ಬುಕ್ ಮಾಡಿದ್ದು ಗೂರ್ಖಾ ಪ್ಯಾಂಟ್, ಬಂದಿದ್ದು ಡೋರ್ ಮ್ಯಾಟ್

online fraud
Published on


ಬೆಂಗಳೂರು: ೇಸ್‌ಬುಕ್‌ನಲ್ಲಿ ಬರುವ ಜಾಹೀರಾತುಗಳನ್ನು ನೋಡಿ ವಸ್ತುಗಳನ್ನು ಬುಕ್ ಮಾಡುವ ಗ್ರಾಹಕರೇ ಎಚ್ಚರ ವಹಿಸಿ… ಇಲ್ಲವಾದರೆ ನೀವು ಹಣ ಕಳೆದುಕೊಳ್ಳುವುದು ಗ್ಯಾರಂಟಿ.
ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಕರ್ಣ ಎಂಬ ಗ್ರಾಹಕರೊಬ್ಬರು ೇಸ್‌ಬುಕ್‌ನಲ್ಲಿ ಬಂದ ಆ್ಯಡ್ ಅನ್ನು ನೋಡಿ ಗೂರ್ಖಾ ಪ್ಯಾಂಟ್‌ವೊಂದನ್ನು ಬುಕ್ ಮಾಡಿದ್ದಾರೆ. ಆದರೆ ಅವರಿಗೆ ಕೊರಿಯರ್‌ನಲ್ಲಿ ಡೋರ್ ಮ್ಯಾಟ್ ಬಂದಿದೆ. ಪ್ಯಾಂಟ್‌ನ ಬದಲಾಗಿ ಡೋರ್ ಮ್ಯಾಟ್ ಬಂದಿರುವುದನ್ನು ನೋಡಿದ್ದ ಕರ್ಣ ಅವರು ದಂಗಾಗಿ ಹೋಗಿದ್ದಾರೆ.
ಕರ್ಣ ಅವರು, ಆ.೧೪ ರಂದು ೇಸ್‌ಬುಕ್‌ನಲ್ಲಿ ಬಂದ ಜಾಹೀರಾತನ್ನು ನೋಡಿ ಪೋಬ್‌ಬ್ಲಜ್ ಗೂರ್ಖಾ ಪ್ಯಾಂಟ್ ಅನ್ನು ಬುಕ್ ಮಾಡಿ ಕ್ಯಾಷ್ ಆನ್ ಡೆಲಿವರಿ ಆಪ್ಶನ್ ಆಯ್ಕೆಮಾಡಿದ್ದರು. ಆ.೧೮ ರಂದು ಕೊರಿಯರ್ ಬಾಯ್ ವಸ್ತುವನ್ನು ಡೆಲಿವರಿ ಮಾಡಿದ್ದಾನೆ. ಆತನಿಗೆ ಕರ್ಣ ಅವರು ಗೂಗಲ್ ಪೇ ಮೂಲಕ ಇ-ಕಾರ್ಟ್ ಹೆಸರಿನ ಜಿಪೇ ಅಕೌಂಟ್‌ಗೆ ೨ ಸಾವಿರ ರೂ. ಪಾವತಿಸಿದ್ದಾರೆ. ಕಚೇರಿ ವಿಳಾಸಕ್ಕೆ ವಸ್ತುವನ್ನು ಡೆಲಿವರಿ ಬಾಯ್ ಡೆಲಿವರಿ ಕೊಟ್ಟು ಆನ್‌ಲೈನ್ ಮೂಲಕ ಹಣ ಪಡೆದು ಸ್ಥಳದಿಂದ ತೆರಳಿದ್ದಾನೆ. ಕಚೇರಿಯಲ್ಲಿ ಕೆಲಸದಲ್ಲಿ ಕರ್ಣ ಅವರು ಬಿಜಿ ಇದ್ದ ಕಾರಣ ಡೆಲಿವರಿಯಾದ ವಸ್ತುವನ್ನು ತೆರೆದು ನೋಡಲು ಸಾಧ್ಯವಾಗಿರಲಿಲ್ಲ. ಬಳಿಕ ಮನೆಗೆ ಹೋಗಿ ಕೊರಿಯರ್ ತೆಗೆದು ನೋಡಿದ್ದಾಗ ಪೋಬ್‌ಬ್ಲಜ್ ಗೂರ್ಖಾ ಪ್ಯಾಂಟ್‌ನ ಬದಲಾಗಿ ಅದರಲ್ಲಿ ಸುಮಾರು ೧೦೦ ರೂ. ಮೌಲ್ಯದ ಡೋರ್ ಮ್ಯಾಟ್ ಇಟ್ಟು ವಂಚಿಸುವುದು ಗೊತ್ತಾಗಿದೆ. ತಾವು ಮೋಸ ಹೋಗಿರುವುದಾಗಿ ತಿಳಿಸಿದ ಕರ್ಣ ಅವರು, ೇಸ್‌ಬುಕ್ ಜಾಹೀರಾತು ನೋಡಿ ವಸ್ತುಗಳನ್ನು ಬುಕ್ ಮಾಡುವ ಮುನ್ನ ಎಚ್ಚರ ವಹಿಸಿ ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net