ಪೊಲೀಸರ ಬಲೆಗೆ ಗುಜರಾತ್‌ನ ‘ಶ್ರೀಮಂತ’ ಕಳ್ಳ..ಕೋಟಿಗಟ್ಟಲೆ ಆಸ್ತಿ,ಆಡಿ ಕಾರು, ವಿಮಾನ ಪ್ರವಾಸ..!

theft
Published on

ಗಾಂಧಿನಗರ: ಗುಜರಾತ್ ಪೊಲೀಸರು ಇತ್ತೀಚೆಗೆ ಅಂತಾರಾಜ್ಯ ದರೋಡೆಕೋರನನ್ನು ಬಂಧಿಸಿದ್ದು, ಅವನು ಕಳ್ಳತನ ಮಾಡಲು ಐಷಾರಾಮಿ ಹೋಟೆಲ್‌ಗಳಲ್ಲಿ ತಂಗಿದ್ದು, ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮತ್ತು ಹಗಲಿನಲ್ಲಿ ಹೋಟೆಲ್ ಕ್ಯಾಬ್‌ಗಳನ್ನು ಬುಕ್ ಮಾಡುತ್ತಿದ್ದ ಎಂಬ ಅಂಶವನ್ನು ಪತ್ತೆಹಚ್ಚಿದ್ದಾರೆ.

ರೋಹಿತ್ ಸೋಲಂಕಿ ಬಂಧಿತ. ಅವನ ಬಳಿ ಮುಂಬೈನಲ್ಲಿ 1 ಕೋಟಿ ರೂ. ಬೆಲೆಬಾಳುವ ಫ್ಲಾಟ್, ಆಡಿ ಕಾರು ಇದೆ ಎಂದು ಪೊಲೀಸರ ತನಿಖೆಯಲ್ಲಿ ಕಂಡುಬಂದಿದೆ. ಗುಜರಾತ್‌ನ ‘ಶ್ರೀಮಂತ’ ಕಳ್ಳನ ಆಸ್ತಿ ಕಂಡು ಪೊಲೀಸರು ದಂಗಾಗಿಹೋಗಿದ್ದಾರೆ.

ಹಲವು ರಾಜ್ಯಗಳಲ್ಲಿ ಕಳ್ಳತನ ಮಾಡಿದ್ದ ರೋಹಿತ್​ ಇತ್ತೀಚೆಗೆ ಗುಜರಾತ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅವನನ್ನು ಖಾಕಿಗಳು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಆಗ ಕಳ್ಳತನ ದಲ್ಲಿ ಅವನ ಪಾಂಡಿತ್ಯವನ್ನು ಕಂಡು ಆಶ್ಚರ್ಯಪಟ್ಟಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಮುಂಬೈನ ಐಷಾರಾಮಿ ಪ್ರದೇಶವಾದ ಮುಂಬ್ರಾದಲ್ಲಿ ತನಗೆ ಪ್ಲಾಟ್ ಇದೆ ಎಂದು ಒಪ್ಪಿಕೊಂಡಿದ್ದಾನೆ. ಇದರ ಮೌಲ್ಯ ಕೋಟಿ ರೂ., ಇನ್ನು ಅವನ ಬಳಿ ಆಡಿ ಕಾರು ಕೂಡ ಇದೆ.

ಕಳ್ಳತನಕ್ಕಾಗಿ ವಿಮಾನಯಾನ ಕೈಗೊಳ್ಳುತ್ತಿದ್ದೆ. ಪಂಚತಾರಾ ಹೋಟೆಲ್‌ಗಳಲ್ಲಿ ತಂಗುತ್ತಿದ್ದೆ ಎಂದು ಸೋಲಂಕಿ ತನಿಖೆಯ ವೇಳೆ ಒಪ್ಪಿಕೊಂಡಿದ್ದಾನೆ.

ಸೋಲಂಕಿ 19 ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ವಲಾಡ್‌ನಲ್ಲಿ ಮೂರು, ಸೂರತ್‌ನಲ್ಲಿ ಒಂದು, ಪೋರಬಂದರ್‌ನಲ್ಲಿ ಒಂದು ಮತ್ತು ಸೆಲ್ವಾಲ್‌ನಲ್ಲಿ ಒಂದು ಪ್ರಕರಣ ದಾಖಲಾಗಿದೆ.

ಅದೇ ರೀತಿ ಈತನ ವಿರುದ್ಧ ತೆಲಂಗಾಣದಲ್ಲಿ ಎರಡು, ಆಂಧ್ರಪ್ರದೇಶದಲ್ಲಿ ಎರಡು, ಮಧ್ಯಪ್ರದೇಶದಲ್ಲಿ ಎರಡು ಮತ್ತು ಮಹಾರಾಷ್ಟ್ರದಲ್ಲಿ ಒಂದು ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ವಿವರಿಸಿದ್ದಾರೆ.

ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲೂ ಹಲವು ಕಳ್ಳತನ ಮಾಡಿರುವುದಾಗಿ ಸೋಲಂಕಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಸ್ಲಿಂ ಮಹಿಳೆಯನ್ನು ಮದುವೆಯಾಗಲು ಸೋಲಂಕಿ ತನ್ನ ಹೆಸರನ್ನು ಅರ್ಹಾನ್ ಎಂದು ಬದಲಾಯಿಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಸೋಲಂಕಿಗೆ ಡ್ರಗ್ಸ್ ಚಟವೂ ಇದೆ. ಮುಂಬೈನ ನೈಟ್ ಕ್ಲಬ್‌ಗಳು ಮತ್ತು ಡ್ಯಾನ್ಸ್ ಬಾರ್‌ಗಳಲ್ಲಿ ಮೋಜುಗಾಗಿ ಪಾಲ್ಗೊಳ್ಳುತ್ತಿದ್ದ. ಎಂದು ಗುಜರಾತ್ ಪೊಲೀಸರು ಹೇಳಿದ್ದಾರೆ. ಇವನ ಮಾಸಿಕ ವೆಚ್ಚ 1.50 ಲಕ್ಷ ರೂ. ಇತ್ತು ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net