿ ಹಿನ್ನೀರಿನ ಹಸಿರುಮಕ್ಕಿ ಸೇತುವೆ ನಿರ್ಮಾಣದಲ್ಲಿ ಹರತಾಳು ಹಾಲಪ್ಪ ಅವರದಷ್ಟೇ ಶ್ರಮ ಇಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕಾಗೋಡು ತಿಮ್ಮಪ್ಪ ಸೇತುವೆ ಮಂಜೂರು ಮಾಡಿಸಿದರೆ, ಗೋಪಾಲಕೃಷ್ಣ ಬೇಳೂರು ಪೂರ್ಣಗೊಳಿಸಲು ಶ್ರಮಿಸಿದ್ದಾರೆ ಎಂದು ಸಾಗರ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್ ತಿಳಿಸಿದರು.

ಸಾಗರ ತಾಲೂಕಿನ ಹಸಿರುಮಕ್ಕಿ ಸೇತುವೆಗೆ ಕಾರ್ಯಕರ್ತರೊಂದಿಗೆ ಭೇಟಿ ನೀಡಿ ಮಾತನಾಡಿದ ಅವರು, ಸೇತುವೆ ವಿಷಯದಲ್ಲಿ ಹಾಲಪ್ಪ ಒಣ ರಾಜಕೀಯ ಮಾಡುವುದನ್ನು ಮೊದಲು ನಿಲ್ಲಿಸಲಿ ಎಂದರು.

2017-18ರಲ್ಲಿ ಕಾಗೋಡು ತಿಮ್ಮಪ್ಪ ಶಾಸಕರಾಗಿದ್ದಾಗ ಸಿದ್ದರಾಮಯ್ಯ ಅವರು ಹಸಿರುಮಕ್ಕಿ ಸೇತುವೆ ನಿರ್ಮಾಣಕ್ಕೆ 87 ಕೋಟಿ ರೂ. ಮಂಜೂರು ಮಾಡಿದ್ದರು. ನಂತರ ಸೇತುವೆ ನಿರ್ಮಾಣ ವೆಚ್ಚವು 112.62 ಕೋಟಿ ರೂ.ಗೆ ಏರಿಕೆಯಾಯಿತು. 2018ರಿಂದ 2023ರವರೆಗೆ ಸೇತುವೆ ನಿರ್ಮಾಣಕ್ಕೆ 55.23 ಕೋಟಿ ರೂ. ಬಿಡುಗಡೆಯಾಗಿದ್ದರೆ, ಗೋಪಾಲಕೃಷ್ಣ ಬೇಳೂರು ಶಾಸಕರಾದ ಮೇಲೆ 57.39 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಹೆಚ್ಚುವರಿಯಾಗಿ 1 ಕೋಟಿ ರೂ. ಬಿಡುಗಡೆಯಾಗುತ್ತಿದೆ. ಸೇತುವೆ ನಿರ್ಮಾಣಕ್ಕೆ ಇನ್ನೂ 13 ಕೋಟಿ ರೂ. ಬೇಕಾಗಿದ್ದು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹಸಿರುಮಕ್ಕಿ ಸೇತುವೆ ವಿಳಂಬಕ್ಕೆ ಬಿಜೆಪಿಯೇ ಕಾರಣ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಹಸಿರುಮಕ್ಕಿ ಸೇತುವೆಗೆ ಹಣ ಮಂಜೂರು ಮಾಡಿಲ್ಲ. ಸೇತುವೆಯು 34 ಪಿಲ್ಲರ್ ಮೇಲೆ ನಿರ್ಮಾಣವಾಗುತ್ತಿದೆ. ಹಾಲಪ್ಪ ಅವಧಿಯಲ್ಲಿ ಕೇವಲ 7 ಪಿಲ್ಲರ್ ಮಾತ್ರ ಅಗಿತ್ತು. ಈ ಪೈಕಿ 3 ಪಿಲ್ಲರ್ ಕಳಪೆಯಾಗಿದ್ದು, ಅದನ್ನು ತೆಗೆಸಲಾಗಿದೆ. ಇದನ್ನು ಹಾಲಪ್ಪ ಅವರು ಒಪ್ಪಿಕೊಳ್ಳಬೇಕು. ಬೇಳೂರು ಶಾಸಕರಾದ ಮೇಲೆ 22 ಪಿಲ್ಲರ್, 28 ಡೆಕ್‌ಸ್ಲಾೃಬ್ ಆಗಿದ್ದು ಸೇತುವೆ ಮುಗಿಯುವ ಹಂತಕ್ಕೆ ಬಂದಿದೆ ಎಂದರು.

ಪ್ರಮುಖರಾದ ಕಲಸೆ ಚಂದ್ರಪ್ಪ, ಚಿದಂಬರ, ಸುರೇಶ್, ಸುಮಾ ಸುಬ್ರಹ್ಮಣ್ಯ, ಪ್ರಭಾವತಿ ಚಂದ್ರಕಾಂತ್, ನಾಗೇಂದ್ರ, ಗಣಪತಿ ಮಂಡಗಳಲೆ, ಅಶೋಕ್, ಸೋಮಶೇಖರ ಲ್ಯಾವಿಗೆರೆ, ಮಧುಮಾಲತಿ, ಎಚ್.ಎಂ.ರವಿಕುಮಾರ್, ಬಿ.ಎ.ಇಂದೂಧರ ಬೇಸೂರು, ಜಿ.ಟಿ.ಸತ್ಯನಾರಾಯಣ, ಡಿ.ದಿನೇಶ್, ಆನಂದ್ ಭೀಮನೇರಿ, ಗಿರೀಶ್ ಕೋವಿ, ತಾರಾಮೂರ್ತಿ, ಕಿರಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net