VIDEO | ಚುಡಾಯಿಸಿದ ಯುವಕನಿಗೆ ಬಿತ್ತು ಚಪ್ಪಲಿಯೇಟು; ಯುವತಿಯ ಕೃತ್ಯ ವಿಡಿಯೋ ವೈರಲ್

Girl
Published on

ಗ್ವಾಲಿಯರ್: ಪಾರ್ಕ್​ನಲ್ಲಿ ಹಿಂಬಾಲಿಸಿಕೊಂಡು ಬಂದು ತೊಂದರೆ ಮಾಡುತ್ತಿದ್ದ ಯುವಕನಿಗೆ ಸಾರ್ವಜನಿಕವಾಗಿ ಯುವತಿಯೊಬ್ಬಳು ಚಪ್ಪಲಿಯೇಟು ನೀಡಿದ್ದಾಳೆ. ಸದ್ಯ ಯುವತಿಯ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ.

ವರದಿಯ ಪ್ರಕಾರ ಆರೋಪಿ ಯುವಕ ಯುವತಿಯನ್ನು ಪದೇ ಪದೇ ಹಿಂಬಾಲಿಸಿಕೊಂಡು ಬರುತ್ತಿದ್ದ. ಅಲ್ಲದೆ ಆಕೆಯ ಸಹೋದರಿಗೆ ಫೋನ್ ಕರೆ ಮಾಡಿ ನಿತ್ಯ ಕಿರುಕುಳ ನೀಡುತ್ತಿದ್ದ. ಆತನಿಗೆ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿ, ಯುವಕನನ್ನು ಝಲ್ಕರಿ ಬಾಯಿ ಪಾರ್ಕ್‌ಗೆ ಕರೆಸಿದ್ದಾಳೆ. ಬಳಿಕ ಕಾಲರ್ ಪಟ್ಟಿ ಹಿಡಿದು ಚಪ್ಪಲಿಯೇಟು ನೀಡಿದ್ದಾಳೆ ಎನ್ನಲಾಗಿದೆ.

ಯುವತಿ ಚಪ್ಪಲಿಯೇಟು ನೀಡುತ್ತಿರುವದನ್ನು ಸ್ಥಳೀಯರು ಗಮನಿಸಿದ್ದಾರೆ. ಆಕೆ ತನ್ನ ಸಮಸ್ಯೆಯನ್ನು ವಿವರಿಸುತ್ತಿದ್ದಂತೆ ಸಾರ್ವಜನಿಕರು ಯುಕನನ್ನು ಥಳಿಸಲು ಪ್ರಾರಂಭಿಸಿದ್ದಾರೆ. ವಿಷಯ ತಿಳಿಸಿದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ, ಯುವಕನನ್ನ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net