

ಕೋಲಾರ: ಚಿಂತಾಮಣಿ ತಾಲೂಕಿನ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಕೈವಾರದ ಸದ್ಗುರು ಶ್ರೀ ಯೋಗಿ ನಾರೇಯಣ ತಾತಯ್ಯನವರ ಮಠದಲ್ಲಿ ಗುರುಪೂರ್ಣಿಮಾ ಪ್ರಯುಕ್ತ ಗುರುಪೂಜಾ ಸಂಗೀತೋತ್ಸವವು ಜು.19 ರಿಂದ 21ರ ವರೆಗೆ ನಿರಂತರವಾಗಿ 72 ಗಂಟೆ ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುತ್ತದೆ ಎಂದು ಕ್ಷೇತ್ರದ ಸಂಕೀರ್ತನಾ ಯೋಜನೆಯ ಸಂಚಾಲಕ ಬಾಲಕೃಷ್ಣ ಭಾಗವತರ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜು.19ರಂದು ಬೆಳಗ್ಗೆ 6 ಗಂಟೆಗೆ ಸದ್ಗುರುಗಳನ್ನು ಸಭಾಂಗಣಕ್ಕೆ ಕರೆತಂದು ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು. ಸಂಜೆ ವಿಶೇಷ ಕಾರ್ಯಕ್ರಮಗಳಲ್ಲಿ ಪಿ.ಜೆ.ಬ್ರಹ್ಮಾಚಾರಿ ತಂಡದವರಿAದ ಪಿಟೀಲು ಸೋಲೋ, ಅಧಿತಿ ಪ್ರಹ್ಲಾದ್, ವಿನಯ್ ಕಣಿ ಶರ್ವ, ಲಕ್ಷ್ಮೀ ಹೊಸೂರು, ಡಿ.ಆರ್.ರಾಜಪ್ಪ ತಂಡದವರಿAದ ಗಾಯನ ಹಾಗೂ ಭವ್ಯಾ ಮಂಜುನಾಥ್ ತಂಡದವರಿAದ ಭರತನಾಟ್ಯ ಕಾರ್ಯಕ್ರಮಗಳು ಇರುತ್ತದೆ ಎಂದರು.
ಜು.20ರಂದು ಚೆನ್ನೈನ ಪದ್ಮಶ್ರೀ ಎ.ಕನ್ಯಾಕುಮಾರಿ ಪಿಟೀಲು, ಸಿ.ಕೆ.ಪತಂಜಲಿ ತಂಡ ಕೊಳಲು, ಕೇರಳದ ಸೂರ್ಯಗಾಯತ್ರಿ ಗಾಯನ, ಸಿಕ್ಕಿಲ್ ಗುರುಚರಣ್ ತಂಡದವರಿAದ ಗಾಯನ, ಶ್ರೀ ರುದ್ರಾಕ್ಷ ನಾಟ್ಯಾಲಯ ಬೆಂಗಳೂರು ರವರಿಂದ ಭರತನಾಟ್ಯ ಕಾರ್ಯಕ್ರಮ, ಚೆನ್ನೈನ ಕೆ.ವಿ.ಪ್ರಸಾದ್, ಬಿ.ಹರಿಕುಮಾರ್, ಬೆಂಗಳೂರು ಪ್ರವೀಣ್‌ರ ಮೃದಂಗ ವಾದನವಿರುತ್ತದೆ.
ಡಾ.ಎ.ವಿಜಯ್ ಕಾರ್ತೀಕೇಯನ್, ವಿ.ಪ್ರಕಾಶ್ ಇಳಯರಾಜ, ಪಿ.ಎಂ.ರAಜಿತ್ ವಿನಾಯಕ್, ಬಿ.ಮುತ್ತು ಕುಮಾರ್, ಮಲೈ ಎಂ.ಕಾರ್ತೀಕೇಯನ್, ಜಿ.ವಿನೋದ್ ಕುಮಾರ್, ಟಿ.ಜಿ.ಗೋವಿಂದರಾಜು, ಟಿ.ಜಿ.ಮುತ್ತುಕುಮಾರ್ ಅವರಿಂದ ವಿಶೇಷ ನಾದಸ್ವರ, ತವಿಲ್ ವಾದನ ಹಮ್ಮಿಕೊಳ್ಳಲಾಗಿದೆ.
ಜು.21 ಗುರುಪೂರ್ಣಿಮೆ ದಿನ ಬೆಳಗ್ಗೆ 10.30ರಿಂದ ಸದ್ಗುರು ಯೋಗಿ ನಾರೇಯಣ ತಾತಯ್ಯನವರಿಗೆ ವಿಶೇಷ ಗುರುಪೂಜೆ ನಡೆಸಲಾಗುವುದು. ನಾಡಿನ ಪ್ರಸಿದ್ಧ ವಿದ್ವಾಂಸರುಗಳಿAದ ತಾತಯ್ಯನವರು ರಚಿಸಿರುವ ಪಂಚರತ್ನ ಕೀರ್ತನೆಗಳ ಗೋಷ್ಠಿಗಾಯನ ನಡೆಯಲಿದೆ. ಅಂದು ಬ್ರಹ್ಮಾಂಡಪುರಿ ಶತಕ ಯೋಗದೃಷ್ಟಿ, ರಾಮ ರಾಮ ಮುಕುಂದ ಮಾಧವ ಯೋಗದೃಷ್ಟಿ ಎಂಬ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವಿರುತ್ತದೆ. ಪ್ರಸಿದ್ಧ ಮೃದಂಗ ವಿದ್ವಾಂಸರಾದ ವಿ.ಪ್ರವೀಣ್ ಹಾಗೂ ಭಜನಾ ಭಕ್ತರಾದ ಕೆ.ರಾಜಪ್ಪ ಅವರನ್ನು ಸನ್ಮಾನಿಸಲಾಗುವುದು ಎಂದರು.
ಜು.21 ರಂದು ಅನೂರು ಅನಂತಕೃಷ್ಣಶರ್ಮ ತಂಡದವರಿಂದ ಲಯಲಹರಿ ತಾಳವಾದ್ಯ, ಸರಸ್ವತಿ ರಾಜಗೋಪಾಲನ್ ದೆಹಲಿ ಅವರಿಂದ ವೀಣಾವಾದನ, ಭೈರತಿ ಆಂಜಿನಪ್ಪ ತಂಡ, ತೇಜಸ್ವಿನಿ ಮನೋಜ್ ಕುಮಾರ್, ಕೆ.ಸುಧಾಮಣಿ ವೆಂಕಟರಾಘವನ್‌ರಿAದ ಗಾಯನ, ಸುಬ್ಬಲಕ್ಷ್ಮೀ, ಮಹಾಲಿಂಗಯ್ಯ ಮಠದ ತಂಡದಿಂದ ಹಿಂದುಸ್ಥಾನಿ ಗಾಯನ, ನೂಪುರ ರೂಪರಾಜೇಶ್ ತಂದದವರಿಂದ ಕೂಚುಪುಡಿ ನೃತ್ಯ ಜರುಗಲಿದೆ ಎಂದು ತಿಳಿಸಿದರು.