ಆ.11ರಂದು ಎಚ್.ಎನ್ ನಂಜೇಗೌಡರ ಸಂಸ್ಮರಣ ಗ್ರಂಥ ಬಿಡುಗಡೆ.

vakkaliga
Published on

ಬೆಂಗಳೂರು:ದಿವಂಗತ ಎಚ್.ಎನ್ ನಂಜೇಗೌಡರ ಸ್ಮರಣಾರ್ಥ ಶ್ರೀ ಎಚ್.ಎನ್. ನಂಜೇಗೌಡರ ಅಭಿಮಾನಿ ಬಳಗ ಹಾಗೂ ಹನ್ಯಾಳು ಪ್ರಕಾಶನ ಮೈಸೂರು ಸಹಯೋಗದಲ್ಲಿ ಆ.11 ರಂದು ರಾಜ್ಯ ಒಕ್ಕಲಿಗರ ಸಂಘದ ಕುವೆಂಪು ಕಲಾಕ್ಷೇತ್ರದ ಸಭಾಂಗಣದಲ್ಲಿ ‘ ಸಂಸ್ಮರಣ ಗ್ರಂಥ ಬಿಡುಗಡೆ ಸಮಾರಂಭ ಹಮ್ಮಿಕೊಂಡಿದೆ.

ಆದಿಚುಂಚನಗಿರಿ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಬೆಳಗ್ಗೆ 11ಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರ್ ಸ್ವಾಮಿ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಅಧ್ಯಕ್ಷತೆ ವಹಿಸಲಿದ್ದು, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸಂಸ್ಮರಣ ಗ್ರಂಥ ಬಿಡುಗಡೆ ಮಾಡಲಿದ್ದಾರೆ ಎಂದು ಪ್ರೋೆಸರ್ ಮಲ್ಲಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾಜಿ ಸಭಾಪತಿ ಕೆ.ಆರ್.ರಮೇಶ್ ಕುಮಾರ್, ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ನಾರಾಯಣಗೌಡ, ಶಾಸಕರಾದ ಎ.ಮಂಜು , ರವಿ ಸುಬ್ರಹ್ಮಣ್ಯ ಮತ್ತು ಡಾ.ಮಂತರ್ ಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಿರಾವರಿ ತಜ್ಞ ಅರ್ಜುನಹಳ್ಳಿ ಪ್ರಸನ್ನ ಕುಮಾರ್ ಪುಸ್ತಕ ಪರಿಚಯ ಮಾಡಿಕೊಡಲಿದ್ದು, ನಂಜೇಗೌಡರ ಪತ್ನಿ ಕಮಲಮ್ಮ, ಸೋಸೆ ರೇಖಾ ಪುರುಷೋತ್ತಮ್ಮ, ಮೊಮ್ಮಕ್ಕಳಾದ ಸ್ಪರ್ಶ, ತ್ರಿಶತ್ ಗೌಡ ಹಾಗೂ ಲಕ್ಷ್ಮಿ ಮತ್ತು ಸೀತಾರಾಮ ಉಪಸ್ಥಿತಿ ವಹಿಸಲಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net