ಕಳೆದ ವರ್ಷ ಜೆ.ಪಿ. ತೂಮಿನಾಡ್ ನಟಿಸಿ, ನಿರ್ದೇಶಿಸಿದ್ದ "ಸು ಫ್ರಮ್ ಸೋ' ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಕನ್ನಡದಲ್ಲಿ ನೂರು ಕೋಟಿ ಕ್ಲಬ್ಗೆ ಎಂಟ್ರಿ ಕೊಟ್ಟಿದ್ದಲ್ಲದೇ, ಮಲಯಾಳಂನಲ್ಲೂ ಸ್ವಲ್ಪ ಮಟ್ಟಿಗೆ ಸದ್ದು ಮಾಡಿತ್ತು. 2025ರ ಜು. 25ರಂದು ಸಿನಿಮಾ ಬಿಡುಗಡೆಯಾಗಿದ್ದರೂ, ಬೆಂಗಳೂರಿನಲ್ಲಿ ಜು. 24ರಂದೇ 16 ಪ್ರೀಮಿಯರ್ ಶೋಗಳು ಹೌಸ್ಫುಲ್ ಆಗಿದ್ದವು. ಇದೀಗ ಈ ಜು. 24ರಂದು "ಸು ಫ್ರಮ್ ಸೋ'ನಂತೆಯೇ ಬಾಕ್ಸಾಫಿಸಿನಲ್ಲಿ ಮ್ಯಾಜಿಕ್ ಮಾಡುವ ಭರವಸೆಯೊಂದಿಗೆ "ಕರಾವಳಿ' ತೆರೆಗೆ ಬರಲು ಸಿದ್ಧತೆ ನಡೆಸಿದೆ. ಗುರುದತ್ ಗಾಣಿಗ ಆ್ಯಕ್ಷನ್-&ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. "ಸು ಫ್ರಮ್ ಸೋ'ನಲ್ಲಿ ಕರುಣಾಕರ ಗುರೂಜಿಯಾಗಿದ್ದ ರಾಜ್, "ಕರಾವಳಿ'ಯಲ್ಲಿ ಮಾಸ್ ಮಾದೇವನಾಗಿ ಮಿಂಚಲು ರೆಡಿಯಾಗಿದ್ದಾರೆ. ಪ್ರಜ್ವಲ್ ದೇವರಾಜ್ ಇದೇ ಮೊದಲ ಬಾರಿಗೆ ಸಂಪೂರ್ಣ ವಿಭಿನ್ನ ಶೇಡ್ಗಳಲ್ಲಿ ಮಿಂಚಲಿದ್ದಾರೆ. ಶೀರ್ಷಿಕೆಯೇ ಹೇಳುವಂತೆ "ಕರಾವಳಿ' ಭಾಗದಲ್ಲಿ ಮನುಷ್ಯ ಮತ್ತು ಪ್ರಾಣಿ ಮಧ್ಯೆ ನಡೆಯುವ ಸಂರ್ಷದ ಕಥೆಯಾಗಿದ್ದು, ಈಗಾಗಲೇ ಸ್ಟ್ ಲುಕ್ ಮತ್ತು ಟೀಸರ್ ನಿರೀೆ ಮೂಡಿಸಿದೆ. ಅಂದಹಾಗೆ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಚಿತ್ರವನ್ನು ಅರ್ಪಿಸುತ್ತಿದ್ದು, ಜತೆಗೆ ವಿತರಣೆಯ ಜವಾಬ್ದಾರಿಯನ್ನೂ ಹೊತ್ತಿರುವುದು "ಕರಾವಳಿ' ತಂಡಕ್ಕೆ ಬಲ ಸಿಕ್ಕಂತಾಗಿದೆ. ಪ್ರಜ್ವಲ್, ರಾಜ್ ಜತೆ ಸಂಪದಾ, ಮಿತ್ರಾ, ರಮೇಶ್ ಇಂದಿರ, ಶ್ರೀಧರ್ ಪ್ರಮುಖ ತಾರಾಗಣದಲ್ಲಿದ್ದಾರೆ. ಉಳಿದಂತೆ ಸಚಿನ್ ಬಸ್ರೂರು ಸಂಗೀತ, ಅಭಿಮನ್ಯು ಸದಾನಂದನ್ ಛಾಯಾಗ್ರಹಣದಲ್ಲಿ ಸಿನಿಮಾ ಮೂಡಿಬರುತ್ತಿದೆ.