ಗುರಪ್ಪ ನಾಯ್ಡು ಪ್ರಕರಣ ವಿವಿಪುರ ಠಾಣೆಗೆ ವರ್ಗಾವಣೆ

Crime Logo
Published on

ಬೆಂಗಳೂರು: ಕಾಂಗ್ರೆಸ್ ಮುಖಂಡ ಗುರಪ್ಪ ನಾಯ್ಡು ವಿರುದ್ಧ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದಾಖಲಾಗಿದ್ದ ಲೈಂಗಿಕ ಕಿರುಕುಳ ಪ್ರಕರಣದ ತನಿಖಾ ಜವಾಬ್ದಾರಿಯನ್ನು ವಿ.ವಿ.ಪುರ ಠಾಣೆಗೆ ಪ್ರಕರಣಕ್ಕೆ ಸಂಬಂಧಪಟ್ಟ ಕಡತವನ್ನು ಹಸ್ತಾಂತರಿಸಲಾಗಿದೆ.

ರಾಜಕೀಯವಾಗಿ ತುಂಬಾ ಪ್ರಭಾವಿಯಾಗಿರುವ ಗುರಪ್ಪ ನಾಯ್ಡು ಅವರು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದಾರೆ. ಅವರ ಶಾಲೆ ಸಹ ಅದೇ ಠಾಣೆಯ ವ್ಯಾಪ್ತಿಯಲ್ಲಿದೆ. ಅಲ್ಲದೆ, ಅವರಿಗೆ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ ಪೊಲೀಸ್ ಅಧಿಕಾರಿಗಳು ಹೆಚ್ಚು ಚಿರಪರಿಚಿತರು. ಹೀಗಾಗಿ, ಗುರಪ್ಪ ನಾಯ್ಡು ಅವರು ಪೊಲೀಸರ ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಹೀಗಾಗಿ ಈ ಪ್ರಕರಣವನ್ನು ಬೇರೆ ಠಾಣೆಗೆ ವರ್ಗಾಯಿಸಬೇಕೆಂದು ದೂರುದಾರ ಸಂತ್ರಸ್ತೆಯು ದಕ್ಷಿಣ ವಿಭಾಗದ ಡಿಸಿಪಿಗೆ ಮನವಿ ಮಾಡಿದ್ದರು.

ಸಂತ್ರಸ್ತೆಯ ಮನವಿ ಮೇರೆಗೆ ಪ್ರಕರಣವನ್ನು ವಿ.ವಿ.ಪುರ ಠಾಣೆ ವರ್ಗಾಯಿಸಿ, ತನಿಖೆ ನಡೆಸುವಂತೆ ಅಲ್ಲಿನ ಇನ್‌ಸ್ಪೆಕ್ಟರ್‌ಗೆ ಸೂಚಿಸಲಾಗಿದೆ. ಇದರ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಶುಕ್ರವಾರ ವಿ.ವಿ.ಪುರ ಠಾಣೆ ಇನ್‌ಸ್ಪೆಕ್ಟರ್‌ಗೆ ನೀಡಲಾಗಿದೆ. ಗುರಪ್ಪ ನಾಯ್ಡು ವಿರುದ್ಧ ಅವರ ಶಾಲೆಯಲ್ಲೇ ಈ ಹಿಂದೆ ಕೆಲಸ ಮಾಡುತ್ತಿದ್ದ ಶಿಕ್ಷಕಿಯು ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದರು. ಗುರಪ್ಪ ನಾಯ್ಡು ಅವರು ತನ್ನನ್ನು ಸೇರಿ ಶಾಲೆಯಲ್ಲಿ ಕೆಲಸ ಮಾಡುವ ಸಾಕಷ್ಟು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತ ಶಿಕ್ಷಕಿ ಆರೋಪಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net