ಆಗಸ್ಟ್ 13ರಂದು ಚಿನ್ಮಯ ಮಿಷನ್‌ನಿಂದ ಗುರುವಂದನಾ ಕಾರ್ಯಕ್ರಮ

Chinmaya Mission
ಸುದ್ದಿಗೋಷ್ಠಿಯಲ್ಲಿ ಗುರುವಂದನಾ ಕಾರ್ಯಕ್ರಮದ ವ್ಯವಸ್ಥಾಪನ ಸಮಿತಿ ಕಾರ್ಯದರ್ಶಿ ಅರುಣ್‌ಕುಮಾರ್, ಶೃಂಗೇರಿ ಎಚ್.ಎಸ್.ನಾಗರಾಜ್, ಕುಮಾರಶಾಸಿ, ರಮೇಶ್ ಅವಧಾನಿ, ಭೂಪಾಳಂ ಶಶಿಧರ್, ವಿನಯ್ ಇದ್ದರು.
Published on

ಶಿವಮೊಗ್ಗ: ನಗರದ ಚಿನ್ಮಯ ಮಿಷನ್‌ನಿಂದ ಸ್ವಾಮಿ ಚಿನ್ಮಯಾನಂದ ಅವರ 108ನೇ ಜಯಂತಿ ನಿಮಿತ್ತ ಗುರುವಂದನಾ ಕಾರ್ಯಕ್ರಮ ಆಗಸ್ಟ್ 13ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ವ್ಯವಸ್ಥಾಪನ ಸಮಿತಿ ಕಾರ್ಯದರ್ಶಿ ಅರುಣ್‌ಕುಮಾರ್ ತಿಳಿಸಿದರು.

ಅಂದು ಬೆಳಗ್ಗೆ 10ಕ್ಕೆ ವೇದಪಠಣದೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು, 10.30ಕ್ಕೆ ಒಂದು ಸಾವಿರ ಭಕ್ತರಿಂದ ಸಾಮೂಹಿಕ ಸ್ತೋತ್ರ ಪಠಣ, 11ಕ್ಕೆ ಸಹಸ್ರ ಕಂಠದಿಂದ ಭಜನಾ ಗಾಯನ, 11.30ಕ್ಕೆ ಅಷ್ಟೋತ್ತರ ಶತನಾಮಾವಳಿಯೊಂದಿಗೆ ಪಾದುಕೆ ಪೂಜೆ ಹಾಗೂ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಧ್ಯಾಹ್ನ 12ಕ್ಕೆ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯಿಂದ ಸತ್ಸಂಗ, 1ಕ್ಕೆ ಭಕ್ತಾಧಿಗಳಿಂದ ಗುರುದಕ್ಷಿಣಾ ಸಮರ್ಪಣೆ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ. ಈ ವರ್ಷ ಸ್ವಾಮಿ ಚಿನ್ಮಯಾನಂದರ 108ನೇ ಜಯಂತಿಯನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಐತಿಹಾಸಿಕ ಕಾರ್ಯಕ್ರಮ ಶಿವಮೊಗ್ಗದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಛಿಸುವವರು ತಮ್ಮ ಹೆಸರನ್ನು ಕೂಡಲೇ ನೋಂದಾಯಿಸಿಕೊಳ್ಳಬೇಕು. ಹೆಸರು ನೋಂದಾಯಿಸಿದವರಿಗೆ ಭಜನೆ ಹಾಗೂ ಸ್ತೋತ್ರಗಳ ಸಾಹಿತ್ಯ, ಧ್ವನಿಮುದ್ರಿಕೆಗಳನ್ನು ನೀಡಿ ನಗರದ 13 ಬಡಾವಣೆಗಳಲ್ಲಿ ನಿಗದಿಪಡಿಸಿದ ದಿನಾಂಕದಂದು ಸಾಮೂಹಿಕ ಗಾಯನಕ್ಕೆ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಛಿಸುವವರು 9844444820ಸಂಪರ್ಕಿಸಬಹುದು ಎಂದರು. ಸಮಿತಿ ಪದಾಧಿಕಾರಿಗಳಾದ ಶೃಂಗೇರಿ ಎಚ್.ಎಸ್.ನಾಗರಾಜ್, ಕುಮಾರಶಾಸಿ, ರಮೇಶ್ ಅವಧಾನಿ, ಭೂಪಾಳಂ ಶಶಿಧರ್, ವಿನಯ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net