ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯ ಮೇಲೆ ಟ್ಯೂಷನ್​ ಟೀಚರ್​ನಿಂದ ಲೈಂಗಿಕ ದೌರ್ಜನ್ಯ: ಸಲಿಂಗಕಾಮ ನಡೆಸಿರುವ ಶಂಕೆ

Boy
Published on

ಅಹಮಾದಾಬಾದ್​: ಹದಿನೈದು ವರ್ಷದ ಅಪ್ರಾಪ್ತ ಬಾಲಕನ ಮೇಲೆ 45 ವರ್ಷದ ಟ್ಯೂಷನ್​ ಶಿಕ್ಷಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಆತಂಕಕಾರಿ ಘಟನೆ ಗುಜರಾತ್​ ರಾಜಧಾನಿ ಅಹಮದಾಬಾದ್​ನ ಚಾಂದ್​ಖೀದ್​ ಏರಿಯಾದಲ್ಲಿ ನಡೆದಿದೆ.

ಆರೋಪಿಯನ್ನು ಗೋವಿಂದ್​ ಪಟೇಲ್​ ಎಂದು ಗುರುತಿಸಲಾಗಿದೆ. ಸಂತ್ರಸ್ತ ಬಾಲಕ 10ನೇ ತರಗತಿ ವಿದ್ಯಾರ್ಥಿ. ಬಾಲಕನ ತಂದೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯು ಅಪ್ರಾಪ್ತ ಬಾಲಕನ ಜೊತೆ ಅಶ್ಲೀಲವಾಗಿ ವರ್ತಿಸುವುದು ಸಾಮಾನ್ಯವಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬಾಲಕ ತನ್ನ ಪೋಷಕರಿಗೆ ತಿಳಿಸಿದ್ದಾನೆ. ಟ್ಯೂಷನ್ ಟೀಚರ್​, ಬಾಲಕನಿಗೆ ಕರೆ ಮಾಡಿ ಕೊಳಕು ಮಾತನಾಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆದರೆ, ಬಾಲಕನ ಜೊತೆ ಶಿಕ್ಷಕ ಸಲಿಂಗಕಾಮ ನಡೆಸಿರುವ ಬಗ್ಗೆ ದೂರಿನಲ್ಲಿ ತಿಳಿಸಿಲ್ಲ. ಆದರೆ, ನಡೆಸಿರಬಹುದು ಎಂದು ಶಂಕಿಸಲಾಗಿದೆ.

ಆರೋಪಿ ಪಟೇಲ್ ವಿರುದ್ಧ ಮಕ್ಕಳ ಲೈಂಗಿಕ ಅಪರಾಧಗಳ ರಕ್ಷಣೆ (ಪೊಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಎಸ್‌ಸಿ-ಎಸ್‌ಟಿ ಸೆಲ್‌ಗೆ ವರ್ಗಾಯಿಸಲಾಗುವುದು ಎಂದು ವರದಿಯಾಗಿದೆ. ಅಟ್ರಾಸಿಟಿ ಕಾಯ್ದೆಯಡಿ ದೂರು ಒಳಗೊಂಡಿರುವ ಕಾರಣ ಇದೀಗ ಹಿರಿಯ ಪೊಲೀಸ್ ಅಧಿಕಾರಿಯಿಂದ ಪ್ರಕರಣದ ತನಿಖೆ ನಡೆಯಲಿದೆ. ಟ್ಯೂಷನ್ ಸೆಂಟರ್‌ನ ಇತರ ವಿದ್ಯಾರ್ಥಿಗಳ ಮೇಲೂ ಆರೋಪಿ ಪಟೇಲ್, ಇದೇ ರೀತಿ ವರ್ತಿಸಿದ್ದಾರೆಯೇ ಎಂದು ತನಿಖೆ ನಡೆಸಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net