ಸಚಿವ ಸ್ಥಾನಕ್ಕೆ ಎಚ್. ನಾಗೇಶ್​ ರಾಜೀನಾಮೆ

1-klr-7 H. Nagesh
Published on

ಬೆಂಗಳೂರು: ಅಬಕಾರಿ ಸಚಿವ ನಾಗೇಶ್​ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರ ಮನವೊಲಿಕೆಯ ಬಳಿಕ ನಾಗೇಶ್​ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಚಿವ ಸಂಪುಟ ಸಭೆ ಆರಂಭದಲ್ಲೇ ನಾಗೇಶ್​ರಿಂದ ರಾಜೀನಾಮೆ ಪಡೆಯುವ ಪ್ರಸ್ತಾಪವನ್ನು ಬಿಎಸ್​ವೈ ಮಾಡಿದ್ದರು.

ಬಿಎಸ್​ವೈ ಅವರು ನಾಗೇಶ್​ರಿಂದ ರಾಜೀನಾಮೆ ಪಡೆದು ಒಂದು‌ ಸ್ಥಾನ ಖಾಲಿ ಉಳಿಸಿಕೊಳ್ಳುವ ಪ್ಲಾನ್​ ಮಾಡಿದ್ದಾರೆ. ಬಜೆಟ್​ ನಂತರ ಮತ್ತೊಂದು ಬಾರಿ ಸಂಪುಟ ಪುನರ್ ರಚನೆಗೆ ಸಿಎಂ ಯೋಜನೆ ರೂಪಿಸಿಕೊಂಡಿದ್ದು, ಮೂಲ ಬಿಜೆಪಿಯ 6ರಿಂದ 7 ಸಚಿವರನ್ನು ಕೈ ಬಿಟ್ಟು ಹೊಸಬರಿಗೆ ಮಣೆಹಾಕಲು ತಿರ್ಮಾನ ಮಾಡಿದ್ದಾರೆ.

ಸಚಿವ ಸಂಪುಟ ಸಭೆಗು ಮುನ್ನ ಮಾತನಾಡಿದ್ದ ಬಿಎಸ್​ವೈ, ಏಳು ಸಚಿವರ ಹೆಸರಿರುವ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಲಾಗಿದ್ದು, ಅದರಲ್ಲಿ ಎಂಟಿಬಿ ನಾಗರಾಜ್, ಆರ್.ಶಂಕರ್, ಉಮೇಶ್ ಕತ್ತಿ, ಅಂಗಾರ, ಮುರುಗೇಶ್ ನಿರಾಣಿ, ಸಿ.ಪಿ.ಯೋಗೇಶ್ವರ್ ಹಾಗೂ ಅರವಿಂದ ಲಿಂಬಾವಳಿಗೆ ಸ್ಥಾನ ನೀಡಲಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net