

ಸರಳ ವಾಸ್ತು ಸಂಸ್ಥಾಪಕ ಚಂದ್ರಶೇಖರ ಗುರೂಜಿ ಹತ್ಯೆ ನಡೆದ ಸ್ಥಳದಲ್ಲಿ ಇಲ್ಲಿನ ಉಣಕಲ್ನ ದಿ ಪ್ರೆಸಿಡೆಂಟ್ ಹೋಟೆಲ್ ಸಿಬ್ಬಂದಿ ಬುಧವಾರ ಮತ್ತೊಮ್ಮೆ ಹೋಮ- ಹವನ ನಡೆಸಿದರು.
ಗುರೂಜಿ ಹತ್ಯೆ ಪ್ರಕರಣದ ಆಘಾತದಿಂದ ಇನ್ನೂ ಹೊರಬಾರದ ಹೋಟೆಲ್ ಸಿಬ್ಬಂದಿ ಮತ್ತೊಮ್ಮೆ ಶಾಂತಿ ಪೂಜೆ- ಪುನಸ್ಕಾರ ಹಮ್ಮಿಕೊಂಡಿದ್ದರು. ಹೋಟೆಲ್ನ ಲಾಬಿಯಲ್ಲಿ ಗುರೂಜಿ ಹತ್ಯೆ ನಡೆದ ಸ್ಥಳದಲ್ಲಿ ಐದಾರು ಅರ್ಚಕರ ತಂಡ ಅಘೋರ ಹೋಮ, ಉದಕ ಶಾಂತಿ, ಸುದರ್ಶನ ಹೋಮ, ಗೋಪೂಜೆ, ಅಕಲಾ ಪೂಜೆ ನಡೆಸಿತು.