ಹೊಯ್ಸಳ ಶಾಲೆಯಲ್ಲಿ ಗುರುಶಿಷ್ಯರ ಸಮಾಗಮ

5blrp4
ಬೇಲೂರು ಪಟ್ಟಣದ ಹೊಯ್ಸಳ ಪ್ರೌಢಶಾಲೆಯ 1999-2000ನೇ ಸಾಲಿನ ಹಳೇ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರು ವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗುರು ಶಿಷ್ಯರು.
Published on

ಬೇಲೂರು : ಪಟ್ಟಣದ ಹೊಯ್ಸಳ ಪ್ರೌಢಶಾಲೆ ಆವರಣದಲ್ಲಿ ಶಾಲೆಯ 1999-2000ನೇ ಸಾಲಿನ ಹಳೇ ವಿದ್ಯಾರ್ಥಿಗಳಿಂದ ಕೆಲ ದಿನಗಳ ಹಿಂದೆ ಗುರು ವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಳೇ ವಿದ್ಯಾರ್ಥಿಗಳು 25 ವರ್ಷಗಳ ನಂತರ ಸ್ನೇಹಿತರನ್ನು ಕಂಡು, ಹರ್ಷಗೊಂಡು ಶಾಲಾ ದಿನಗಳಲ್ಲಿ ನಡೆದ ಘಟನೆಗಳನ್ನು ನೆನಪಿಸಿ ತಮ್ಮ ಅನಿಸಿಕೆಗಳನ್ನು ಹಂಚಿ ಕೊಂಡರು.

ಹೊಯ್ಸಳ ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕ ಹನುಮೇಗೌಡ ಮಾತನಾಡಿ, ಒಂದು ಕಲ್ಲಿನ ಬಂಡೆಯನ್ನು ಶಿಲ್ಪಿ ಯಾವರೀತಿ ವಿಗ್ರಹವನ್ನಾಗಿ ಮಾಡುತ್ತಾನೋ ಅದೇ ರೀತಿ, ಶಿಕ್ಷಕ ವಿದ್ಯಾರ್ಥಿಗಳಿಗೆ ಸಂಸ್ಕಾರ, ನಾಗರಿಕತೆ, ಸಮಾಜದ ಬಗ್ಗೆ ತಿಳಿಸಿ ಹೇಗೆ ಬಾಳಬೇಕೆಂಬುದನ್ನು ತಿಳಿಸಿ, ಪ್ರೀತಿ, ವಿಶ್ವಾಸದ ಜತೆಗೆ ಅಕ್ಷರ ಕಲಿಸಿ ಶಿಕ್ಷಣ ನೀಡುತ್ತಾನೆ. ಇಂತಹ ಶಿಕ್ಷಕರನ್ನು 25 ವರ್ಷಗಳ ಬಳಿಕವೂ ನೆನೆದು ಗುರುಗಳಿಗೆ ವಂದನೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.

ನಿವೃತ್ತ ಶಿಕ್ಷಕ ಟಿ.ಎನ್.ಮುರುಳಿಧರ್ ಮಾತನಾಡಿ, ವಿದ್ಯೆ ಕದಿಯಲಾಗದ ಸಂಪತ್ತು. ಸಾಕಷ್ಟು ವಿದ್ಯಾರ್ಥಿಗಳಿಗೆ ವ್ಯಾಸಂಗದ ಸಂದರ್ಭ ಓದಿನ ಮಹತ್ವದ ಬಗ್ಗೆ ಅರಿವಿರುವುದಿಲ್ಲ, ಅರಿವು ಬಂದ ನಂತರ ಸಮಯ ಮೀರಿ ಹೋಗಿರುತ್ತದೆ ಆದ್ದರಿಂದ ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದರು.

ನಿವೃತ್ತ ಶಿಕ್ಷಕಿ ಎಂ.ಶಶಿಕಲಾ ಮಾತನಾಡಿ, ಸಮಾಜ ಸೇವೆ ಮಾಡಲು ನಿರ್ದಿಷ್ಟ ರಂಗಗಳಿಲ್ಲ, ಪ್ರತಿ ಕ್ಷೇತ್ರದಲ್ಲೂ ಸೇವೆಗೆ ಅವಕಾಶವಿದೆ. ಹಳೇ ವಿದ್ಯಾರ್ಥಿಗಳಾದ ನೀವು ಹಲವಾರು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರಮಾಣಿಕವಾಗಿ ಸೇವೆ ಸಲ್ಲಿಸಿ ಉತ್ತಮ ಹೃದಯವಂತರಾಗಿ ನಿಮ್ಮಗೆ ಒಳ್ಳೆಯದಾಗುತ್ತದೆ ಎಂದರು.

ನಿವೃತ್ತ ಶಿಕ್ಷಕರಾದ ಕೆ.ಪಿ.ಚಂದ್ರಶೇಖರ್, ಕೆ.ಎನ್.ಚಂದ್ರಶೇಖರ್, ರಮೇಶ್, ಅಹಮ್ಮದ್ ಖಾನ್, ಕೆ.ಪಿ.ಜಗದೀಶ್, ಶಿಕ್ಷಕರಾದ ನಾರಾಯಣ್, ಶಾಲೆಯ ಮುಖ್ಯಶಿಕ್ಷಕ ಪ್ರಕಾಶ್, ವೆಂಕಟೇಶ್, ಉಪನ್ಯಾಸಕರಾದ ಲೋಕೇಶ್, ಅಂಬುಜಾಕ್ಷಿ, ಶಿಕ್ಷಕರಾದ ಜಿ.ನಂದಿಶಯ್ಯ,, ಹರೀಶ್, ಗಿರೀಶ್, ಲತಾ ಸೇರಿದಂತೆ 1999-2000ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net