ಗುರುರ್ಪೂಣಿಮೆ ನಿಮಿತ್ತ ಸಾಯಿಬಾಬಾ ಭಾವಚಿತ್ರ ಮೆರವಣಿಗೆ

oplus_0
oplus_0
Published on

ರಾಣೆಬೆನ್ನೂರ: ಗುರುರ್ಪೂಣಿಮೆ ನಿಮಿತ್ತ ಇಲ್ಲಿಯ ಶ್ರೀರಾಮ ನಗರದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದ ವತಿಯಿಂದ ನಗರದಲ್ಲಿ ಶ್ರೀ ಶಿರಡಿ ಸಾಯಿ ಬಾಬಾ ಮೂತಿರ್ ಮೆರವಣಿಗೆ ಮಾಡಲಾಯಿತು.

ಇಲ್ಲಿಯ ಸಿದ್ದೇಶ್ವರ ನಗರದ ಶ್ರೀ ಸಿದ್ದೇಶ್ವರ ಸ್ವಾಮಿ ದೇವರ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಹಳೇ ಪಿ.ಬಿ. ರಸ್ತೆ, ಕುರುಬಗೇರಿ ವೃತ್ತ, ದುರ್ಗಾ ವೃತ್ತ, ನೆಹರು ಮಾರುಕಟ್ಟೆ, ಪೋಸ್ಟ್​ ವೃತ್ತ, ಬಸ್​ ನಿಲ್ದಾಣ ವೃತ್ತ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀರಾಮ ನಗರದ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಬಂದು ತುಲುಪಿತು.

ಜಾಂಜ್​ ಮೇಳ ಹಾಗೂ ಯುವತಿಯರ ಹೆಜ್ಜೆ ಮೇಳ ಮೆರವಣಿಗೆಯಲ್ಲಿ ಗಮನ ಸೆಳೆಯಿತು.

ಇದಕ್ಕೂ ಮುನ್ನ ಶ್ರೀ ಸಾಯಿಬಾಬಾ ದೇವರಿಗೆ ಕಾಕಡಾರತಿ, ರಾಭಿಷೇಕ, ಮಂಗಳಸ್ನಾನ, ಲೋಕ ಕಲ್ಯಾಣಾರ್ಥವಾಗಿ ಸಾಯಿ ದತ್ತಾತ್ರೇಯ ಹೋಮ ಸೇರಿ ವಿವಿಧ ಧಾಮಿರ್ಕ ಕಾರ್ಯಕ್ರಮ ಜರುಗಿದವು.

ದೇವಸ್ಥಾನ ಸಮಿತಿಯ ಸದಸ್ಯರಾದ ಕೆಎಂಪಿ ಮಣಿ, ರಮೇಶ ಗುತ್ತಲ, ಚೋಳಪ್ಪ ಕಸವಾಳ, ಬಸವರಾಜ ಗೌಳಿ, ಭೀಮಣ್ಣ ಎಡಚಿ, ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net