ಶೋಷಿತರಿಗೆ ನ್ಯಾಯ ದೊರಕಿಸಲು ಸಂಕಲ್ಪ

16 mbl ph 1
Published on

ಮುಳಬಾಗಿಲು: ಒಂದೂವರೆ ವರ್ಷ ಅಬಕಾರಿ ಸಚಿವನಾಗಿದ್ದಾಗ ಸರ್ಕಾರದ ಬೊಕ್ಕಸ ತುಂಬಿಸುವ ಕೆಲಸ ವಾಡಬೇಕಾಗಿತ್ತು. ಅಂಬೇಡ್ಕರ್ ನಿಗಮ ಅಧ್ಯಕ್ಷನಾಗಿರುವುದರಿಂದ ಶೋಷಿತ ಸಮಾಜಕ್ಕೆ ಸೌಲಭ್ಯ ನೀಡಲು ಸಾಧ್ಯವಾಗಿದೆ ಎಂದು ಶಾಸಕ ಎಚ್.ನಾಗೇಶ್ ತಿಳಿಸಿದರು.

ನಗರದ ನೇತಾಜಿ ಕ್ರೀಡಾಂಗಣದಲ್ಲಿ ಬಹುಜನ ಚಳುವಳಿ ದಲಿತ ಸಂರ್ಷ ಸಮಿತಿಯಿಂದ ಮಂಗಳವಾರ ಸನ್ಮಾನ ಸ್ವೀಕರಿಸಿ ವಾತನಾಡಿ, ಶಾಸಕನಾಗಿ ಜನಪರ ಆಡಳಿತ ನೀಡುತ್ತಿದ್ದು, ಅಂಬೇಡ್ಕರ್ ನಿಗಮದಿಂದ ಫಲಾನುಭವಿಗಳಿಗೆ ನೇರವಾಗಿ ಸವಲತ್ತು ನೀಡುವ ಮೂಲಕ ಶೋಷಿತ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡಲು ಸಂಕಲ್ಪಿಸಲಾಗಿದೆ ಎಂದರು.

ದಲಿತ ಸಂರ್ಷ ಸಮಿತಿ ಸ್ಥಾಪಕ ಅಧ್ಯಕ್ಷ ಸಂಗಸಂದ್ರ ವಿಜಯಕುವಾರ್ ವಾತನಾಡಿ, ಕ್ಷೇತ್ರದಲ್ಲಿ ಎಸ್ಸಿ ಸಮುದಾಯಕ್ಕೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಶಾಸಕರು ದಲಿತ ಸಮುದಾಯದ ಜನರ ನೋವುಗಳಿಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

ಹಿರಿಯ ಸಾಹಿತಿ ಕವಿ ಗೊಲ್ಲಹಳ್ಳಿ ಶಿವಪ್ರಸಾದ್ ವಾತನಾಡಿ, ಯಾವುದೇ ಒತ್ತಡಕ್ಕೆ ಮಣಿಯದೆ ಕಟ್ಟಕಡೆ ವ್ಯಕ್ತಿಗೆ ಸೌಲಭ್ಯ ಒದಗಿಸುವ ಮೂಲಕ ಉತ್ತಮ ಆಡಳಿತ ನೀಡಬೇಕೆಂದು ಸಲಹೆ ನೀಡಿದರು.

ಮುಖಂಡರಾದ ಕೋಲಾರದ ದಲಿತ್ ನಾರಾಯಣಸ್ವಾಮಿ, ಮಂಡಿಕಲ್ ವೆಂಕಟಾಚಲಪತಿ, ಉಪನ್ಯಾಸಕ ಬೊಮ್ಮಸಂದ್ರ ರಾಮಕೃಷ್ಣಪ್ಪ, ವಕೀಲ ಸಿ.ಎನ್.ರಾಜಕುವಾರ್, ಆರ್.ಪೆದ್ದಪ್ಪಯ್ಯ, ಎಂ.ಸಿ.ಸುಭಾಷ್‌ಚಂದ್ರಗೌಡ, ಟಿ.ಪದ್ಮನಾಭಗೌಡ, ಎಂ.ಜಯರಾಮರೆಡ್ಡಿ, ಗೊಲ್ಲಹಳ್ಳಿ ಜಗದೀಶ್, ಸಿ.ಎಂ.ರಾಧಕೃಷ್ಣ, ಬೈರಪ್ಪ, ಅಂಗೊಂಡಹಳ್ಳಿ ಚಿನ್ನಪ್ಪ, ವಿ.ವಾರಪ್ಪ, ಕೋಗಿಲೇರು ಗುರುಮೂರ್ತಿ, ಕಪ್ಪಲಮಡಗು ಶಂಕರ್, ಜೆ.ಕುರುಬರಹಳ್ಳಿ ವೆಂಕಟಾಚಲಪತಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net