ಛತ್ತೀಸ್‌ಗಢದಲ್ಲಿ ಗುಂಡಿನ ಚಕಮಕಿ: 14 ನಕ್ಸಲರ ಎನ್​ಕೌಂಟರ್​! | Naxals

dk (50)
Published on

ಛತ್ತೀಸ್‌ಗಢ: ಗರಿಯಾಬಂದ್​ ಜಿಲ್ಲೆಯಲ್ಲಿ ಸೋಮವಾರ ಮತ್ತು ಮಂಗಳವಾರ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 14 ನಕ್ಸಲರು(Naxals) ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

ಓರಿಸ್ಸಾ ಗಡಿಯಲ್ಲಿ ಜ.21ರಿಂದ ನಡೆಯುತ್ತಿರು ಗುಂಡಿನ ಕಾರ್ಯಚರಣೆ ಮುಂದುವರೆದಿದ್ದು, ಮೃತರಲ್ಲಿ ಇಬ್ಬರು ಮಹಿಳಾ ನಕ್ಸಲರು ಸೇರಿದ್ದಾರೆ. ಅಲ್ಲದೇ, 1 ಕೋಟಿ ರೂ. ಬಹುಮಾನ ಹೊಂದಿದ್ದ ನಕ್ಸಲನು ಹತನಾಗಿದ್ದಾನೆ. ನಕ್ಸಲರು ಬಳಸುತ್ತಿದ್ದ ವಿವಿಧ ರೀತಿಯ ಮದ್ದಗುಂಡು ಸೇರಿ ಬಂದೂಕುಗಳನ್ನು ಕಾರ್ಯಚರಣೆಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್​ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.

ಡಿಸಿಎಂ ಅರುಣ್ ಸಾವೊ ಶ್ಲಾಘನೆ

ಛತ್ತೀಸ್‌ಗಢ ಡಿಸಿಎಂ ಅರುಣ್ ಸಾವೊ ನಕ್ಸಲ್​​ ಕಾರ್ಯಚರಣೆಯ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "2026ರ ಮಾ.31ರೊಳಗೆ ನಾವು ರಾಷ್ಟ್ರವನ್ನು ನಕ್ಸಲ್ ಮುಕ್ತಗೊಳಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ನಮ್ಮ ಭದ್ರತಾ ಪಡೆಗಳು ಈ ದಿಕ್ಕಿನಲ್ಲಿ ಧೈರ್ಯದಿಂದ ಕಾರ್ಯನಿರ್ವಹಿಸುತ್ತಿವೆ. ಅವರು ನಿರಂತರವಾಗಿ ಯಶಸ್ವಿಯಾಗುತ್ತಿದ್ದಾರೆ. ನಾನು ಭದ್ರತಾ ಪಡೆಗಳಿಗೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net